ನವದೆಹಲಿ : ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯುವ ಸೌತಾಂಪ್ಟನ್ ಪಿಚ್ ವೇಗಿಗಳಿಗೆ ನೆರವು ನೀಡಿದರೆ, ನ್ಯೂಜಿಲ್ಯಾಂಡ್ ತಂಡ ಭಾರತದ ವಿರುದ್ಧ ಮೇಲುಗೈ ಸಾಧಿಸಲಿದೆ ಎಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಸ್ತುತ ಯುಕೆಯಲ್ಲಿ ಮಳೆ ಮತ್ತು ಚಳಿಯಿಂದ ಕೂಡಿರುವ ವಾತಾವಾರಣವಿದೆ. ಇದು ಜೂನ್ 18ರಿಂದ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದವರೆಗೆ ಮುಂದುವರಿದರೆ ನ್ಯೂಜಿಲ್ಯಾಂಡ್ಗೆ ಹೆಚ್ಚು ನೆರವು ನೀಡಲಿದೆ ಎಂದು ಪನೇಸರ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಇಂಗ್ಲೆಂಡ್ನಲ್ಲಿ ಸಾಕಷ್ಟು ಮಳೆ ಸುರಿಯುತ್ತಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯದವರೆಗೂ ಇದೇ ವಾತಾವರಣವಿದ್ದರೆ, ಎರಡೂ ತಂಡಗಳ ಬೌಲರ್ಗಳ ನಡುವೆ ಆಸಕ್ತಿದಾಯಕ ಹೋರಾಟವನ್ನು ನಾವು ನೋಡಬಹುದಾಗಿದೆ.
ಈ ಪರಿಸ್ಥಿತಿಯಲ್ಲಿ ಚಲಿಸುವ ಚೆಂಡನ್ನು ಭಾರತೀಯ ಬ್ಯಾಟ್ಸ್ಮನ್ಗಳಿಗಿಂತ ಕಿವೀಸ್ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಆಡಲಿದ್ದಾರೆ".
"ಆದ್ದರಿಂದ, ಟೆಸ್ಟ್ ಪಂದ್ಯದ ಸಮಯದಲ್ಲಿ ಚೆಂಡು ಸ್ವಿಂಗ್ ಆಗುತ್ತಿದೆಯೇ ಮತ್ತು ಕೆಲವು ಹಂತದಲ್ಲಿ ಚಲಿಸುತ್ತಿದೆಯೇ ಎಂದು ನೋಡಲು ಸಾಕಷ್ಟು ಆಸಕ್ತಿದಾಯಕವಾಗಿದೆ.
ಆದರೆ, ನ್ಯೂಜಿಲೆಂಡ್‌ಗೆ ಹೋಲಿಸಿದರೆ ಭಾರತೀಯ ಬ್ಯಾಟ್ಸ್‌ಮನ್‌ಗಳು ಈ ಸಂದರ್ಭವನ್ನು ಹೇಗೆ ನಿಭಾಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ" ಎಂದು ಪನೇಸರ್ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದ್ದಾರೆ.
ಆದರೆ, ಸೌತಾಂಪ್ಟನ್ನಲ್ಲಿ ಬಿಸಿಲು ಬಂದರೆ ಭಾರತ ತಂಡಕ್ಕೆ ಹೆಚ್ಚು ಅನುಕೂಲವಾಗಲಿದೆ. ಆಗ ಭಾರತ ತಂಡ ಇಬ್ಬರು ಸ್ಪಿನ್ನರ್(ಜಡೇಜಾ ಮತ್ತು ಆಶ್ವಿನ್) ಮತ್ತು ಮೂವರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಬಹುದು.
ಭಾರತ ತಂಡ ಆಗ ನೆಚ್ಚಿನ ತಂಡವಾಗಬಹುದು. ಆದರೆ, ಅದೆಲ್ಲಾ ಹವಾಮಾನದ ಮೇಲೆ ಅವಲಂಭಿಸಿದೆ ಎಂದು ಪನೇಸರ್ ತಿಳಿಸಿದ್ದಾರೆ.
ನ್ಯೂಜಿಲ್ಯಾಂಡ್ ತಂಡ ಇಂಗ್ಲೆಂಡ್ ವಿರುದ್ಧ ಜೂನ್ 2ರಿಂದ ಟೆಸ್ಟ್ ಸರಣಿಯನ್ನಾಡಲಿದೆ. ಅದೇ ದಿನದಂದು ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.
ಇದನ್ನು ಓದಿ:ಹೀಗಾದ್ರೆ... ಆಂಗ್ಲರ ವಿರುದ್ಧ ಭಾರತ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಲಿದೆ: ಇಂಗ್ಲೆಂಡ್ ಮಾಜಿ ಬೌಲರ್