ETV Bharat / sports

ಚೇತೇಶ್ವರ ಪೂಜಾರ ನಿಧಾನಗತಿ ಬ್ಯಾಟಿಂಗ್ ಟೀಕಿಸಿದ ಅಲನ್ ಬಾರ್ಡರ್, ಪಾಟಿಂಗ್ - ಅಲನ್ ಬಾರ್ಡರ್

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಪೂಜಾರ ಆಟದ ವಿಧಾನವನ್ನು ಟೀಕಿಸಿದ್ದು, "ಅವರು ತಮ್ಮ ಸ್ಕೋರಿಂಗ್ ದರವನ್ನು ಇನ್ನಷ್ಟು ವೇಗವಾಗಿಸಿಕೊಳ್ಳಬೇಕು. ಇಲ್ಲವಾದರೆ ಅದು ಅವರ ಜೊತೆಗಾರ ಬ್ಯಾಟ್ಸಮನ್ ಮೇಲೆ ಹೆಚ್ಚಿನ ಒತ್ತಡ ಬೀರುತ್ತದೆ." ಎಂದು ಹೇಳಿದ್ದಾರೆ.

Border
ಅಲನ್ ಬಾರ್ಡರ್
author img

By

Published : Jan 10, 2021, 8:28 AM IST

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್​ ಪಂದ್ಯದಲ್ಲಿ ಚೇತೇಶ್ವರ ಪೂಜಾರ ನಿಧಾನಗತಿ ಬ್ಯಾಟಿಂಗ್​ ಮಾಡಿದ್ದಕ್ಕೆ ಆಸ್ಟ್ರೇಲಿಯಾ ಮಾಜಿ ಆಟಗಾರರಾದ ಅಲನ್ ಬಾರ್ಡರ್, ರಿಕಿ ಪಾಂಟಿಂಗ್, ಟಾಮ್ ಮೂಡಿ ಖಂಡಿಸಿದ್ದಾರೆ.

"ಚೇತೇಶ್ವರ ಪೂಜಾರ ಶಾಟ್ ಆಡಲು ಹೆದರುತ್ತಿದ್ದರು, ಆಸ್ಟ್ರೇಲಿಯನ್ನರ ವಿರುದ್ಧ ಹೋರಾಡುವ ಬದಲು ಕ್ರೀಸ್​ನಲ್ಲಿ ಉಳಿಯಲು ನೋಡುತ್ತಿದ್ದರು." ಎಂದು ಮಾಜಿ ನಾಯಕ ಅಲನ್ ಬಾರ್ಡರ್ ಹೇಳಿದ್ದಾರೆ. ಅಲ್ಲದೆ ಮೂರನೇ ಟೆಸ್ಟ್​ನ ಮೂರನೇ ದಿನದ ಭಾರತದ ಬ್ಯಾಟಿಂಗ್ ತಂತ್ರಗಳನ್ನು ಸಹ ಅವರು ಖಂಡಿಸಿದ್ದಾರೆ.

ಪೂಜಾರ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೆಸ್ಟ್​ ಅತಿ ನಿಧಾನಗತಿಯ ಅರ್ಧಶತಕ ಗಳಿಸಿದ್ದರು. ಚೇತೇಶ್ವರ 176 ಎಸೆತಗಳಲ್ಲಿ 50 ರನ್ ಗಳಿಸಿದ್ದರು.

ಓದಿ : ಭೋಜನ ವಿರಾಮದ ವೇಳೆಗೆ 2 ವಿಕೆಟ್ ಪತನ: ಕಾಂಗರೂಗಳಿಗೆ ಸ್ಮಿತ್ ಆಸರೆ

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಪೂಜಾರ ಆಟದ ವಿಧಾನವನ್ನು ಟೀಕಿಸಿದ್ದು, "ಅವರು ತಮ್ಮ ಸ್ಕೋರಿಂಗ್ ದರವನ್ನು ಇನ್ನಷ್ಟು ವೇಗವಾಗಿಸಿಕೊಳ್ಳಬೇಕು. ಇಲ್ಲವಾದರೆ ಅದು ಅವರ ಜೊತೆಗಾರ ಬ್ಯಾಟ್ಸಮನ್ ಮೇಲೆ ಹೆಚ್ಚಿನ ಒತ್ತಡ ಬೀರುತ್ತದೆ." ಎಂದು ಹೇಳಿದ್ದಾರೆ.

2018-19ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್​ ಸರಣಿಯಲ್ಲಿ ಚೇತೇಶ್ವರ ಪೂಜಾರ 521 ರನ್ ​​ಗಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.