ನವದೆಹಲಿ : ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ನಲ್ಲಿ ಭಾರತೀಯ ಬೌಲರ್ಗಳು ಮೇಲುಗೈ ಸಾಧಿಸಲಿದ್ದಾರೆ ಎಂದು ಭಾರತ ತಂಡದ ಮಾಜಿ ವೇಗಿ ಆಶಿಷ್ ನೆಹ್ರಾ ಹೇಳಿದ್ದಾರೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ಎರಡೂ ತಂಡಗಳೂ ಉತ್ತಮ ಬೌಲರ್ಗಳನ್ನು ಹೊಂದಿವೆ. ನೀವು ನಮ್ಮ ಬುಮ್ರಾ ಮತ್ತು ಶಮಿ ನೋಡಿ, ಅವರಿಬ್ಬರೂ ಫ್ಲಾಟ್ ಟ್ರ್ಯಾಕ್ನಲ್ಲೂ ಉತ್ತಮವಾಗಿ ಬೌಲಿಂಗ್ ಮಾಡಬಲ್ಲರು. ಕೇವಲ ಅವರಿಬ್ಬರಷ್ಟೇ ಅಲ್ಲ, ಇಶಾಂತ್ ಕೂಡ ಮಾಡಬಲ್ಲರು.
ಅವರು ಭಾರತಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನಾಡಿ ಏನು ಸಾಧನೆ ಮಾಡಿದ್ದಾರೆ ಎಂದು ಒಮ್ಮೆ ನೋಡಿದಾಗ, ಅವರ ಉಪಸ್ಥಿತಿ ಭಾರತ ತಂಡಕ್ಕೆ ಬಲ ತುಂಬಲಿದೆ ಎಂಬುದು ತಿಳಿಯುತ್ತದೆ ಎಂದು ನೆಹ್ರಾ ತಿಳಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಭಾರತಕ್ಕೆ ನೆರವಾಗಲಿದ್ದಾರೆ ಎಂದು ಮಾಜಿ ವೇಗಿ ತಿಳಿಸಿದ್ದಾರೆ.
ಗ್ರೀನ್ ಟಾಪ್ನಲ್ಲಿ ಖಂಡಿತವಾಗಿಯೂ ನೀವು ಹೆಚ್ಚುವರಿ ವೇಗಿಯನ್ನು ಹೊಂದುವ ಬಗ್ಗೆ ಆಲೋಚಿಸಬಹುದು. ಅದಕ್ಕಾಗಿ ನಾನು ಮೊಹಮ್ಮದ್ ಸಿರಾಜ್ರನ್ನು ಸೇರಿಸಲು ಬಯಸುತ್ತೇನೆ.
ಅದು ಸಾಧ್ಯವಾಗದಿದ್ದರೆ ಇಶಾಂತ್, ಬುಮ್ರಾ ಮತ್ತು ಶಮಿ ಸರಣಿಯಲ್ಲಿನ ಬೌಲರ್ಗಳಾಗಬೇಕೆಂದು ನಾನು ಬಯಸುತ್ತೇನೆ. ಮೂವರು ವೇಗಿಗಳ ಜೊತೆಗೆ ಅಶ್ವಿನ್ ಮತ್ತು ಜಡೇಜಾ ಸ್ಪಿನ್ನರ್ಗಳಾಗಿರಬೇಕು ಎಂದು ನೆಹ್ರಾ ಹೇಳಿದ್ದಾರೆ.
ಇದನ್ನು ಓದಿ:ಜನರು ಟೀಕಿಸುತ್ತಾರೆಂದು ನಾನು ಬದಲಾಗುವ ಅವಶ್ಯಕತೆಯಿಲ್ಲ: ವೃದ್ಧಿಮಾನ್ ಸಹಾ