ನವದೆಹಲಿ: ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗಾವಸ್ಕರ್ ಟ್ರೋಫಿ ಜಯಿಸಿ ಭಾರತಕ್ಕೆ ಮರಳಿರುವ ವೇಗಿ ಮೊಹಮ್ಮದ್ ಸಿರಾಜ್ ಅವರು ಐಶಾರಾಮಿ ಬಿಎಂಡಬ್ಲ್ಯೂ ಕಾರು ಖರೀದಿಸಿದ್ದು, ಹೊಸ ಕಾರಿನ ಚಿತ್ರ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಟೆಸ್ಟ್ ಸರಣಿಯಲ್ಲಿ ಸಿರಾಜ್ ಗಮನಾರ್ಹ ಪ್ರದರ್ಶನ ನೀಡಿದ್ದು, 13 ವಿಕೆಟ್‌ಗಳನ್ನು ಕಿತ್ತು ಗಮನ ಸೆಳೆದಿದ್ದರು. ಸಿಡ್ನಿ ಮತ್ತು ಬ್ರಿಸ್ಬೇನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳ ವೇಳೆ ಆಸ್ಟ್ರೇಲಿಯಾ ಪ್ರೇಕ್ಷಕರಿಂದ ಜನಾಂಗೀಯ ನಿಂದನೆಗೂ ಒಳಗಾಗಿದ್ದರು. ಎರಡನೇ ಟೆಸ್ಟ್ ಪಂದ್ಯದಲ್ಲಿ ಅವರು ಪದಾರ್ಪಣೆ ಮಾಡಿದ್ದರು.
-
Mohammad Siraj buying a Brand New BMW Car. Congratulations to you Siraj. And pray that you get more success in the future. pic.twitter.com/mSUva2AgMP
— CricketMAN2 (@man4_cricket) January 22, 2021 " class="align-text-top noRightClick twitterSection" data="
">Mohammad Siraj buying a Brand New BMW Car. Congratulations to you Siraj. And pray that you get more success in the future. pic.twitter.com/mSUva2AgMP
— CricketMAN2 (@man4_cricket) January 22, 2021Mohammad Siraj buying a Brand New BMW Car. Congratulations to you Siraj. And pray that you get more success in the future. pic.twitter.com/mSUva2AgMP
— CricketMAN2 (@man4_cricket) January 22, 2021
ಆಸ್ಟ್ರೇಲಿಯಾ ಪ್ರವಾಸಲ್ಲಿ ಪಾಲ್ಗೊಂಡಿದ್ದ ಭಾರತ ತಂಡ ಏಕದಿನ ಸರಣಿಯಲ್ಲಿ 2-1ರ ಸೋಲು, ಟಿ20 ಸರಣಿಯಲ್ಲಿ 2-1ರ ಗೆಲುವು ಮತ್ತು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಗೆಲುವು (1 ಪಂದ್ಯ ಡ್ರಾ) ಕಂಡಿತ್ತು. ಈ ಪ್ರವಾಸದಲ್ಲಿ ಸಿರಾಜ್ ಕೂಡ ಉತ್ತಮ ಪ್ರದರ್ಶನ ನೀಡಿದ್ದರು.