ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ನಾಗ್ಪುರ ಟೆಸ್ಟ್‌ನಲ್ಲಿ ಕಾಂಗರೂಗಳನ್ನು ಸೋಲಿಸಿದ ನಂತರ, ರೋಹಿತ್ ಶರ್ಮಾ ಬಳಕ ದೆಹಲಿಯಲ್ಲೂ ಪ್ರವಾಸಿಗರನ್ನು ಸೋಲಿಸುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲು ಕಣ್ಣಿಟ್ಟಿದ್ದಾರೆ.
-
🚨 Toss Update from Arun Jaitley Stadium 🚨
— BCCI (@BCCI) February 17, 2023 " class="align-text-top noRightClick twitterSection" data="
Australia have elected to bat against #TeamIndia in the second #INDvAUS Test.
Follow the match ▶️ https://t.co/hQpFkyZGW8 @mastercardindia pic.twitter.com/7tE78dLYVi
">🚨 Toss Update from Arun Jaitley Stadium 🚨
— BCCI (@BCCI) February 17, 2023
Australia have elected to bat against #TeamIndia in the second #INDvAUS Test.
Follow the match ▶️ https://t.co/hQpFkyZGW8 @mastercardindia pic.twitter.com/7tE78dLYVi🚨 Toss Update from Arun Jaitley Stadium 🚨
— BCCI (@BCCI) February 17, 2023
Australia have elected to bat against #TeamIndia in the second #INDvAUS Test.
Follow the match ▶️ https://t.co/hQpFkyZGW8 @mastercardindia pic.twitter.com/7tE78dLYVi
ದೆಹಲಿ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆಲುವು ಹಲವು ರೀತಿಯಲ್ಲಿ ವಿಶೇಷವಾಗಿರುತ್ತದೆ. ಭಾರತ ತಂಡ ಎರಡನೇ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದರೆ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಪಡೆಯಲಿದ್ದು, ಈ ಗೆಲುವಿನೊಂದಿಗೆ ಭಾರತ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಹತ್ತಿರವಾಗಲಿದೆ. ಭಾರತ ಪ್ರಸ್ತುತ WTC ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಸರಣಿಯಲ್ಲಿ ಪುನರಾಗಮನದ ಮೇಲೆ ಕಣ್ಣಿಟ್ಟಿದೆ.
ಆಸ್ಟ್ರೇಲಿಯಾ ಮತ್ತು ಭಾರತ (IND vs AUS) ನಡುವೆ ಒಟ್ಟು 103 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ, ಇದರಲ್ಲಿ ಆಸ್ಟ್ರೇಲಿಯಾವು ಮೇಲುಗೈ ಹೊಂದಿದೆ. ಆಸ್ಟ್ರೇಲಿಯಾ ತಂಡ 43ರಲ್ಲಿ ಗೆದ್ದಿದ್ದರೆ, ಭಾರತ 31 ಪಂದ್ಯಗಳನ್ನು ಗೆದ್ದಿದೆ. ಇಬ್ಬರ ನಡುವೆ 28 ಡ್ರಾ ನಡೆದಿದ್ದು, ಒಂದು ಪಂದ್ಯ ಟೈ ಆಗಿದೆ. ಆದರೆ, ಭಾರತ ತಂಡ ತವರಿನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಇವರಿಬ್ಬರ ನಡುವೆ ಭಾರತದ ನೆಲದಲ್ಲಿ 51 ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ 22 ಪಂದ್ಯಗಳನ್ನು ಗೆದ್ದಿದೆ. ಆಸ್ಟ್ರೇಲಿಯಾ 13 ಪಂದ್ಯಗಳನ್ನು ಗೆದ್ದಿದ್ದು, ಉಭಯ ತಂಡಗಳ ನಡುವೆ 15 ಪಂದ್ಯಗಳು ಡ್ರಾ ಆಗಿದ್ದರೆ, ಒಂದು ಪಂದ್ಯ ಟೈ ಆಗಿದೆ.
ಚೇತೇಶ್ವರ ಪೂಜಾರ್ಗೆ 100 ಟೆಸ್ಟ್ ಪಂದ್ಯ: ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ತಮ್ಮ ವೃತ್ತಿಜೀವನದ 100ನೇ ಟೆಸ್ಟ್ ಆಡಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನು ಆಡಿದ 13 ನೇ ಭಾರತೀಯ ಆಟಗಾರನಾಗಲಿದ್ದಾರೆ. ಈ ಟೆಸ್ಟ್‌ನಲ್ಲಿ ಪೂಜಾರ ಶತಕ ಸಿಡಿಸಿದರೆ, 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ವಿಶ್ವದ 10 ಬ್ಯಾಟ್ಸ್‌ಮನ್‌ಗಳು ಮಾತ್ರ 100ನೇ ಟೆಸ್ಟ್‌ನಲ್ಲಿ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್‌ನ ಕಾಲಿನ್ ಕೌಡ್ರೆ 100ನೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಮೊದಲ ಕ್ರಿಕೆಟಿಗ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಕೆಎಸ್ ಭರತ್ (ಕೀಪರ್), ಆರ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್..
ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಪೀಟರ್ ಹ್ಯಾಂಡ್ಸ್ಕಾಂಬ್, ಅಲೆಕ್ಸ್ ಕ್ಯಾರಿ (ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಟಾಡ್ ಮರ್ಫಿ, ನಾಥನ್ ಲಿಯಾನ್, ಮ್ಯಾಥ್ಯೂ ಕುಹ್ನೆಮನ್..
ದೆಹಲಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದುವರೆಗೆ ಒಟ್ಟು 7 ಟೆಸ್ಟ್‌ಗಳನ್ನು ಆಡಲಾಗಿದ್ದು, ಇದರಲ್ಲಿ ಅತಿಥಿಗಳು ಕೇವಲ 1 ರಲ್ಲಿ ಮಾತ್ರ ಗೆದ್ದಿದ್ದಾರೆ. ಕಾಂಗರೂಗಳು 1959 ರಲ್ಲಿ ಈ ವಿಜಯವನ್ನು ಪಡೆದಿದ್ದರು, ನಂತರ ಆಸ್ಟ್ರೇಲಿಯಾ ದೆಹಲಿಯಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾಗಲಿಲ್ಲ.
ಓದಿ: ಭಾರತಕ್ಕಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವುದು ನನ್ನ ಕನಸು: ಚೇತೇಶ್ವರ ಪೂಜಾರ