ನಾಗ್ಪುರ(ಮಹಾರಾಷ್ಟ್ರ): ಪ್ರವಾಸಿ ಆಸ್ಟ್ರೇಲಿಯಾ ಆತಿಥೇಯ ಭಾರತದ ನಡುವೆ ಇಂದು ಎರಡನೇ ಟಿ-20 ಪಂದ್ಯ ನಡೆಯಲಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 208ರನ್ಗಳಿಕೆ ಮಾಡಿದ ಹೊರತಾಗಿ ಕೂಡ ಬೌಲರ್ಗಳ ಕಳಪೆ ಪ್ರದರ್ಶನದಿಂದಾಗಿ ರೋಹಿತ್ ಬಳಗ ಸೋಲು ಕಂಡಿದೆ. ಹೀಗಾಗಿ, ಸರಣಿಯಲ್ಲಿ ಜೀವಂತವಾಗಿ ಉಳಿದುಕೊಳ್ಳಲು ಈ ಪಂದ್ಯ ಭಾರತಕ್ಕೆ ಮಹತ್ವದಾಗಿದೆ.
ವಡೋದರಾ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಸಂಜೆ 7:30ಕ್ಕೆ ಪಂದ್ಯ ಆರಂಭಗೊಳ್ಳಲಿದ್ದು, ಮತ್ತಷ್ಟು ಹೊಸ ಯೋಜನೆಗಳೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಆದರೆ, ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾ ತಂಡ ಇಂದಿನ ಪಂದ್ಯದಲ್ಲಿ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.
ಭಾರತದ ಆಡುವ 11ರ ಬಳಗ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯಾ, ದಿನೇಶ್ ಕಾರ್ತಿಕ್,ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್
ಆಸ್ಟ್ರೇಲಿಯಾ ತಂಡ: ಆರೋನ್ ಫಿಂಚ್, ಕ್ಯಾಮ್ರೊನ್ ಗ್ರೀನ್, ಸ್ಟಿವ್ ಸ್ಮೀತ್, ಗ್ಲೇನ್ ಮ್ಯಾಕ್ಸವೆಲ್, ಜೋಶ್ ಇಂಗಾಲ್ಸ್, ಥಿಮ್ ಡೇವಿಡ್, ಮ್ಯಾಥ್ಯೋ ವೆಡ್, ಪ್ಯಾಟ್ ಕಮಿನ್ಸ್, ನಾಥನ್, ಆಡ್ಯಂ ಜಂಪಾ, ಜೋಶ್ ಹ್ಯಾಜಲ್ವುಡ್
ಒತ್ತಡದಲ್ಲಿ ರೋಹಿತ್ ಬಳಗ: 200 ರನ್ಗಳಿಕೆ ಮಾಡಿದ ಹೊರತಾಗಿ ಕೂಡ ಸೋಲು ಕಂಡಿರುವ ರೋಹಿತ್ ಬಳಗಕ್ಕೆ ಬೌಲಿಂಗ್ ವಿಭಾಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಿಶ್ವಕಪ್ ಆರಂಭಗೊಳ್ಳಲು ಕೆಲ ದಿನಗಳು ಮಾತ್ರ ಬಾಕಿ ಉಳಿದಿರುವ ಸಂದರ್ಭದಲ್ಲಿ ಈ ಸೋಲು ತಂಡವನ್ನ ಮತ್ತಷ್ಟು ಚಿಂತೆಗೆ ದೂಡಿದೆ. ಮೈದಾನದಲ್ಲಿ ಕಳಪೆ ಬ್ಯಾಟಿಂಗ್, ಬೌಲರ್ಗಳ ಕಳಪೆ ಪ್ರದರ್ಶನ, ಡೆತ್ ಓವರ್ಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬರದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತದ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ತಂಡ ಮೊದಲ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿದೆ. ಆದರೆ,ತಂಡದಲ್ಲಿ ಬೌಲರ್ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಂದಿಲ್ಲ. ಹೀಗಾಗಿ, ಇಂದಿನ ಪಂದ್ಯದಲ್ಲಿ ಸುಧಾರಣೆ ಕಾಣುವ ದೃಷ್ಟಿಯಿಂದ ಕಣಕ್ಕಿಳಿಯಲಿದೆ. ಆದರೆ, ಬ್ಯಾಟಿಂಗ್ ವಿಭಾಗ ಸದೃಢವಾಗಿದ್ದು, ಪಿಂಚ್ ಹಾಗೂ ಮ್ಯಾಕ್ಸವೆಲ್ ಬ್ಯಾಟ್ನಿಂದ ರನ್ ಹರಿದು ಬರಬೇಕಾಗಿದೆ.