ಅಹಮದಾಬಾದ್ (ಗುಜರಾತ್): ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಅಂತಿಮ ಟೆಸ್ಟ್ನ ಎರಡನೇ ದಿನವಾದ ಇಂದು ಟೀ ಅವಧಿಯ ನಂತರ ಆಸ್ಟ್ರೇಲಿಯಾವನ್ನು 480ಕ್ಕೆ ಆಲ್ಔಟ್ ಆಗಿದೆ. ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಎರಡನೇ ದಿನದ ಆಟದ ಅಂತ್ಯಕ್ಕೆ 36 ರನ್ ಗಳಸಿದೆ. ಭಾರತ ಇನ್ನೂ 444 ರನ್ ಗಳಿಸ ಬೇಕಿದೆ. ಆರಂಭಿಕರಾದ ಶುಭಮನ್ ಗಿಲ್ 18 ಮತ್ತು ರೋಹಿತ್ ಶರ್ಮಾ 17 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ನಿನ್ನೆ 255ಕ್ಕೆ ನಾಲ್ಕು ವಿಕೆಟ್ ನಷ್ಟದೊಂದಿಗೆ ದಿನ ಅಂತ್ಯವಾಗಿತ್ತು. ಶತಕ ಗಳಿಸಿ ಉಸ್ಮಾನ್ ಖವಾಜಾ(104*) ಮತ್ತು 49* ರನ್ ಗಳಿಸಿದ ಗ್ರೀನ್ ಕ್ರಿಸ್ನಲ್ಲಿದ್ದರು. ಇಂದು ಎರಡನೇ ದಿನದ ಪಂದ್ಯ ಆರಂಭವಾಗುತ್ತಿದ್ದಂತೆ ಗ್ರೀನ್ ಅರ್ಧ ಶತಕ ಪೂರ್ಣಗೊಳಿಸಿದರು. ಭೋಜನ ವಿರಾಮದ ವೇಳೆಗೆ ಆಸಿಸ್ ಯಾವುದೇ ವಿಕೆಟ್ ಕಳೆದುಕೊಳ್ಳದೇ ನಿನ್ನೆಯ ರನ್ಗೆ 92 ರನ್ ಸೇರಿಸಿ ಪ್ರಥಮ ಅವಧಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.
-
𝗦𝗽𝗲𝗰𝗶𝗮𝗹 𝗳𝗲𝗮𝘁!
— BCCI (@BCCI) March 10, 2023 " class="align-text-top noRightClick twitterSection" data="
Congratulations to @ashwinravi99 who now is the leading-wicket taker among Indian bowlers against Australia and also the joint-leading wicket-taker in the Border-Gavaskar Trophy with 113 wickets.#INDvAUS #TeamIndia pic.twitter.com/MRwLWEnP4v
">𝗦𝗽𝗲𝗰𝗶𝗮𝗹 𝗳𝗲𝗮𝘁!
— BCCI (@BCCI) March 10, 2023
Congratulations to @ashwinravi99 who now is the leading-wicket taker among Indian bowlers against Australia and also the joint-leading wicket-taker in the Border-Gavaskar Trophy with 113 wickets.#INDvAUS #TeamIndia pic.twitter.com/MRwLWEnP4v𝗦𝗽𝗲𝗰𝗶𝗮𝗹 𝗳𝗲𝗮𝘁!
— BCCI (@BCCI) March 10, 2023
Congratulations to @ashwinravi99 who now is the leading-wicket taker among Indian bowlers against Australia and also the joint-leading wicket-taker in the Border-Gavaskar Trophy with 113 wickets.#INDvAUS #TeamIndia pic.twitter.com/MRwLWEnP4v
ಎರಡನೇ ಸೆಷನ್ನಲ್ಲಿ ಅಶ್ವಿನ್ ಕೈಚಳಕ: ಭೋಜನದ ನಂತರ ಅಶ್ವಿನ್ ಕೈಚಳಕ ಕೆಲಸ ಮಾಡಿದ್ದು ಮೂರು ವಿಕೆಟ್ ಪಡೆದುಕೊಂಡರು. ಭೊಜನ ವಿರಾಮ ನಂತರ ಶತಕ ಗಳಿಸಿದ ಗ್ರೀನ್ರನ್ನು ಅಶ್ವಿನ್ ಪೆವಿಲಿಯನ್ಗೆ ಕಳಿಸಿದರು. ಅವರ ನಂತರ ಬಂದ ಅಲೆಕ್ಸ್ ಕ್ಯಾರಿ (0) ಮತ್ತು ಮಿಚೆಲ್ ಸ್ಟಾರ್ಕ್ (6) ಅವರನ್ನು ಆರ್ ಅಶ್ವಿನ್ ಔಟ್ ಮಾಡಿದರು. ಟೀ ವಿರಾಮದ ವೇಳೆಗೆ ಆಸಿಸ್ 7 ವಿಕೆಟ್ ನಷ್ಟಕ್ಕೆ 409 ರನ್ ಗಳಸಿತ್ತು. ಊಟದ ನಂತರ ಮೂರು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ 62 ಮಾತ್ರ ಗಳಿಸಿತ್ತು.
ಟೀ ವಿರಾಮದ ನಂತರ 180 ರನ್ ಗಳಿಸಿ ಆಡುತ್ತಿದ್ದ ಉಸ್ಮಾನ್ ಖವಾಜಾರನ್ನು ಅಕ್ಷರ್ ಪಟೇಲ್ ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ನಂತರ ನಾಥನ್ ಲಿಯಾನ್ ಮತ್ತು ಮಾರ್ಫಿ ಕ್ರೀಸ್ನಲ್ಲಿ ರನ್ ಕಲೆ ಹಾಕಿದರು. 34 ರನ್ ಗಳಿಸಿ ಆಡುತ್ತಿದ್ದ ಲಿಯಾನ್ ಮತ್ತು 41 ರನ್ ಗಳಿಸಿದ್ದ ಮಾರ್ಫಿ ಅಶ್ವಿನ್ ಬೌಲಿಂಗ್ಗೆ ಬಲಿಯಾದರು. ಅಶ್ವಿನ್ ಈ ಇನ್ನಿಂಗ್ಸ್ನಲ್ಲಿ ಒಟ್ಟು 6 ವಿಕೆಟ್ ಪಡೆದು ಕೊಂಡರು.
-
This has been yet another marvellous bowling performance from the senior spinner @ashwinravi99 💪💪
— BCCI (@BCCI) March 10, 2023 " class="align-text-top noRightClick twitterSection" data="
This is his 26th 5-wicket haul in India, the most by any bowler! 🙌🏽🫡#INDvAUS @mastercardindia pic.twitter.com/hH3ySuOsEY
">This has been yet another marvellous bowling performance from the senior spinner @ashwinravi99 💪💪
— BCCI (@BCCI) March 10, 2023
This is his 26th 5-wicket haul in India, the most by any bowler! 🙌🏽🫡#INDvAUS @mastercardindia pic.twitter.com/hH3ySuOsEYThis has been yet another marvellous bowling performance from the senior spinner @ashwinravi99 💪💪
— BCCI (@BCCI) March 10, 2023
This is his 26th 5-wicket haul in India, the most by any bowler! 🙌🏽🫡#INDvAUS @mastercardindia pic.twitter.com/hH3ySuOsEY
ಅಶ್ವಿನ್ ದಾಖಲೆಯ ವಿಕೆಟ್ ಗಳಿಕೆ: ರವಿಚಂದ್ರನ್ ಅಶ್ವಿನ್ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 113 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಪ್ರತಿಷ್ಠಿತ ಟ್ರೋಫಿಯಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಪಟ್ಟಿಯಲ್ಲಿ ಅಶ್ವಿನ್ ಸ್ಥಾನ ಪಡೆದಿದ್ದಾರೆ. ಅಲ್ಲದೇ ಆಸಿಸ್ ವಿರುದ್ಧ ಹೆಚ್ಚು ಪರಿಣಾಮ ಕಾರಿ ಬೌಲರ್ ಆಗಿದ್ದಾರೆ. 26 ಸಲ ಭಾರತದಲ್ಲಿ 5 ವಿಕೆಟ್ ಪಡೆದಿದ್ದಾರೆ. ಒಟ್ಟು 32 ಬಾರಿ ಪಂಚ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಗ್ರೀನ್ ಶತಕ: ಈ ಸರಣಿಯಲ್ಲಿ ಆಸಿಸ್ ಪರ ಎರಡನೇ ಶತಕ ದಾಖಲಾಗಿದೆ. ಮೊದಲ ದಿನ ಉಸ್ಮಾನ್ ಖವಾಜಾ ಶತಕ ಗಳಿಸಿ, ಈ ಬಾರ್ಡರ್-ಗವಾಸ್ಕರ್ ಟ್ರೋಫಿಯ ಶತಕ ಗಳಿಸಿದ ಮೊದಲ ಆಟಗಾರರಾಗಿದ್ದರು. ಶತಕ ಗಳಿಸಿ ಆಡುತ್ತಿದ್ದ ಗ್ರೀನ್ (114) ವಿಕೆಟ್ನ್ನು ಅಶ್ವಿನ್ ಪಡೆದರು. ಈ ಮೂಲಕ ಭಾರತ ಎರಡನೇ ದಿನದ ಮೊದಲ ವಿಕೆಟ್ ಪಡೆಯಿತು.
-
Ashwin takes six as Australia are finally bowled out.#WTC23 | #INDvAUS | 📝 https://t.co/VJoLfVSeIF pic.twitter.com/JAyJ15GG8o
— ICC (@ICC) March 10, 2023 " class="align-text-top noRightClick twitterSection" data="
">Ashwin takes six as Australia are finally bowled out.#WTC23 | #INDvAUS | 📝 https://t.co/VJoLfVSeIF pic.twitter.com/JAyJ15GG8o
— ICC (@ICC) March 10, 2023Ashwin takes six as Australia are finally bowled out.#WTC23 | #INDvAUS | 📝 https://t.co/VJoLfVSeIF pic.twitter.com/JAyJ15GG8o
— ICC (@ICC) March 10, 2023
150 ದಾಖಲಿಸಿದ ಖವಾಜಾ: ಖವಾಜಾ ಆರಂಭಿಕರಾಗಿ ಬಂದು ಭಾರತೀಯ ಬೌಲರ್ಗಳನ್ನು ಜಾಗ್ರತೆಯಿಂದ ಎದುರಿಸಿ ನಿನ್ನೆ ಶತಕ (104*) ಪೂರೈಸಿಕೊಂಡಿದ್ದರು. ಎರಡನೇ ದಿನ ಆರಂಭವಾಗುತ್ತಿದ್ದಂತೆ ನಿನ್ನೆಯ ಆಟ ಮುಂದುವರೆಸಿದ ಅವರು ಪ್ರಥಮ ವಿರಾಮದ ವೇಳೆಗೆ 46 ರನ್ ಪೇರಿಸಿ 150 ರನ್ ಗಳಿಸಿದ್ದಾರೆ.
ಬೌಲರ್ಗಳು ವಿಫಲ: ಕಳೆದ ಮೂರು ಪಂದ್ಯಗಳಲ್ಲಿ ಬೌಲರ್ಗಳು ಪಾರಮ್ಯ ಮೆರೆದಿದ್ದರು. ಆದರೆ ಈ ಪಂದ್ಯದಲ್ಲಿ ಬ್ಯಾಟರ್ಗಳು ಉತ್ತಮ ರನ್ ಕಲೆಹಾಕುತ್ತಿದ್ದಾರೆ. ಗುರುವಾರದ ಕೊನೆಯ ಸೆಷನ್ನಲ್ಲಿ ಎರಡು ವಿಕೆಟ್ ಪಡೆದ ನಂತರ ಭಾರತೀಯ ಬೌಲರ್ಗಳಿಗೆ ಆಸಿಸ್ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಕಳಿಸಲಾಗುತ್ತಿಲ್ಲ. ನಿನ್ನೆ ಶಮಿ ಎರಡು ವಿಕೆಟ್, ಅಶ್ವಿನ್ ಮತ್ತು ಜಡೇಜಾ ತಲಾ 1 ವಿಕೆಟ್ ಪಡೆದುಕೊಂಡಿದ್ದರು.
-
We are deeply saddened at the passing of Maria Cummins overnight. On behalf of Australian Cricket, we extend our heartfelt condolences to Pat, the Cummins family and their friends. The Australian Men's team will today wear black armbands as a mark of respect.
— Cricket Australia (@CricketAus) March 10, 2023 " class="align-text-top noRightClick twitterSection" data="
">We are deeply saddened at the passing of Maria Cummins overnight. On behalf of Australian Cricket, we extend our heartfelt condolences to Pat, the Cummins family and their friends. The Australian Men's team will today wear black armbands as a mark of respect.
— Cricket Australia (@CricketAus) March 10, 2023We are deeply saddened at the passing of Maria Cummins overnight. On behalf of Australian Cricket, we extend our heartfelt condolences to Pat, the Cummins family and their friends. The Australian Men's team will today wear black armbands as a mark of respect.
— Cricket Australia (@CricketAus) March 10, 2023
ಕಮಿನ್ಸ್ಗೆ ಮಾತೃ ವಿಯೋಗ: ಬಹುಕಾಲದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಆಸಿಸ್ ಆಟಗಾರ ಪ್ಯಾಟ್ ಕಮಿನ್ಸ್ ತಾಯಿ ಇಂದು ವಿಧಿವಶರಾಗಿದ್ದಾರೆ. ಆಸ್ಟ್ರೇಲಿಯಾ ತಂಡ ಇಂದು ಟೆಸ್ಟ್ ಮ್ಯಾಚ್ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಈ ಕಾರಣಕ್ಕಾಗಿ ಕಪ್ಪು ಪಟ್ಟಿ ಧರಿಸಿ ಆಡುತ್ತಿದ್ದಾರೆ. ತಾಯಿಯ ತೀವ್ರ ಅನಾರೋಗ್ಯದ ಕಾರಣ ಮೂರನೇ ಟೆಸ್ಟ್ ಸಂದರ್ಭದಲ್ಲಿ ಪ್ಯಾಟ್ ಕಮಿನ್ಸ್ ತವರಿಗೆ ಮರಳಿದ್ದರು. ನಾಲ್ಕನೇ ಟೆಸ್ಟ್ ವೇಳೆಗೆ ತಂಡ ಸೇರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ತಾಯಿಯ ಅನಾರೋಗ್ಯ ಹೆಚ್ಚಾಗಿದ್ದರಿಂದ ಸ್ಮಿತ್ ನಾಲ್ಕನೇ ಟೆಸ್ಟ್ನ ನಾಯಕತ್ವವನ್ನು ಮುಂದುವರೆಸಿದ್ದರು.
ಇದನ್ನೂ ಓದಿ: ಭಾರತ ಮತ್ತು ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್: ಖವಾಜಾ ಶತಕ, ಗ್ರೀನ್ ಅರ್ಧಶತಕಕ್ಕೆ ಒಂದೇ ಹೆಜ್ಜೆ ಬಾಕಿ