ETV Bharat / sports

INDW vs BANW 1st ODI: ಏಕದಿನ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ ಬಾಂಗ್ಲಾಗೆ ಶರಣಾದ ಭಾರತ ತಂಡ

author img

By

Published : Jul 16, 2023, 6:10 PM IST

Updated : Jul 16, 2023, 7:37 PM IST

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾ ಮಹಿಳಾ ತಂಡವು ಐತಿಹಾಸ ನಿರ್ಮಿಸಿದೆ.

India lose by 40 runs to Bangladesh in 1st ODI via DLS method
INDW vs BANW 1st ODI: ಏಕದಿನ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ ಬಾಂಗ್ಲಾಗೆ ಶರಣಾದ ಭಾರತ ತಂಡ

ಮೀರ್‌ಪುರ್ (ಬಾಂಗ್ಲಾದೇಶ): ಏಕದಿನ ಮಾದರಿ ಕ್ರಿಕೆಟ್​ನಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತೀಯ ವನಿತೆಯರ ತಂಡ ಮೊದಲ ಬಾರಿಗೆ ಸೋಲು ಕಂಡಿದೆ. ಭಾರತ ಮತ್ತು ಬಾಂಗ್ಲಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದು, 40 ರನ್​ಗಳಿಂದ ಸೋಲಿಗೆ ಶರಣಾಗಿದೆ.

ಢಾಕಾದ ಶೇರ್ -ಎ- ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಳೆ ಕಾರಣ ಡಿಎಲ್​ಎಸ್​ ಅನ್ವಯ 44 ಓವರ್​ಗಳಿಗೆ ಏಕದಿನ ಪಂದ್ಯವನ್ನು ಸೀಮಿತಗೊಳಿಸಲಾಗಿತ್ತು. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡ 34 ಓವರ್​ಗಳಲ್ಲಿ 152 ರನ್​ ಗಳಿಸಿ ಆಲೌಟ್​ ಆಗಿತ್ತು. ಈ ಸಾಧಾರಣ ಮೊತ್ತದ ಗುರಿ ತಲುಪುವಲ್ಲಿ ಭಾರತೀಯ ತಂಡ ವಿಫಲವಾಗಿದೆ. 35.5 ಓವರ್​ಗಳಲ್ಲಿ ಕೇವಲ 113 ರನ್​ಗಳಿಗೆ ಸರ್ವಪತನ ಕಂಡಿದೆ. ಈ ಗೆಲುವಿನ ಮೂಲಕ ಬಾಂಗ್ಲಾ ಮಹಿಳಾ ತಂಡವು ಐತಿಹಾಸ ನಿರ್ಮಿಸಿದೆ. ಇದು ಭಾರತದ ವಿರುದ್ಧ ಬಾಂಗ್ಲಾ ಕಂಡ ಮೊದಲ ಏಕದಿನ ಪಂದ್ಯದ ಜಯವಾಗಿದೆ.

ಇದನ್ನೂ ಓದಿ: Duleep Trophy: ದಕ್ಷಿಣ ವಲಯ ತಂಡ ದುಲೀಪ್​ ಟ್ರೋಫಿ ಚಾಂಪಿಯನ್!

ಮೊದಲು ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಹರ್ಮನ್‌ಪ್ರೀತ್ ಕೌರ್ ಪಡೆ ಉತ್ತಮವಾದ ಬೌಲಿಂಗ್​ ಪ್ರರ್ದಶಿಸಿತ್ತು. ಆದರೆ, ಸ್ಥಿರ ಬ್ಯಾಟಿಂಗ್​ ಮಾಡುವಲ್ಲಿ ಆಟಗಾರ್ತಿಯರಿಗೆ ಸಾಧ್ಯವಾಗಲಿಲ್ಲ. ಪಂದ್ಯದ ಉದ್ದಕ್ಕೂ ತಂಡದ ರನ್​ ರೇಟ್​ಗೆ ಯಾವುದೇ ಕೊರತೆ ಇರಲಿಲ್ಲ. ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ದೀಪ್ತಿ ಶರ್ಮಾ ಭಾರತ ಪರವಾಗಿ ವೈಯಕ್ತಿಕ ಗರಿಷ್ಠ 20 ರನ್​ ಗಳಿಸಲು ಶಕ್ತರಾದರು.

ಮಾರುಫಾ ಅಕ್ಟರ್‌ ಹಾಗೂ ರಬೇಯಾ ಖಾನ್ ಮಿಂಚು: ಬಾಂಗ್ಲಾ ಬೌಲರ್​​​ಗಳಾದ ಮಾರುಫಾ ಅಕ್ಟರ್‌ ಹಾಗೂ ರಬೇಯಾ ಖಾನ್ ಅವರು ಭಾರತೀಯ ಬ್ಯಾಟರ್​ಗಳನ್ನು ಕಾಡಿದರು. ಮಾರುಫಾ ಅಕ್ಟರ್‌ ಅವರು ಆರಂಭಿಕರಾದ ಸ್ಮೃತಿ ಮಂಧಾನ (11), ಪ್ರಿಯಾ ಪೂನಿಯಾ (10) ಅವರನ್ನು ಬೇಗ ಕಟ್ಟಿ ಹಾಕಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಇಳಿದ ನಾಯಕಿ ಹರ್ಮನ್‌ಪ್ರೀತ್ ಕೌರ್ 5 ರನ್​ಗೆ ನಹಿದಾ ಆಕ್ಟರ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಸಿಲುಕಿ ಪೆವಿಲಿಯನ್​ ಸೇರಿದರು.

ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಯಾಸ್ತಿಕಾ ಭಾಟಿಯಾ (15) ಅವರನ್ನು ರಬೇಯಾ ಖಾನ್ ಬೌಲ್ಡ್​ ಮಾಡಿದರು. ನಂತರ ಜೆಮಿಮಾ ರಾಡ್ರಿಗಸ್ (10) ಸಹ ರಬೇಯಾ ಖಾನ್ ಬೌಲಿಂಗ್​ನಲ್ಲಿ ಕ್ಯಾಚಿತ್ತು ನಿರ್ಮಿಸಿದರು. ಈ ಮೂಲಕ 61 ರನ್​ಗೆ ಭಾರತ ಪ್ರಮುಖ ಐದು ವಿಕೆಟ್​ಗಳನ್ನು ಕಳೆದುಕೊಂಡಿತು. ಇದರ ನಡುವೆ ದೀಪ್ತಿ ಶರ್ಮಾ ಮತ್ತು ಅಮನ್‌ಜೋತ್ ಕೌರ್ ಜೋಡಿ ತಂಡಕ್ಕೆ ಆಸರೆಯಾಗುವ ಮನ್ಸೂಚನೆ ನೀಡಿತ್ತು. 6ನೇ ವಿಕೆಟ್‌ಗೆ 30 ರನ್‌ಗಳ ಜೊತೆಯಾಟ ನೀಡಿತ್ತು. ಆದರೆ, ತಂಡದ ಮೊತ್ತ 91 ರನ್​ ಆಗಿದ್ದಾಗ ಮಾರುಫಾ ಅಕ್ಟರ್‌ ಹಾಗೂ ರಬೇಯಾ ಖಾನ್ ಮತ್ತೆ ಭಾರತಕ್ಕೆ ಶಾಕ್​ ನೀಡಿದರು. ಈ ಇಬ್ಬರ ಬೌಲಿಂಗ್​ನಲ್ಲಿ ಭಾರತ ಹ್ಯಾಟ್ರಿಕ್​ ವಿಕೆಟ್​ ಕಳೆದುಕೊಂಡಿತು.

28ನೇ ಓವರ್​ ಎಸೆದ ಮಾರುಫಾ ಅಕ್ಟರ್‌ ಕೊನೆಯ ಎರಡು ಬಾಲ್​ಗಳಲ್ಲಿ ಅಮನ್‌ಜೋತ್ ಕೌರ್ (15) ಹಾಗೂ ಸ್ನೇಹಾ ರಾಣಾ (0) ವಿಕೆಟ್​ ಕಿತ್ತಿದರು. ನಂತರದ ಓವರ್​ನಲ್ಲಿ ಬೌಲಿಂಗ್ ಮಾಡಿದ ರಬೇಯಾ ಖಾನ್ ಮೊದಲ ಎಸತೆದಲ್ಲಿ ದೀಪ್ತಿ ಶರ್ಮಾ ವಿಕೆಟ್​ ಉರುಳಿಸಿದರು. ಇದರಿಂದ ಭಾರತ ದಿಢೀರ್​ ಕುಸಿತ ಕಂಡು ಸೋಲಿನ ಸುಳಿಗೆ ಸಿಲುಕಿತು. ಕೊನೆಯಲ್ಲಿ ಪೂಜಾ ವಸ್ತ್ರಕರ್ 7 ರನ್​ ಹಾಗೂ ಬಾರೆಡ್ಡಿ ಅನುಷಾ 2 ರನ್​ ಹಾಗೂ ದೇವಿಕಾ ವೈದ್ಯ ಅಜೇಯ 10 ರನ್​ಗೆ ಸೀಮಿತವಾದರು. ಬಾಂಗ್ಲಾ ಪರ ಮಾರುಫಾ ಅಕ್ಟರ್‌ 29 ರನ್​ಗೆ 4 ವಿಕೆಟ್​ ಪಡೆದರೆ, ರಬೇಯಾ ಖಾನ್ 30 ರನ್​ಗೆ 3 ವಿಕೆಟ್​ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪಾದಾರ್ಪಣೆ ಪಂದ್ಯದಲ್ಲಿ 4 ಟಿಕೆಟ್​ ಕಿತ್ತಿದ್ದ ಅಮನ್‌ಜೋತ್ ಕೌರ್: ಮತ್ತೊಂದೆಡೆ, ಭಾರತ ತಂಡ ಸೋತರೂ ಪಾದಾರ್ಪಣೆ ಪಂದ್ಯದಲ್ಲೇ ಅಮನ್‌ಜೋತ್ ಕೌರ್ ಬೌಲಿಂಗ್​ನಲ್ಲಿ ಗಮನ ಸೆಳೆದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಅಮನ್‌ಜೋತ್ ಕೌರ್ 4 ಟಿಕೆಟ್​ ಕಬಳಿಸಿದರು. 9 ಓವರ್​ ಬೌಲ್​ ಮಾಡಿದ 23 ವರ್ಷದ ಯುವ ಆಟಗಾರ್ತಿ 2 ಮೇಡಿನ್​ಗಳೊಂದಿಗೆ 31 ರನ್​ ನೀಡಿ 4 ವಿಕೆಟ್​ ಪಡೆದರು. ಆದರೆ, 9 ವೈಡ್​ಗಳನ್ನು ಕೌರ್​ ಎಸೆದರು.

Last Updated : Jul 16, 2023, 7:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.