ETV Bharat / sports

ಕಾಂಗ್ರೆಸ್​​ ಸೇರಿ ವಿವಿಧ ಪಕ್ಷಗಳಿಂದ ಆಫರ್​ ಬಂದಿವೆ.. ಈವರೆಗೂ ಫೈನಲ್​ ನಿರ್ಧಾರ ಆಗಿಲ್ಲ ಎಂದ ಭಜ್ಜಿ..

Harbhajan Singh on politics : ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿರುವ ಟೀಂ ಇಂಡಿಯಾ ಸ್ಪಿನ್ನರ್​ ಹರ್ಭಜನ್​ ಸಿಂಗ್​ ರಾಜಕೀಯ ಸೇರಿಕೊಳ್ಳಲಿದ್ದಾರೆ ಎಂಬ ಮಾತುಗಳು ಈ ಹಿಂದಿನಿಂದಲೂ ಕೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಅವರೇ ಮಾತನಾಡಿದ್ದಾರೆ..

Harbhajan Singh on politics
Harbhajan Singh on politics
author img

By

Published : Dec 25, 2021, 3:13 PM IST

ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ವಿದಾಯ ಘೋಷಣೆ ಮಾಡಿರುವ ಟೀಂ ಇಂಡಿಯಾ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ್ದು, ರಾಜಕೀಯ ಸೇರಿಕೊಳ್ಳಲು ಕಾಂಗ್ರೆಸ್​​​ ಸೇರಿದಂತೆ ವಿವಿಧ ಪಕ್ಷಗಳಿಂದ ಆಫರ್​​ ಬಂದಿವೆ ಎಂದು ತಿಳಿಸಿದ್ದಾರೆ.

ಸುಮಾರು 23 ವರ್ಷಗಳ ಕಾಲ ಟೀಂ ಇಂಡಿಯಾದ ಭಾಗವಾಗಿದ್ದ ಹರ್ಭಜನ್​ ಸಿಂಗ್​​ 2016ರಿಂದ ಮೈದಾನಕ್ಕಿಳಿದಿರಲಿಲ್ಲ. ಆದರೆ, ಐಪಿಎಲ್​​ನಲ್ಲಿ ವಿವಿಧ ತಂಡಗಳ ಪರವಾಗಿ ಆಟವಾಡಿರುವ ಇವರು, ನಿನ್ನೆ ಎಲ್ಲ ಮಾದರಿ ಕ್ರಿಕೆಟ್​​ನಿಂದ ನಿವೃತ್ತಿ ಪಡೆದುಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದ್ದರು.

ಇದರ ಬೆನ್ನಲ್ಲೇ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಮಾತನಾಡಿರುವ ಹರ್ಭಜನ್​​, ರಾಜಕೀಯ ಸೇರಿಕೊಳ್ಳುವುದಕ್ಕೆ ಸಂಬಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ. ಈಗಾಗಲೇ ವಿವಿಧ ಪಕ್ಷಗಳಿಂದ ಆಫರ್​​ ಬಂದಿದ್ದು, ಕಾಂಗ್ರೆಸ್​​ನ ನವಜೋತ್​​ ಸಿಂಗ್​​ ಸಿಧು ಅವರೊಂದಿಗೆ ಮಾತುಕತೆ ಸಹ ನಡೆಸಿದ್ದೇನೆ. ಅವರು ಕಾಂಗ್ರೆಸ್​ ಸೇರಿಕೊಳ್ಳುವಂತೆ ಆಫರ್​ ನೀಡಿದ್ದು, ಈವರೆಗೆ ನಾನು ಯಾವುದೇ ಫೈನಲ್​​​ ನಿರ್ಧಾರ ಕೈಗೊಂಡಿಲ್ಲ ಎಂದರು.

ರಾಜಕೀಯ ಪಕ್ಷವೊಂದಕ್ಕೆ ಸೇರ್ಪಡೆಯಾಗುವ ಕುರಿತಂತೆ ಹರ್ಭಜನ್‌ ಸಿಂಗ್‌ ಸ್ಪಷ್ಟನೆ ನೀಡಿರುವುದು..

ಎಲ್ಲ ಪಕ್ಷದ ರಾಜಕೀಯ ಮುಖಂಡರ ಬಗ್ಗೆ ನನಗೆ ಗೊತ್ತಿದೆ. ಪಕ್ಷ ಸೇರಿಕೊಳ್ಳುವುದಕ್ಕೂ ಮುಂಚಿತವಾಗಿ ನಾನು ಅದರ ಬಗ್ಗೆ ಖುದ್ದಾಗಿ ಘೋಷಣೆ ಮಾಡುತ್ತೇನೆ. ಪಂಜಾಬ್​​​ನಲ್ಲಿ ಸೇವೆ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ಅದು ರಾಜಕೀಯ ಅಥವಾ ಬೇರೆ ಯಾವುದೇ ಮಾರ್ಗವಾಗಿರಬಹುದು ಎಂದಿದ್ದಾರೆ.

ಇದನ್ನೂ ಓದಿರಿ: ಎಲ್ಲ ಮಾದರಿ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಸ್ಪಿನ್​ ಮಾಂತ್ರಿಕ ಹರ್ಭಜನ್​ ಸಿಂಗ್​​

2007ರ ಟಿ-20 ವಿಶ್ವಕಪ್​ ಹಾಗೂ 2011ರ ಏಕದಿನ ವಿಶ್ವಕಪ್​​ನ ಭಾಗವಾಗಿದ್ದ ಹರ್ಭಜನ್ ಸಿಂಗ್​, 2007ರ ಚುಟುಕು ಕ್ರಿಕೆಟ್​​ನಲ್ಲಿ 7 ವಿಕೆಟ್​ ಹಾಗೂ 2011ರ ವಿಶ್ವಕಪ್​​ನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಫೈನಲ್​ ಪಂದ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

2016ರಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವನ್ನಾಡಿರುವ ಹರ್ಭಜನ್​ ಸಿಂಗ್​, 103 ಟೆಸ್ಟ್​​​ ಪಂದ್ಯಗಳಿಂದ 417 ವಿಕೆಟ್​ ಪಡೆದುಕೊಂಡಿದ್ದಾರೆ. ಏಕದಿನದಲ್ಲಿ 269 ಹಾಗೂ ಟಿ-20ಯಲ್ಲಿ 25 ವಿಕೆಟ್ ಪಡೆದಿದ್ದಾರೆ. ಭಾರತದ ಪರ ಅತಿ ಹೆಚ್ಚು ವಿಕೆಟ್​ ಪಡೆದವರ ಸಾಲಿನಲ್ಲಿ 4ನೇ ಸ್ಥಾನದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.