ಕ್ಯಾನ್ಬೆರಾ : ಇಲ್ಲಿನ ಮಾನುಕ್ ಓವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟಿ-20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ಎದುರಾಳಿ ತಂಡಕ್ಕೆ 162 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಆರಂಭಿಕರಾಗಿ ಮೈದಾನಕ್ಕಿಳಿದ ಕೆ ಎಲ್ ರಾಹುಲ್ ಅರ್ಧಶತಕ ಸಿಡಿಸಿದ್ರೆ (51) ಮತ್ತು ಕೊನೆಯ ಹಂತದಲ್ಲಿ ರವೀಂದ್ರ ಜಡೇಜಾ ಬಿರುಸಿನ ಬ್ಯಾಟಿಂಗ್ ನಡೆಸಿ ಮಿಂಚಿದರು. ಈ ಮೂಲಕ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿತು.
-
Ravindra Jadeja's 23-ball 44*, featuring five fours and a six, has powered India to 161/7 🔥
— ICC (@ICC) December 4, 2020 " '="" class="align-text-top noRightClick twitterSection" data="
What are your predictions for the second innings?
FOLLOW #AUSvIND 👉 https://t.co/FpDYCXHojX pic.twitter.com/GLPPFR1pkv
">Ravindra Jadeja's 23-ball 44*, featuring five fours and a six, has powered India to 161/7 🔥
— ICC (@ICC) December 4, 2020
What are your predictions for the second innings?
FOLLOW #AUSvIND 👉 https://t.co/FpDYCXHojX pic.twitter.com/GLPPFR1pkvRavindra Jadeja's 23-ball 44*, featuring five fours and a six, has powered India to 161/7 🔥
— ICC (@ICC) December 4, 2020
What are your predictions for the second innings?
FOLLOW #AUSvIND 👉 https://t.co/FpDYCXHojX pic.twitter.com/GLPPFR1pkv
ರಾಹುಲ್ ಮತ್ತು ಜಡೇಜಾರನ್ನು ಹೊರತುಪಡಿಸಿದರೆ ನಾಯಕ ವಿರಾಟ್ ಕೊಹ್ಲಿ (9), ಶಿಖರ್ ಧವನ್ (1), ಮನಿಷ್ ಪಾಂಡೆ (2), ಸಂಜು ಸ್ಯಾಮ್ಸನ್ (23), ಹಾರ್ದಿಕ್ ಪಾಂಡ್ಯ (16) ನೀರಸ ಪ್ರದರ್ಶನ ತೋರಿದರು.
ಇನ್ನು ಮಾರಕ ದಾಳಿ ನಡೆಸಿ ಆಸೀಸ್ ಬೌಲರ್ಗಳು ಟೀಂ ಇಂಡಿಯಾ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಮೋಯಿಸ್ ಹೆನ್ರಿಕ್ಸ್ 3, ಮಿಚೆಲ್ ಸ್ಟಾರ್ಕ್ 2, ಜಂಪಾ ಮತ್ತು ಮಿಚೆಲ್ ಸ್ವೀಪನ್ ತಲಾ ಒಂದು ವಿಕಟ್ ಕಬಳಿಸಿದರು.