ಇಂದೋರ್ (ಮಧ್ಯಪ್ರದೇಶ): ವಿಶ್ವಕಪ್ಗೂ ಮುನ್ನ ಭಾರತದ ಬ್ಯಾಟರ್ಗಳು ತಂಡದ ಮೇಲೆ ವಿಶ್ವಾಸವನ್ನು ಹೆಚ್ಚಿಸಿದ್ದಾರೆ ಎಂದರೆ ತಪ್ಪಾಗದು. ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾದ ವಿರುದ್ಧದ ಎರಡನೇ ಏದಕದಿನ ಪಂದ್ಯದಲ್ಲಿ ಶತಕವನ್ನು ಗಳಿಸಿ ಸಂಭ್ರಮಿಸಿದರು. ಶ್ರೇಯಸ್ ಅಯ್ಯರ್ ತಮ್ಮ ಮೂರನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಗಳಿಸಿದರೆ, ಶುಭಮನ್ ಗಿಲ್ 6ನೇ ಶತಕವನ್ನು ಗಳಿಸಿದರು.
-
End of a fantastic knock 👏👏
— BCCI (@BCCI) September 24, 2023 " class="align-text-top noRightClick twitterSection" data="
Shreyas Iyer departs after scoring 105 off just 90 deliveries.
Follow the Match ▶️ https://t.co/OeTiga5wzy#TeamIndia | #INDvAUS | @IDFCFIRSTBank pic.twitter.com/4hVNAI1JJL
">End of a fantastic knock 👏👏
— BCCI (@BCCI) September 24, 2023
Shreyas Iyer departs after scoring 105 off just 90 deliveries.
Follow the Match ▶️ https://t.co/OeTiga5wzy#TeamIndia | #INDvAUS | @IDFCFIRSTBank pic.twitter.com/4hVNAI1JJLEnd of a fantastic knock 👏👏
— BCCI (@BCCI) September 24, 2023
Shreyas Iyer departs after scoring 105 off just 90 deliveries.
Follow the Match ▶️ https://t.co/OeTiga5wzy#TeamIndia | #INDvAUS | @IDFCFIRSTBank pic.twitter.com/4hVNAI1JJL
ಅಯ್ಯರ್ ಕಮ್ಬ್ಯಾಕ್: ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಕಾರಣಕ್ಕೆ ತಂಡದಿಂದ ಹೊರಗುಳಿದ ನಂತರ ಐಪಿಎಲ್ನ್ನು ಸಹ ಮಿಸ್ ಮಾಡಿಕೊಂಡಿದ್ದರು. ವಿದೇಶಕ್ಕೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಚೇತರಿಸಿಕೊಂಡರು. ಸಂಪೂರ್ಣ ಫಿಟ್ ಆಗಿದ್ದ ಅಯ್ಯರ್ ಏಷ್ಯಾಕಪ್ನಲ್ಲಿ ತಂಡಕ್ಕೆ ಮರಳಿದರು.
ಲಂಕಾದಲ್ಲಿ ಒಂದು ಪಂದ್ಯವನ್ನು ಆಡಿದ ಅಯ್ಯರ್ ಮತ್ತೆ ಬೆನ್ನು ನೋವಿಗೆ ತುತ್ತಾಗಿದ್ದರು. ನಂತರ ಏಷ್ಯಾಕಪ್ನಲ್ಲಿ ಅವರಿಗೆ ಸಿಕ್ಕಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಆದ ಅಯ್ಯರ್ ಮೊದಲ ಪಂದ್ಯದಲ್ಲಿ 3 ರನ್ ಗಳಿಸಿದ್ದಾಗ ರನ್ ಔಟ್ ಆಗಿ ಪೆವಿಲಿಯನ್ಗೆ ಮರಳಿದ್ದರು.
-
📸💯#TeamIndia | #INDvAUS | @IDFCFIRSTBank pic.twitter.com/EMz50ZaTqO
— BCCI (@BCCI) September 24, 2023 " class="align-text-top noRightClick twitterSection" data="
">📸💯#TeamIndia | #INDvAUS | @IDFCFIRSTBank pic.twitter.com/EMz50ZaTqO
— BCCI (@BCCI) September 24, 2023📸💯#TeamIndia | #INDvAUS | @IDFCFIRSTBank pic.twitter.com/EMz50ZaTqO
— BCCI (@BCCI) September 24, 2023
ಇಂದಿನ ಇನ್ನಿಂಗ್ಸ್ನಲ್ಲಿ ಅಯ್ಯರ್ 86 ಬಾಲ್ ಎದುರಿಸಿ ಶತಕವನ್ನು ಗಳಿಸಿದರು. ಶತಕದ ನಂತರ ರನ್ನ ವೇಗ ಹೆಚ್ಚಿಸಲು ಹೋದ ಅಯ್ಯರ್ ಅಬಾಟ್ ಬೌಲಿಂಗ್ನಲ್ಲಿ ವಿಕೆಟ್ ಕೊಟ್ಟರು. ಇನ್ನಿಂಗ್ಸ್ನಲ್ಲಿ ಅಯ್ಯರ್ 90 ಬಾಲ್ನಲ್ಲಿ 11 ಬೌಂಡರಿ ಮತ್ತು 3 ಸಿಕ್ಸ್ನಿಂದ 105 ರನ್ ಗಳಿಸಿ ವಿಕೆಟ್ ಕೊಟ್ಟರು.
6ನೇ ಶತಕ ಗಳಿಸಿದ ಗಿಲ್: ಶುಭಮನ್ ಗಿಲ್ ತಮ್ಮ 6ನೇ ಏಕದಿನ ಶತವನ್ನುಮತ್ತು ಈ ವರ್ಷದ 5ನೇ ಏಕದಿನ ಶತಕವನ್ನು ಗಳಸಿದರು. ಈ ವರ್ಷ ಅವರು ಏಕದಿನ ಕ್ರಿಕೆಟ್ನಲ್ಲಿ 1200 ರನ್ ಗಡಿ ದಾಟಿದ್ದಾರೆ. ಈ ವರ್ಷ ಗಿಲ್ ಗೋಲ್ಡನ್ ಫಾರ್ಮ್ನಲ್ಲಿದ್ದಾರೆ. ಒಟ್ಟಾರೆ 39 ಅಂತಾರಾಷ್ಟ್ರೀಯ ಇನ್ನಿಂಗ್ಸ್ನಲ್ಲಿ 7 ಶತಕ ಅವರ ಬ್ಯಾಟ್ನಿಂದ ಬಂದಿದೆ. ವಿರಾಟ್, ಸಚಿನ್ ರೋಹಿತ್ ರೀತಿ ವರ್ಷದಲ್ಲಿ 5 ಶತಕ ಗಳಿಸಿ ದಾಖಲೆ ಮಾಡಿದ್ದಾರೆ.
ಇನ್ನಿಂಗ್ಸ್ನಲ್ಲಿ 92 ಬಾಲ್ ಅಡಿದ ಗಿಲ್ 6 ಬೌಂಡರಿ ಮತ್ತು 4 ಸಿಕ್ಸ್ನ ಸಹಾಯದಿಂದ ಶತಕ ಗಳಿಸಿದರು. ಆದರೆ ಶತಕದ ನಂತರ ದೊಡ್ಡ ಹೊಡೆತಕ್ಕೆ ಮುಂದಾದ ಗಿಲ್ ಟಾಪ್ ಎಡ್ಜ್ಗೆ ಬಲಿಯಾದರು. ಇನ್ನಿಂಗ್ಸ್ ಅಂತ್ಯಕ್ಕೆ 97 ಬಾಲ್ಗೆ 104 ರನ್ ಗಳಿಸಿ ವಿಕೆಟ್ ಕೊಟ್ಟಿದ್ದರು.
ಆಸ್ಟ್ರೇಲಿಯಾ ವಿರುದ್ಧ 4ನೇ ದೊಡ್ಡ ಜೊತೆಯಾಟ: ಆಸ್ಟ್ರೇಲಿಯಾ ವಿರುದ್ಧ ಅಯ್ಯರ್ ಮತ್ತು ಗಿಲ್ 200 ರನ್ನ ಜೊತೆಯಾಟ ಮಾಡಿದರು. ಇದು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ದೊಡ್ಡ ಜೊತೆಯಾಟವಾಗಿದೆ. 2004 ರಲ್ಲಿ ಲಕ್ಷ್ಮಣ್ ಮತ್ತು ಯುವಿ 213, 2016 ರಲ್ಲಿ ವಿರಾಟ್ - ಶಿಖರ್ 212 ಮತ್ತು 2016ರಲ್ಲೇ ವಿರಾಟ್ ರೋಹಿತ್ 207 ರನ್ನ ಜೊತೆಯಾಟ ಮಾಡಿದ್ದರು.
ಇದನ್ನೂ ಓದಿ: Asian Games: ಉಜ್ಬೇಕಿಸ್ತಾನ ಮಣಿಸಿ ಹಾಕಿಯಲ್ಲಿ ಶುಭಾರಂಭ ಮಾಡಿದ ಭಾರತ..