ದುಬೈ: ನ್ಯೂಜಿಲ್ಯಾಂಡ್ ವಿರುದ್ಧ 2 ಪಂದ್ಯಗಳ ಸರಣಿಯನ್ನು ಗೆಲ್ಲುತ್ತಿದ್ದಂತೆ ಭಾರತ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.
ಕಾನ್ಪುರದಲ್ಲಿ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ, ಮುಂಬೈ ಟೆಸ್ಟ್ನಲ್ಲಿ ವಿರಾಟ್ ಪಡೆ ದಾಖಲೆಯ 372 ರನ್ಗಳ ಜಯ ಸಾಧಿಸಿತ್ತು. ನ್ಯೂಜಿಲ್ಯಾಂಡ್ ಪಾಕಿಸ್ತಾನದ ವಿರುದ್ಧ ಜನವರಿಯಲ್ಲಿ ಸರಣಿ ಗೆದ್ದ ನಂತರ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ನಂಬರ್ ಸ್ಥಾನಕ್ಕೇರಿತ್ತು. 2016ರಿಂದ ಅಗ್ರಸ್ಥಾನ ಕಾಯ್ದುಕೊಂಡಿದ್ದ ಮೇ ತಿಂಗಳಲ್ಲಿ 3ನೇ ಸ್ಥಾನಕ್ಕೆ ಕುಸಿದಿತ್ತು.
-
🔝
— ICC (@ICC) December 6, 2021 " class="align-text-top noRightClick twitterSection" data="
India are back to the No.1 spot in the @MRFWorldwide ICC Men’s Test Team Rankings.#INDvNZ pic.twitter.com/TjI5W7eWmq
">🔝
— ICC (@ICC) December 6, 2021
India are back to the No.1 spot in the @MRFWorldwide ICC Men’s Test Team Rankings.#INDvNZ pic.twitter.com/TjI5W7eWmq🔝
— ICC (@ICC) December 6, 2021
India are back to the No.1 spot in the @MRFWorldwide ICC Men’s Test Team Rankings.#INDvNZ pic.twitter.com/TjI5W7eWmq
ವಿರಾಟ್ ಕೊಹ್ಲಿ ನೇತೃತ್ವದ ತಂಡ 124 ರೇಟಿಂಗ್ ಅಂಕಗಳನ್ನು ಹೊಂದಿದೆ. ನ್ಯೂಜಿಲ್ಯಾಂಡ್(121), ಆಸ್ಟ್ರೇಲಿಯಾ(108), ಇಂಗ್ಲೆಂಡ್(107), ಪಾಕಿಸ್ತಾನ (92), ದಕ್ಷಿಣ ಆಫ್ರಿಕಾ(88), ಶ್ರೀ ಲಂಕಾ(83), ವೆಸ್ಟ್ ಇಂಡೀಸ್(75), ಬಾಂಗ್ಲಾದೇಶ(49) ಮತ್ತು ಜಿಂಬಾಬ್ವೆ(31) ನಂತರದ ಸ್ಥಾನದಲ್ಲಿವೆ.
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ 3ನೇ ಸ್ಥಾನದಲ್ಲಿದೆ, ಶ್ರೀಲಂಕಾ 100 ಗೆಲುವಿನ ಸರಾಸರಿಯಿಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 66.66 ಸರಾಸರಿಯಲ್ಲಿ 2ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಕಿವೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದು ಮತ್ತೊಂದು ದಾಖಲೆ ಬರೆದ ಟೀಂ ಇಂಡಿಯಾ ನಾಯಕ ಕೊಹ್ಲಿ..: