ಹೈದರಾಬಾದ್: ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಬಾರ್ಡರ್ - ಗವಾಸ್ಕರ್ ಟ್ರೋಫಿಯ 4ನೇ ಪಂದ್ಯದ ಐದನೇ ದಿನದಂದು ಟೀಮ್ ಇಂಡಿಯಾ ಯುವ ಆಟಗಾರ ರಿಷಭ್ ಪಂತ್ ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.
ಭಾರತ ಪರ ಟೆಸ್ಟ್ ಫಾರ್ಮೆಟ್ನಲ್ಲಿ ವೇಗವಾಗಿ 1,000 ರನ್ಗಳಿಸಿದ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಪಂತ್ ಪಾತ್ರರಾದರು. ಪಂತ್ 1,000 ರನ್ಗಳನ್ನು ಕೇವಲ 27 ಇನ್ನಿಂಗ್ಸ್ನಲ್ಲಿ ಗಳಿಸಿದ್ದಾರೆ.
-
1000 Test runs for @RishabhPant17 👏👏#TeamIndia pic.twitter.com/TIzVoqA7Px
— BCCI (@BCCI) January 19, 2021 " class="align-text-top noRightClick twitterSection" data="
">1000 Test runs for @RishabhPant17 👏👏#TeamIndia pic.twitter.com/TIzVoqA7Px
— BCCI (@BCCI) January 19, 20211000 Test runs for @RishabhPant17 👏👏#TeamIndia pic.twitter.com/TIzVoqA7Px
— BCCI (@BCCI) January 19, 2021
ಓದಿ :ಭಾರತ ತಂಡ ಈ ಟೆಸ್ಟ್ ಪಂದ್ಯ ಗೆಲ್ಲುವ ಹಾದಿಯಲ್ಲಿದೆ: ಶೇನ್ ವಾರ್ನ್
ರಿಷಭ್ ಪಂತ್ಗೂ ಮೊದಲು ಭಾರತ ಪರ ವಿಕೆಟ್ ಕೀಪರ್ ಆಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 1,000 ರನ್ ಗಳಿಸಿದ ದಾಖಲೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು. ಎಂ ಎಸ್ ಧೋನಿ (32 ಇನ್ನಿಂಗ್ಸ್) ನಲ್ಲಿ ಈ ಸಾಧನೆ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿ ಫಾರೂಕ್ ಇಂಜಿನಿಯರ್ (36 ಇನ್ನಿಂಗ್ಸ್) ಮತ್ತು ವೃದ್ಧಿಮಾನ್ ಸಹಾ (37 ಇನ್ನಿಂಗ್ಸ್) 1,000 ರನ್ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 1,000 ರನ್ ಗಳಿಸಿದ ವಿಕೆಟ್ ಕೀಪರ್ಗಳು
- ರಿಷಭ್ ಪಂತ್ (27 ಇನ್ನಿಂಗ್ಸ್)
- ಮಹೇಂದ್ರ ಸಿಂಗ್ ಧೋನಿ (32 ಇನ್ನಿಂಗ್ಸ್)
- ಫಾರೂಕ್ ಇಂಜಿನಿಯರ್ (36 ಇನ್ನಿಂಗ್ಸ್)
- ವೃದ್ಧಿಮಾನ್ ಸಹಾ (37 ಇನ್ನಿಂಗ್ಸ್)
- ನಯನ್ ಮೊಂಗಿಯಾ (39 ಇನ್ನಿಂಗ್ಸ್)
- ಸೈಯದ್ ಕಿರ್ಮಾನಿ (45 ಇನ್ನಿಂಗ್ಸ್)
- ಕಿರಣ್ ಮೋರೆ (50 ಇನ್ನಿಂಗ್ಸ್)