ಅಡಿಲೇಡ್: ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಇಂದಿನಿಂದ ಭಾರತ, ಆಸೀಸ್ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಿಂಕ್‌ಬಾಲ್ ಪಂದ್ಯ ಬೆಳಗ್ಗೆ 9.30ಕ್ಕೆ ಆರಂಭವಾಗಲಿದೆ. ನಾಲ್ಕು ಟೆಸ್ಟ್ ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ ಮಾತ್ರ ನಾಯಕ ವಿರಾಟ್ ಕೊಹ್ಲಿ ಆಡಲಿದ್ದಾರೆ. ಹೀಗಾಗಿ ಎಲ್ಲರ ಚಿತ್ತ ಕೊಹ್ಲಿ ಬ್ಯಾಟಿಂಗ್‌ನತ್ತ ನೆಟ್ಟಿದೆ.
ಉಭಯ ತಂಡಗಳ ಬಲಾಬಲ ನೋಡುವುದಾದರೆ ಟೀಂ ಇಂಡಿಯಾಗೆ ನಾಯಕ ಕೊಹ್ಲಿ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ, ಕನ್ನಡಿಗ ಮಯಾಂಕ್ ಅಗರವಾಲ್, ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್ ಸಹಾ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದು, ಆರಂಭಿಕರಾಗಿ ಮಯಾಂಕ್ ಹಾಗೂ ಪೃಥ್ವಿ ಶಾ ಕಣಕ್ಕಿಳಿಯುವ ಸಾಧ್ಯತೆ ಇದೆ.
ಇಂದಿನ ಪಂದ್ಯದಿಂದ ಸ್ಫೋಟಕ ಬ್ಯಾಟ್ಸಮನ್ ಕನ್ನಡಿಗ ಕೆ.ಎಲ್. ರಾಹುಲ್ ಹಾಗೂ ಶುಭಮನ್ ಗಿಲ್‌ಗೆ ವಿಶ್ರಾಂತಿ ನೀಡಲಾಗಿದೆ. ಬೌಲಿಂಗ್ ವಿಭಾಗದಲ್ಲಿ ಉಮೇಶ್ ಯಾದವ್, ಮಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಬಲ ತುಂಬಲಿದ್ದಾರೆ.
ಆಸೀನ್ ತಂಡದಲ್ಲಿ ನಾಯಕ ಟೀಮ್ ಪೇನ್, ಜೋ ಬರ್ನ್ಸ್, ಪ್ಯಾಟ್ ಕಮಿನ್ಸ್, ಕ್ಯಾಮರಾನ್ ಗ್ರೀನ್, ಮಾರ್ನಸ್ ಲಾಬುಶೇನ್ ಬ್ಯಾಟಿಂಗ್ ಬಲ ಹೊಂದಿದ್ದಾರೆ. ಮಿಷೆಲ್ ಸ್ಟಾರ್ಕ್, ಸ್ವೀವನ್ ಸ್ಮಿತ್, ಮಿಷೆಲ್ ಸ್ವೆಪ್ಟನ್, ಮ್ಯಾಥ್ಯೂವೇಡ್ ಹಾಗೂ ಮೈಕಲ್ ನೆಸೆರ್ ಬೌಲಿಂಗ್ ಅನ್ನು ಆಸ್ಟ್ರೇಲಿಯಾ ನೆಚ್ಚಿಕೊಂಡಿದೆ. ಈಗಾಗಲೇ ನೆಟ್‌ನಲ್ಲಿ ಬೆವರು ಹರಿಸಿರುವ ಟೀಂ ಇಂಡಿಯಾ ಗೆಲುವಿನ ಶುಭಾರಂಭಕ್ಕಾಗಿ ಕಾತುರವಾಗಿದೆ.