ETV Bharat / sports

2024ರ ಕ್ರಿಕೆಟ್ ವೇಳಾಪಟ್ಟಿ: ಈ ವರ್ಷವಾದರೂ ಟ್ರೋಫಿ ಗೆಲ್ಲುತ್ತಾ ಭಾರತ?

India Team cricket schedule: 2024ರಲ್ಲಿ ಭಾರತ ಪುರುಷರ ಕ್ರಿಕೆಟ್​​ ತಂಡ 12 ಟೆಸ್ಟ್‌, ಮೂರು ಏಕದಿನ ಮತ್ತು ಒಂಬತ್ತು ಟಿ20 ಪಂದ್ಯಗಳನ್ನು ಆಡಲಿದೆ.

India cricket schedule
India cricket schedule
author img

By ETV Bharat Karnataka Team

Published : Jan 1, 2024, 1:57 PM IST

ಹೈದರಾಬಾದ್: ವೆಸ್ಟ್​ ಇಂಡೀಸ್​ ಮತ್ತು ಯುಎಸ್​ಎನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಹೊರತುಪಡಿಸಿ ಭಾರತ ಪುರುಷರ ತಂಡ ಈ ವರ್ಷ ಕನಿಷ್ಠ 12 ಟೆಸ್ಟ್‌, ಮೂರು ಏಕದಿನ ಮತ್ತು ಒಂಬತ್ತು ಟಿ20 ಪಂದ್ಯಗಳನ್ನು ಆಡಲಿದೆ. 2023ರಲ್ಲಿ ಏಕದಿನ ವಿಶ್ವಕಪ್​​ನಲ್ಲಿ ರನ್ನರ್​ ಅಪ್​ ಆಗಿರುವ ಭಾರತ, ಟಿ20 ವಿಶ್ವಕಪ್​ ಗೆಲ್ಲುವ ತವಕದಲ್ಲಿದೆ. ಮುಂದಿನ ಕ್ಯಾಲೆಂಡರ್ ವರ್ಷದ ಭಾರತ ಪುರುಷರ ಕ್ರಿಕೆಟ್ ವೇಳಾಪಟ್ಟಿ ಹೀಗಿದೆ.

  • ದಕ್ಷಿಣ ಆಫ್ರಿಕಾ ಪ್ರವಾಸ: ಜನವರಿ 2024: ಭಾರತವು ಡಿಸೆಂಬರ್ 2023ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿತ್ತು. ಮೂರು ಟಿ20, ಏಕದಿನ ಮತ್ತು ಎರಡು ಟೆಸ್ಟ್​ ಪಂದ್ಯಗಳು ಈ ಸರಣಿಯಲ್ಲಿವೆ. ಏಕದಿನ, ಟಿ20, 1ನೇ ಟೆಸ್ಟ್​ ಡಿಸೆಂಬರ್​ನಲ್ಲೇ ಮುಕ್ತಾಯಗೊಂಡಿದ್ದು ಕೊನೆಯ ಟೆಸ್ಟ್​​ ಜನವರಿ 3ರಿಂದ 7ರವರೆಗೆ ನಡೆಯಲಿದೆ.
  • ಅಫ್ಘನ್ ವಿರುದ್ಧ ಟಿ20: ಜನವರಿ 11ರಿಂದ ಟಿ20 ವಿಶ್ವಕಪ್​ ತಯಾರಿ ಹಿನ್ನೆಲೆಯಲ್ಲಿ 3 ಪಂದ್ಯಗಳು ನಡೆಯಲಿವೆ. ಅಫ್ಘಾನಿಸ್ತಾನ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. 11 ಮೊಹಾಲಿ, 14 ಇಂದೋರ್​ ಮತ್ತು 17ರಂದು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ. ಟಿ20 ವಿಶ್ವಕಪ್​ಗೂ ಮುನ್ನ ಇರುವ ಕೊನೆಯ ಅಂತರರಾಷ್ಟ್ರೀಯ ಟಿ20 ಸರಣಿ ಇದಾಗಿದೆ.
  • ಆಂಗ್ಲರ ವಿರುದ್ಧ ಐದು ಟೆಸ್ಟ್​​: ಜನವರಿ-ಮಾರ್ಚ್: ಅಫ್ಘನ್​ ವಿರುದ್ಧದ ಟಿ20 ಮುಗಿದ ನಂತರ ಇಂಗ್ಲೆಂಡ್​ ವಿರುದ್ಧ ಭಾರತ ಐದು ಟೆಸ್ಟ್​ ಪಂದ್ಯಗಳ ಸುದೀರ್ಘ ಸರಣಿ ಆಡಲಿದೆ. 2025ರ ವಿಶ್ವ ಟೆಸ್ಟ್​​ ಚಾಂಪಿಯನ್​ ಶಿಪ್​ ಹಿನ್ನೆಲೆಯಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಜನವರಿ 25ರಿಂದ ಮಾರ್ಚ್​​ 11 ರವರೆಗೆ ಪಂದ್ಯಗಳು ನಡೆಯಲಿದೆ.
  • ಟಿ20 ವಿಶ್ವಕಪ್ 2024: ವೆಸ್ಟ್​ ಇಂಡೀಸ್​ ಮತ್ತು ಯುಎಸ್​ಎ: 17ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ ಮುಗಿದ ಬೆನ್ನಲ್ಲೇ 2024 ಪುರುಷರ ಟಿ20 ವಿಶ್ವಕಪ್ ನಡೆಯಲಿದೆ. ಜೂನ್ 4 ರಂದು ಪ್ರಾರಂಭವಾಗುವ ಪಂದ್ಯಾವಳಿಯು ಜೂನ್ 30ರ ವರೆಗೆ ಇರಲಿದೆ. ಟಿ20 ವಿಶ್ವಕಪ್​ನ ಚೊಚ್ಚಲ ಆವೃತ್ತಿ ಮಾತ್ರ ಗೆದ್ದಿರುವ ಭಾರತ ಮತ್ತೊಂದು ಯಶಸ್ಸಿನ ಗುರಿಯನ್ನು ಎದುರು ನೋಡುತ್ತಿದೆ. ಅಲ್ಲದೇ, 11 ವರ್ಷಗಳ ಐಸಿಸಿ ಟ್ರೋಫಿಯ ಬರವನ್ನು ನೀಗಿಸುವತ್ತ ಹವಣಿಸುತ್ತಿದೆ.
  • ಲಂಕಾ ಪ್ರವಾಸ: ವಿಶ್ವಕಪ್​ ಪ್ರವಾಸದ ನಂತರ ಭಾರತ ಲಂಕೆಗೆ ಪ್ರಯಾಣಿಸಲಿದೆ. ಶ್ರೀಲಂಕಾದಲ್ಲಿ ಮೂರು ಏಕದಿನ ಮತ್ತು ಮೂರು ಟಿ20ಗಳು ನಡೆಯಲಿದೆ. ಪ್ರವಾಸದ ದಿನಾಂಕಗಳು ಇನ್ನೂ ನಿಗದಿಯಾಗಿಲ್ಲ.
  • ಬಾಂಗ್ಲಾ ವಿರುದ್ಧ ಟಿ20- ಟೆಸ್ಟ್​​: ಆಗಸ್ಟ್​ನಲ್ಲಿ ತಂಡ ವಿರಾಮ ಪಡೆದ ನಂತರ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಪಂದ್ಯಗಳನ್ನು ಆಡಲಿದೆ. ಸಪ್ಟೆಂಬರ್ ತಿಂಗಳಲ್ಲಿ ಎರಡು ಟೆಸ್ಟ್​​, 3 ಟಿ20 ಪಂದ್ಯಗಳು ನಡೆಯಲಿದೆ. ಮಾರ್ಚ್​​ ನಂತರ ಸುಮಾರು ಆರು ತಿಂಗಳ ಅಂತರದಲ್ಲಿ ಭಾರತ ಮತ್ತೆ ರೆಡ್​ ಬಾಲ್ ಕ್ರಿಕೆಟ್​ ಆಡಲಿದೆ.
  • ಕಿವೀಸ್​ ವಿರುದ್ಧ ಮೂರು ಟೆಸ್ಟ್​​: ಅಕ್ಟೋಬರ್​ನಲ್ಲಿ ಭಾರತ ನ್ಯೂಜಿಲೆಂಡ್​ ವಿರುದ್ಧ ತವರಿನಲ್ಲೇ ಮೂರು ಟೆಸ್ಟ್​ ಪಂದ್ಯಗಳ ಸರಣಿಯನ್ನು ಆಡಲಿದೆ. ಇದು 2023-25ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಅಂತಿಮ ಸರಣಿ ಆಗಿರಲಿದೆ.
  • ವರ್ಷಾಂತ್ಯಕ್ಕೆ ಕಾಂಗರೂಗಳೊಂದಿಗೆ ಪೈಪೋಟಿ: ನವೆಂಬರ್-ಡಿಸೆಂಬರ್​ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ವರ್ಷವನ್ನು ಕೊನೆಗೊಳಿಸುತ್ತದೆ. ಇದು 2025ರ ವರೆಗೆ ನಡೆಯುವ ಸಾಧ್ಯತೆ ಇದೆ. ಸರಣಿಯ ವೇಳಾಪಟ್ಟಿ ಇನ್ನೂ ದೃಢೀಕರಿಸದ ಕಾರಣ ಐದು ಟೆಸ್ಟ್‌ಗಳು ನಡೆಯುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಇದನ್ನೂ ಓದಿ: 2024ರಲ್ಲಿ ಕ್ರೀಡೆ: ಒಲಿಂಪಿಕ್ಸ್​, ಟಿ20 ಕ್ರಿಕೆಟ್‌ ವಿಶ್ವಕಪ್​ ಮೇಲೆ ಎಲ್ಲರ ಕಣ್ಣು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.