ETV Bharat / sports

ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ: ಮಧ್ಯಮ ಕ್ರಮಾಂಕ, ಬೌಲಿಂಗ್​ ಪಡೆಗೆ ಬೇಕು ಬಲ - ಈಟಿವಿ ಭಾರತ ಕನ್ನಡ ನ್ಯೂಸ್​

ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ವಿಶ್ವಕಪ್​ಗೂ ಮುನ್ನ ನಡೆಯುವ ಈ ಸರಣಿ ಬ್ಯಾಟಿಂಗ್​, ಬೌಲಿಂಗ್​ ಪಡೆಯನ್ನು ಬಲಪಡಿಸಲು ವೇದಿಕೆಯಾಗಿದೆ.

india v/s  australia t20 series preview
ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ
author img

By

Published : Sep 19, 2022, 4:59 PM IST

ಮೊಹಾಲಿ: ಕಾಂಗರೂ ನಾಡಿನಲ್ಲಿ ನಡೆಯುವ ಟಿ20 ವಿಶ್ವಕಪ್​ಗೆ ಸಿದ್ಧತೆಯ ಭಾಗವಾಗಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ನಾಳೆಯಿಂದ ಶುರುವಾಗಲಿದೆ. ತವರಿನಲ್ಲಿ ನಡೆಯುವ ಸರಣಿಯನ್ನು ಗೆದ್ದು ಟೀಂ ಇಂಡಿಯಾ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ಇರಾದೆಯಲ್ಲಿದೆ. ಅಲ್ಲದೇ, ತಂಡದ ಬ್ಯಾಟಿಂಗ್​ ಮತ್ತು ಬೌಲಿಂಗ್​ ಯೋಜನೆಯನ್ನು ರೂಪಿಸಲು ಈ ಸರಣಿ ನೆರವಾಗಲಿದೆ.

ಭಾರತ ತಂಡ ವಿಶೇಷವಾಗಿ ಮಧ್ಯಮ ಕ್ರಮಾಂಕದ ಸಂಯೋಜನೆಯನ್ನು ಬಲಪಡಿಸಬೇಕಿದೆ. ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ 6ನೇ ಬೌಲರ್​ ಅನ್ನು ವಿಶ್ವಕಪ್​ಗೂ ಮೊದಲು ಸಜ್ಜು ಮಾಡಬೇಕಿದೆ. ಏಷ್ಯಾಕಪ್‌ನಲ್ಲಿ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ, ಟೂರ್ನಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿತ್ತು.

ಭುವನೇಶ್ವರ್​ ಕುಮಾರ್​, ಅರ್ಷದೀಪ್​ ಸಿಂಗ್​, ಆವೇಶ್​ಖಾನ್​ ಇದ್ದರೂ ಬೌಲಿಂಗ್​ ವಿಭಾಗ ಕಳಾಹೀನವಾಗಿತ್ತು. ಹರ್ಷಲ್ ಪಟೇಲ್ ಮತ್ತು ಜಸ್ಪ್ರೀತ್ ಬೂಮ್ರಾ ತಂಡಕ್ಕೆ ಮರಳಿದ್ದು, ಸರಣಿಯಲ್ಲಿ ಅವರ ಪ್ರದರ್ಶನದ ಮೇಲೆ ಎಲ್ಲರ ಕಣ್ಣಿದೆ.

ಇನ್ನು ನಿನ್ನೆಯಷ್ಟೇ ಮಾಧ್ಯಮಗಳ ಜೊತೆ ಮಾತನಾಡಿದ ನಾಯಕ ರೋಹಿತ್​ ಶರ್ಮಾ, ಆರಂಭಿಕನಾಗಿ ಕೆಎಲ್ ರಾಹುಲ್​ ತಮ್ಮೊಂದಿಗೆ ಕಣಕ್ಕಿಳಿಯಲಿದ್ದಾರೆ. ವಿರಾಟ್​ ಕೊಹ್ಲಿ ಕೂಡ ಬ್ಯಾಕಪ್​ ಓಪನರ್​ ಆಗಿ ಇರಲಿದ್ದಾರೆ ಎಂದು ಹೇಳಿದ್ದರು. ಏಷ್ಯಾಕಪ್​ ವೇಳೆ ವಿರಾಟ್​ ಅಫ್ಘಾನಿಸ್ತಾನ ವಿರುದ್ಧ ಆರಂಭಿಕನಾಗಿ ಇಳಿದು ಮೂರು ವರ್ಷಗಳ ಬಳಿಕ ಶತಕ ಸಾಧನೆ ಮಾಡಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್​ ಯಾದವ್​, ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ತಂಡದ ಆಧಾರವಾದರೆ, 6, 7ನೇ ಕ್ರಮಾಂಕದಲ್ಲಿ ದಿನೇಶ್​ ಕಾರ್ತಿಕ್​ ಮತ್ತು ರಿಷಭ್​​ ಪಂತ್​ ಪಾತ್ರ ಅತಿ ಮುಖ್ಯವಾಗಲಿದೆ. ಕಾರ್ತಿಕ್ ಅವ​​ರನ್ನು ಫಿನಿಶರ್​ ಆಗಿ ತಂಡ ನೆಚ್ಚಿಕೊಂಡಿದೆ.

ಜಡೇಜಾ ಸ್ಥಾನ ತುಂಬುವರಾ ಅಕ್ಸರ್​: ರವೀಂದ್ರ ಜಡೇಜಾ ಗಾಯಗೊಂಡು ವಿಶ್ವಕಪ್​ನಿಂದ ಹೊರಬಿದ್ದಿರುವ ಕಾರಣ, ಅಕ್ಸರ್​ ಪಟೇಲ್​ರನ್ನು ಆಡಿಸಿದಲ್ಲಿ ಬ್ಯಾಟಿಂಗ್​ ಜೊತೆಗೆ 6ನೇ ಬೌಲರ್​ ಆಗಿಯೂ ಬಳಸಿಕೊಳ್ಳಬಹುದು. ಭುವನೇಶ್ವರ್​ ಕುಮಾರ್​, ಬೂಮ್ರಾ, ಹರ್ಷಲ್​ ಪಟೇಲ್​ ಜೊತೆಗೆ ಹಾರ್ದಿಕ್​ ವೇಗದ ಜವಾಬ್ದಾರಿ ನಿಭಾಯಿಸಿದರೆ, ಯಜುವೇಂದ್ರ ಚಹಲ್​ ಜೊತೆಗೆ ಅಕ್ಸರ್​ ಪಟೇಲ್​ ಸ್ಪಿನ್​ ಅಸ್ತ್ರವಾಗಲಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಮಿಂಚಿದರೂ ದೀಪಕ್​ ಹೂಡಾ ಅವರನ್ನು ಏಷ್ಯಾಕಪ್​ನಲ್ಲಿ 6,7 ನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಅಷ್ಟೇನೂ ಪ್ರದರ್ಶನ ನೀಡದ ಹೂಡಾ ಅವರನ್ನು ತಂಡಕ್ಕೆ ಸೇರಿಸಿಕೊಂಡರೆ ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎಂಬುದು ಆಸ್ಟ್ರೇಲಿಯಾ ಸರಣಿಯಲ್ಲಿ ನಿರ್ಧರಿಸಬೇಕಿದೆ.

ಆಸ್ಟ್ರೇಲಿಯಾಕ್ಕೆ ಗಾಯದ ಸಮಸ್ಯೆ: ಆಸ್ಟ್ರೇಲಿಯಾ ತಂಡ ಕೂಡ ಭಾರತಕ್ಕಿಂತ ಭಿನ್ನವಾಗಿಲ್ಲ. ವಿಶ್ವಕಪ್​ ಹಿನ್ನೆಲೆಯಲ್ಲಿ ಆರಂಭಿಕ ಬ್ಯಾಟರ್​ ಡೇವಿಡ್​ ವಾರ್ನರ್​ಗೆ ವಿಶ್ರಾಂತಿ ನೀಡಲಾಗಿದೆ. ಗಾಯಗಳಿಂದ ಬಳಲುತ್ತಿರುವ ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಮಿಚೆಲ್ ಮಾರ್ಷ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ಏಕದಿನಕ್ಕೆ ನಿವೃತ್ತಿ ಘೋಷಿಸಿರುವ ನಾಯಕ ಆರೋನ್​ ಫಿಂಚ್ ಮೇಲೆ ಎಲ್ಲರ ಗಮನವಿದೆ. ರನ್​ ಗಳಿಸಲು ಪರದಾಡುತ್ತಿರುವ ಅವರು ತವರಿನಲ್ಲೇ ನಡೆಯುವ ವಿಶ್ವಕಪ್​ನಲ್ಲಿ ಮಿಂಚಲೇಬೇಕಾದ ಅನಿವಾರ್ಯವಿದೆ. ಪವರ್ ಹಿಟ್ಟರ್ ಆಗಿ ಗುರುತಿಸಿಕೊಂಡಿರುವ ಟಿಮ್ ಡೇವಿಡ್, ಗ್ಲೆನ್​ ಮ್ಯಾಕ್ಸವೆಲ್​ ತಂಡಕ್ಕೆ ಉತ್ತಮ ಕಾಣಿಕೆ ನೀಡಬೇಕಿದೆ.

ತಂಡಗಳು ಇಂತಿವೆ- ಆಸ್ಟ್ರೇಲಿಯಾ: ಸೀನ್ ಅಬಾಟ್, ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಆರೋನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಜೋಶ್ ಹೇಜಲ್‌ವುಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್, ಡೇನಿಯಲ್ ಸ್ಯಾಮ್ಸ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಆ್ಯಡಂ ಜಂಪಾ.

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯಾ, ರವಿಚಂದ್ರನ್ ಅಶ್ವಿನ್, ಯಜುವೇಂದ್ರ ಚಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಹರ್ ಜಸ್ಪ್ರೀತ್ ಬೂಮ್ರಾ, ಉಮೇಶ್ ಯಾದವ್.

ಪಂದ್ಯದ ಸಮಯ- ರಾತ್ರಿ 7.30ಕ್ಕೆ.

ಓದಿ: ಗೊಂದಲಕ್ಕೆ ತೆರೆ: ಈ ಪ್ಲೇಯರ್​​ ನನ್ನೊಂದಿಗೆ ಇನ್ನಿಂಗ್ಸ್ ಆರಂಭಿಸ್ತಾರೆಂದ ರೋಹಿತ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.