ಕೇಪ್ ಟೌನ್: ಇಲ್ಲಿನ ನ್ಯೂ ಲ್ಯಾಂಡ್ಸ್ ಮೈದಾನದಲ್ಲಿ ಹರಿಣಗಳ ವಿರುದ್ಧ ಸ್ಮರಣೀಯ ಗೆಲುವು ದಾಖಲಿಸಿದ ಭಾರತ ಕ್ರಿಕೆಟ್ ತಂಡ 26 ಅಂಕಗಳೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಭಾರತ ಮೊದಲ ಸ್ಥಾನ ಪಡೆದಿದೆ.
ಸೆಂಚುರಿಯನ್‌ನಲ್ಲಿ ಭಾರತ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ಜಯ ಗಳಿಸಿದ ಬಳಿಕ, ದಕ್ಷಿಣ ಆಫ್ರಿಕಾವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ತಲುಪಿತ್ತು. ಬಳಿಕ ಕೇಪ್ ಟೌನ್‌ನಲ್ಲಿನ ಸೋಲಿನಿಂದ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶದಂತೆಯೇ ಹರಿಣಗಳ ಗೆಲುವಿನ ಶೇಕಡಾವಾರು ಪ್ರಮಾಣವೂ 50% ಕ್ಕೆ ಇಳಿದಿದೆ. ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದ್ದ ಭಾರತ ಭರ್ಜರಿ ಕಮ್ಬ್ಯಾಕ್ ಮಾಡುವ ಮೂಲಕ ಸಮಬಲ ಸಾಧಿಸಿತ್ತು.
-
India move to the top 📈
— ICC (@ICC) January 5, 2024 " class="align-text-top noRightClick twitterSection" data="
More ➡️ https://t.co/2juF4qgC6D pic.twitter.com/bFSICZUXux
">India move to the top 📈
— ICC (@ICC) January 5, 2024
More ➡️ https://t.co/2juF4qgC6D pic.twitter.com/bFSICZUXuxIndia move to the top 📈
— ICC (@ICC) January 5, 2024
More ➡️ https://t.co/2juF4qgC6D pic.twitter.com/bFSICZUXux
ಕೇಪ್ ಟೌನ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾವನ್ನು 55 ರನ್‌ಗಳಿಗೆ ಆಲೌಟ್ ಮಾಡಿ ಭಾರತ ಮೇಲುಗೈ ಸಾಧಿಸಿತ್ತು. ತಂಡದ ಪರ ವೇಗಿ ಮೊಹಮದ್ ಸಿರಾಜ್ 6 ವಿಕೆಟ್ ಪಡೆದು ಹರಿಣಗಳನ್ನು ಕಾಡಿದರು. ಆದರೆ, ಮೊದಲ ಇನ್ನಿಂಗ್ಸ್ನಲ್ಲಿ 153 ರನ್‌ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ 4 ವಿಕೆಟ್ಗೆ 153 ರನ್ ಬಾರಿಸಿದ್ದ ಭಾರತ, ದಿಢೀರ್ ಕುಸಿತ ಕಂಡಿತ್ತು. 153 ರನ್ಗಳಿಗೇ ಎಲ್ಲ ವಿಕೆಟ್ ಪತನವಾಗಿದ್ದು, ಕೊನೆಯ 6 ಆಟಗಾರರು ತಂಡದ ಮೊತ್ತಕ್ಕೆ ಯಾವುದೇ ರನ್ ಸೇರಿಸದೆ ಪೆವಿಲಿಯನ್ ಪರೇಡ್ ನಡೆಸಿದ್ದರು.
ಬಳಿಕ ಎರಡನೇ ಇನ್ನಿಂಗ್ಸ್ನಲ್ಲಿಯೂ ಕೂಡ ದಕ್ಷಿಣ ಆಫ್ರಿಕಾ ಬ್ಯಾಟರ್ಗಳು ಭಾರತದ ದಾಳಿಗೆ ಸಿಲುಕಿದರು. ಭಾರತದ ಪರ ಮಾರಕ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ 6 ವಿಕೆಟ್ ಕಬಳಿಸಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಸರಾಗವಾಗಿ ಆಕ್ರಮಣಕಾರಿ ಬ್ಯಾಟಿಂಗ್ ತೋರಿದ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಎಡನ್ ಮಾರ್ಕ್ರಮ್ ಅಮೋಘ ಶತಕ ದಾಖಲಿಸಿ, ತಂಡವನ್ನು ಇನ್ನಿಂಗ್ಸ್ ಸೋಲಿನಿಂದ ಪಾರು ಮಾಡಿದರು.
-
History was created in Cape Town 🏏
— ICC (@ICC) January 5, 2024 " class="align-text-top noRightClick twitterSection" data="
More on #SAvIND ➡️ https://t.co/2juF4qgC6D#WTC25 pic.twitter.com/78VfVQkWeO
">History was created in Cape Town 🏏
— ICC (@ICC) January 5, 2024
More on #SAvIND ➡️ https://t.co/2juF4qgC6D#WTC25 pic.twitter.com/78VfVQkWeOHistory was created in Cape Town 🏏
— ICC (@ICC) January 5, 2024
More on #SAvIND ➡️ https://t.co/2juF4qgC6D#WTC25 pic.twitter.com/78VfVQkWeO
ಮಾರ್ಕ್ರಮ್ ಶತಕ (106 ರನ್)ದ ಬಲದ ನಡುವೆಯೂ ದಕ್ಷಿಣ ಆಫ್ರಿಕಾ 173 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ 79 ರನ್‌ಗಳ ಗುರಿ ಬೆನ್ನತ್ತಿದ ಭಾರತ ಕೇವಲ 12 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಶ್ರೇಯಸ್ ಅಯ್ಯರ್ ಗೆಲುವಿನ ಬೌಂಡರಿ ಬಾರಿಸಿದರು. ಕೇಪ್ ಟೌನ್‌ನಲ್ಲಿನ ಐತಿಹಾಸಿಕ ಗೆಲುವಿನ ಬಳಿಕ ಭಾರತ ಎರಡು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದ್ದಲ್ಲದೆ, ಪ್ರಸ್ತುತ ಡಬ್ಲ್ಯೂಟಿಸಿಯಲ್ಲಿ ಎರಡನೇ ಗೆಲುವಿನೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ.
ಇದನ್ನೂ ಓದಿ: ಎರಡೇ ದಿನಕ್ಕೆ ಮುಗಿದ ಟೆಸ್ಟ್: ಸರಣಿ ಸಮಬಲ, ಟೀಂ ಇಂಡಿಯಾಗೆ ಹೊಸ ವರ್ಷದ ಮೊದಲ ಗೆಲುವು