ETV Bharat / sports

ಈ ಕಾರಣದಿಂದ ಭಾರತ ಮತ್ತು ಶ್ರೀಲಂಕಾ ನಡುವಿನ ವೈಟ್​ ಬಾಲ್​ ಸರಣಿ ರದ್ದು?

ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ, ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಸ್ಟಾರ್​ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ ಜುಲೈನಲ್ಲಿ ಏಕದಿನ ಮತ್ತು 3 ಟಿ-20 ಪಂದ್ಯಗಳಿಗಾಗಿ ದ್ವೀಪ ರಾಷ್ಟ್ರಕ್ಕೆ ತೆರಳಲಿದೆ ಎಂದು ದಾದಾ ಹೇಳಿದ್ದರು. ಅಲ್ಲದೆ ಈ ತಂಡ ಸಂಪೂರ್ಣ ವೈಟ್​ ಬಾಲ್ ಸ್ಪೆಷಲಿಸ್ಟ್​ಗಳದ್ದಾಗಿರುತ್ತದೆ ಎಂದು ತಿಳಿಸಿದ್ದರು.

ಭಾರತ ಶ್ರೀಲಂಕಾ ಸರಣಿ ರದ್ದು?​
ಭಾರತ ಶ್ರೀಲಂಕಾ ಸರಣಿ ರದ್ದು?​
author img

By

Published : May 16, 2021, 3:55 PM IST

ಕೊಲೊಂಬೊ: ಜುಲೈನಲ್ಲಿ ಭಾರತದ ಸೀಮಿತ ಓವರ್​ಗಳ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ ಎಂದು ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಕಳೆದ ವಾರ ತಿಳಿಸಿದ್ದರು. ಆದರೆ ಆ ಪ್ರವಾಸ ಕೋವಿಡ್​-19 ಕಾರಣದಿಂದ ತೂಗುಯ್ಯಾಲೆಯಲ್ಲಿ ಸಿಲುಕಿದೆ.

ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ, ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಸ್ಟಾರ್​ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ ಜುಲೈನಲ್ಲಿ ಏಕದಿನ ಮತ್ತು 3 ಟಿ-20 ಪಂದ್ಯಗಳಿಗಾಗಿ ದ್ವೀಪ ರಾಷ್ಟ್ರಕ್ಕೆ ತೆರಳಲಿದೆ ಎಂದು ದಾದಾ ಹೇಳಿದ್ದರು. ಅಲ್ಲದೆ ಈ ತಂಡ ಸಂಪೂರ್ಣ ವೈಟ್​ ಬಾಲ್ ಸ್ಪೆಷಲಿಸ್ಟ್​ಗಳದ್ದಾಗಿರುತ್ತದೆ ಎಂದು ತಿಳಿಸಿದ್ದರು.

ಕೊಲೊಂಬೋದ ಆರ್​.ಪ್ರೇಮದಾಸ ಸ್ಟೇಡಿಯಂನಲ್ಲಿ ಬಯೋಬಬಲ್​​ನಲ್ಲಿ ಜುಲೈ 13, 16 ಮತ್ತು 19ರಂದು ಏಕದಿನ ಪಂದ್ಯಗಳು ಮತ್ತು ಜುಲೈ 22, 24 ಮತ್ತು 27ರಂದು ಟಿ-20 ಪಂದ್ಯಗಳಿಗೆ ಎಸ್​ಎಲ್​ಸಿ ಆತಿಥ್ಯ ನೀಡಬೇಕಿತ್ತು. ಆದರೆ ಪ್ರಸ್ತುತ ಶ್ರೀಲಂಕಾದಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಈ ಸರಣಿ ನಡೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಲಂಕಾ ಕ್ರಿಕೆಟ್ ಮಂಡಳಿಯ ಸಿಇಒ ಆಶ್ಲೇ ಡಿ ಸಿಲ್ವಾ, ಕೊರೊನಾ ಪ್ರಕರಣಗಳ ಏರಿಕೆ ಆತಂಕಕ್ಕೆ ಕಾರಣವಾಗಿದೆ. ಆದರೆ ನಾವು ಈಗಾಗಲೇ ಇಂಗ್ಲೆಂಡ್ ಮತ್ತು ಬೇರೆ ತಂಡಗಳ ವಿರುದ್ಧದ ಸರಣಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ. ಹೀಗಾಗಿ ನಾವು ಭಾರತದ ವಿರುದ್ಧದ ಸರಣಿಗೂ ಆತಿಥ್ಯ ವಹಿಸಲು ಸಿದ್ಧರಿದ್ದೇವೆ ಎಂದು ಇನ್​ಸೈಡ್​ ಸ್ಪೋರ್ಟ್ಸ್​ಗೆ ಮಾಹಿತಿ ನೀಡಿದ್ದಾರೆ.

ವರದಿಯ ಪ್ರಕಾರ, ಈ ತಂಡದಲ್ಲಿ ಶಿಖರ್ ಧವನ್, ಸೂರ್ಯಕುಮಾರ್ ಯಾದವ್​, ಪೃಥ್ವಿ ಶಾ, ಇಶಾನ್​ ಕಿಶನ್, ಕುಲ್ದೀಪ್ ಯಾದವ್​, ಹಾರ್ದಿಕ್ ಪಾಂಡ್ಯ ಅವರಂತಹ ಸ್ಟಾರ್​ ಆಟಗಾರರು ಹಾಗೂ ದೇವದತ್ ಪಡಿಕ್ಕಲ್, ಚೇತನ್ ಸಕಾರಿಯಾ ಸೇರಿದಂತೆ ಕೆಲವು ಐಪಿಎಲ್​​ ಸ್ಟಾರ್ಸ್​​ ಈ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿತ್ತು. ಮತ್ತು ಈ ತಂಡಕ್ಕೆ ಎನ್​ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್​ ಕೋಚ್​ ಆಗಲಿದ್ದಾರೆ ಎನ್ನಲಾಗಿತ್ತು.

ಇದನ್ನು ಓದಿ: ಲಂಕಾ ವಿರುದ್ಧ ಕೊಹ್ಲಿ - ರೋಹಿತ್ ಅನುಪಸ್ಥಿತಿಯಲ್ಲಿ ಭಾರತ ತಂಡಕ್ಕೆ ಧವನ್​ ನಾಯಕನಾಗುವ ಸಾಧ್ಯತೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.