ETV Bharat / sports

ಏಷ್ಯಾಕಪ್​ನಲ್ಲಿ ಬಾಂಗ್ಲಾ ವಿರುದ್ಧ ಸೋಲು.. ಟೀಮ್​ ಇಂಡಿಯಾ ಕಳೆದುಕೊಂಡಿದ್ದೇನು? - ETV Bharath Kannada news

ಏಷ್ಯಾಕಪ್​ ಸೂಪರ್​ 4 ಹಂತರದ ಕೊನೆಯ ಪಂದ್ಯವನ್ನು ಭಾರತ ಔಪಚಾರಿಕ ಪಂದ್ಯವಾಗಿ ಪರಿಗಣಿಸಿ ಪ್ರಮುಖ ಆಟಗಾರರಿಗೆ ರೆಸ್ಟ್​ ಕೊಟ್ಟಿತ್ತು. ನಿನ್ನೆಯ ಬಾಂಗ್ಲಾ ವಿರುದ್ಧದ ಸೋಲಿನಿಂದ ಭಾರತ ಮಹತ್ವದ ಸ್ಥಾನಕ್ಕೇರುವ ಅವಕಾಶವನ್ನು ಕಳೆದುಕೊಂಡಿದೆ.

Asia Cup
Asia Cup
author img

By ETV Bharat Karnataka Team

Published : Sep 16, 2023, 5:26 PM IST

ನವದೆಹಲಿ : ಏಷ್ಯಾಕಪ್​ನಲ್ಲಿ ಫೈನಲ್​ಗೆ ಪ್ರವೇಶ ಪಡೆದಿದ್ದ ಭಾರತಕ್ಕೆ ನಿನ್ನೆ ಬಾಂಗ್ಲಾ ವಿರುದ್ಧದ ಪಂದ್ಯವನ್ನು ಔಪಚಾರಿಕ ಕದನ ಎಂದೇ ಬಿಂಬಿಸಲಾಗಿತ್ತು. ಇದರಿಂದ ಭಾರತ ತಂಡದಲ್ಲಿ ಪ್ರಮುಖ ಐದು ಬದಲಾವಣೆಗಳನ್ನು ಮಾಡಿ ಮೈದಾನಕ್ಕಿಳಿದಿತ್ತು. ಶುಕ್ರವಾರದ ಸೋಲು ಏಷ್ಯಾಕಪ್​ಗೆ ಯಾವುದೇ ಪರಿಣಾಮ ಬೀರಿಲ್ಲವಾದರೂ ಭಾರತ ದೊಡ್ಡ ನಷ್ಟವನ್ನು ಅನುಭವಿಸಿದೆ.

ಏಷ್ಯಾಕಪ್​ಗೆ ಬಾಂಗ್ಲಾದೇಶ ವಿರುದ್ಧದ ಪಂದ್ಯ ಪ್ರಾಮುಖ್ಯತೆ ಪಡೆದಿಲ್ಲ ಎಂಬ ಕಾರಣಕ್ಕೆ ವಿರಾಟ್​ ಕೊಹ್ಲಿ, ಹಾರ್ದಿಕ್​ ಪಾಂಡ್ಯ, ಕುಲ್ದೀಪ್​ ಯಾದವ್​, ಜಸ್ಪ್ರೀತ್​ ಬುಮ್ರಾ ಮತ್ತು ಮೊಹಮ್ಮದ್​ ಸಿರಾಜ್​ಗೆ ಫೈನಲ್​ ಪಂದ್ಯದ ಸಲುವಾಗಿ ವಿಶ್ರಾಂತಿ ನೀಡಲಾಗಿತ್ತು. ಇವರ ಬದಲಾಗಿ ತಂಡದಲ್ಲಿ ಸೂರ್ಯಕುಮಾರ್​ ಯಾದವ್​, ತಿಲಕ್​ ವರ್ಮಾ, ಶಾರ್ದೂಲ್​ ಠಾಕೂರ್​, ಮೊಹಮ್ಮದ್​ ಶಮಿ ಮತ್ತು ಪ್ರಸಿದ್ಧ್ ಕೃಷ್ಣಗೆ ಅವಕಾಶ ಮಾಡಿಕೊಡಲಾಗಿತ್ತು.

  • Missed opportunity 👀

    India had the chance to become the World No.1 side across formats on the @MRFWorldwide ICC Men’s Team Rankings 👇

    — ICC (@ICC) September 16, 2023 " class="align-text-top noRightClick twitterSection" data=" ">

ಈ ಬದಲಾವಣೆಯಿಂದ ತಂಡಕ್ಕೆ ಹೆಚ್ಚಿನ ಹೊಡೆತ ಆಗಿದೆ ಎಂದು ಹೇಳಲಾಗದು. ಆದರೆ ನಿನ್ನೆ ಪಂದ್ಯವನ್ನು ಗೆದ್ದಿದ್ದರೆ ಭಾರತ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಅಗ್ರಸ್ಥಾನದ ತಂಡವಾಗಿ ಹೊರಹೊಮ್ಮುತ್ತಿತ್ತು. ಈ ಸುವರ್ಣ ಅವಕಾಶ ತಂಡದ ಸೋಲಿನಿಂದಾಗಿ ಕೈತಪ್ಪಿದಂತಾಗಿದೆ. ಅಲ್ಲದೇ ನಿನ್ನೆ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು ಮಣಿಸಿದ್ದು, ಅಗ್ರಸ್ಥಾನಕ್ಕೇರಲು ಭಾರತಕ್ಕೆ ಸುಲಭ ಮಾರ್ಗದಂತಾಗಿತ್ತು. ಆದರೆ 6 ರನ್​ನ ಸೋಲು ನಂ.1 ಸ್ಥಾನವನ್ನು ಕಸಿದುಕೊಂಡಿತು.

ಇತ್ತೀಚೆಗೆ ನವೀಕರಿಸಲಾದ ಏಕದಿನ ಶ್ರೇಯಾಂಕದಲ್ಲಿ ದೊಡ್ಡ ಬದಲಾವಣೆ ಆಯಿತು. ಏಷ್ಯಾಕಪ್​ನಲ್ಲಿ ಎರಡು ಪಂದ್ಯಗಳಲ್ಲಿ ಸೋಲು ಕಂಡ ಪಾಕಿಸ್ತಾನ ತನ್ನ ಅಗ್ರ ಶ್ರೇಯಾಂಕವನ್ನು ಕಳೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿಯಿತು. ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಇನ್ನಿಂಗ್ಸ್​​ಗಳನ್ನು ಆಡಿದ ಆಸ್ಟ್ರೇಲಿಯಾ 118 ಅಂಕದಿಂದ ನಂ.1 ಸ್ಥಾನಕ್ಕೆ ಏರಿಕೆ ಕಂಡಿತು. ಏಷ್ಯಾಕಪ್​ನಲ್ಲಿ ಸತತ ಗೆಲುವು ದಾಖಲಿಸಿದ ಭಾರತವೂ ತನ್ನ ರ್‍ಯಾಂಕಿಂಗ್​ನ್ನು ಸುಧಾರಿಸಿಕೊಂಡು 116 ಅಂಕದಿಂದ ಎರಡನೇ ಸ್ಥಾನಕ್ಕೆ ಬಂದಿದೆ. ನಿನ್ನೆ ಪಂದ್ಯವನ್ನು ಭಾರತ ಗೆದ್ದಿದ್ದರೆ ಏಕದಿನ ಕ್ರಿಕೆಟ್​ನಲ್ಲೂ ಭಾರತ ತಂಡ ನಂ.1 ತಂಡವಾಗಿರುತ್ತಿತ್ತು. ಈಗಾಗಲೇ ಭಾರತ ಟೆಸ್ಟ್​ ಮತ್ತು ಟಿ20ಯಲ್ಲಿ ಅಗ್ರಮಾನ್ಯ ತಂಡವಾಗಿದೆ.

ವಿಶ್ವಕಪ್​ಗೂ ಮುನ್ನ ನಂ.1 ಸ್ಥಾನ?: ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ಗೂ ಮುನ್ನ ಟೀಮ್​ ಇಂಡಿಯಾ ಏಕದಿನ ಕ್ರಿಕೆಟ್​ನ ನಂ.1 ಪಟ್ಟವನ್ನು ಅಲಂಕರಿಸಬಹುದು. ಅದು ಹೇಗೆ ಅಂತಿರಾ..? ವಿಶ್ವಕಪ್​ಗೂ ಮುನ್ನ ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯದ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾವನ್ನು ಮಣಿಸಿದರೆ ನಂ.1 ತಂಡ ಕೆಳಗಿಳಿಯಲಿದೆ. ಭಾರತ ಮತ್ತು ಆಸಿಸ್​ ನಡುವೆ ಕೇವಲ 2 ಅಂಕಗಳ ಅಂತರ ಇದೆ. ಒಂದು ಪಂದ್ಯದ ಸೋಲು - ಗೆಲುವು ಸ್ಥಾನ ಪಲ್ಲಟಕ್ಕೆ ಕಾರಣ ಆಗಲಿದೆ.

ಇದನ್ನೂ ಓದಿ: ಭಾರತ ತಂಡಕ್ಕೆ ಕಾಡಿದ ಗಾಯದ ಸಮಸ್ಯೆ.. ವಿಶ್ವಕಪ್​ ತಂಡದ ಆಟಗಾರ ಏಷ್ಯಾಕಪ್​ನಿಂದ ಹೊರಕ್ಕೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.