ಹರಾರೆ: ಜಿಂಬಾಬ್ವೆ ವಿರುದ್ಧ ಸೋಲಿಲ್ಲದ ಸರದಾರನಾಗಿ ಗುರುತಿಸಿಕೊಂಡಿರುವ ಟೀಂ ಇಂಡಿಯಾ ಮೂರು ಏಕದಿನ ಪಂದ್ಯಗಳ ಸರಣಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಕೊನೆಯ ಪಂದ್ಯದಲ್ಲಿ 13ರನ್ಗಳ ರೋಚಕ ಗೆಲುವು ದಾಖಲಿಸಿರುವ ಯಂಗ್ ಇಂಡಿಯಾ, ಆತಿಥೇಯರ ವಿರುದ್ಧ ಸತತ ಗೆಲುವಿನ ನಾಗಾಲೋಟ ಮುಂದುವರೆಸಿದೆ.
ಜಿಂಬಾಬ್ವೆ ರಾಜಧಾನಿ ಹರಾರೆ ಸ್ಫೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ 13 ರನ್ಗಳ ಗೆಲುವು ದಾಖಲು ಮಾಡಿದೆ. ಕೊನೆಯ ಓವರ್ವರೆಗೆ ಹೋರಾಟ ನಡೆಸಿದ ಜಿಂಬಾಬ್ವೆ ಗೆಲುವಿನ ಕನಸು ಮಾತ್ರ ಯಶಸ್ವಿಯಾಗಲಿಲ್ಲ. ತಂಡದ ಪರ ಮಿಂಚಿದ ಅನುಭವಿ ಬ್ಯಾಟರ್ ಸಿಕಂದರ್ ರಾಜಾ(115) ಹೋರಾಟ ವ್ಯರ್ಥವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾದ ಬ್ಯಾಟರ್ ಶುಬ್ಮನ್ ಗಿಲ್(130) ಚೊಚ್ಚಲ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8ವಿಕೆಟ್ನಷ್ಟಕ್ಕೆ 289ರನ್ಗಳಿಕೆ ಮಾಡಿತು. ಇದರ ಬೆನ್ನತ್ತಿದ್ದ ಜಿಂಬಾಬ್ವೆ ತಂಡ 49.3 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 13ರನ್ಗಳ ಸೋಲು ಕಂಡಿತು.
-
That's that from the final ODI.
— BCCI (@BCCI) August 22, 2022 " class="align-text-top noRightClick twitterSection" data="
A close game, but it was #TeamIndia who win by 13 runs and take the series 3-0 #ZIMvIND pic.twitter.com/3VavgKJNsS
">That's that from the final ODI.
— BCCI (@BCCI) August 22, 2022
A close game, but it was #TeamIndia who win by 13 runs and take the series 3-0 #ZIMvIND pic.twitter.com/3VavgKJNsSThat's that from the final ODI.
— BCCI (@BCCI) August 22, 2022
A close game, but it was #TeamIndia who win by 13 runs and take the series 3-0 #ZIMvIND pic.twitter.com/3VavgKJNsS
ಭಾರತದ ಇನ್ನಿಂಗ್ಸ್: ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಧವನ್-ರಾಹುಲ್ ಜೋಡಿ 63ರನ್ಗಳ ಜೊತೆಯಾಟವಾಡಿದರು. 30ರನ್ಗಳಿಕೆ ಮಾಡಿದ್ದ ವೇಳೆ ಕ್ಯಾಪ್ಟನ್ ಕೆ ಎಲ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಧವನ್ ಕೂಡ(40) ಬ್ರಾಂಡ್ ಇವನ್ಸ್ಗೆ ಬಲಿಯಾದರು.
ಗಿಲ್- ಕಿಶನ್ ಜೊತೆಯಾಟ: ಆರಂಭಿಕ ಆಟಗಾರರ ಔಟಾದ ಬಳಿಕ ಒಂದಾದ ಗಿಲ್-ಕಿಶನ್ ಜೋಡಿ ತಂಡಕ್ಕೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಎದುರಾಳಿ ಬೌಲರ್ಗಳ ಮೇಲೆ ಸವಾರಿ ನಡೆಸಿದ ಈ ಜೋಡಿ 150+ರನ್ಗಳ ಜೊತೆಯಾಟವಾಡಿದರು. ಈ ವೇಳೆ 50ರನ್ಗಳಿಕೆ ಮಾಡಿದ್ದ ಕಿಶನ್ ರನೌಟ್ ಬಲೆಗೆ ಬಿದ್ದರು.
ಜಿಂಬಾಬ್ವೆಯಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಮಾಡಿದ ಗಿಲ್: ಜಿಂಬಾಬ್ವೆ ಬೌಲರ್ಗಳನ್ನ ಹಿಗ್ಗಾಮುಗ್ಗಾ ಥಳಿಸಿದ ಗಿಲ್ ದಾಖಲೆಯ 130ರನ್ಗಳಿಕೆ ಮಾಡಿದರು. ಜೊತೆಗೆ ಜಿಂಬಾಬ್ವೆ ನೆಲದಲ್ಲಿ 130ರನ್ಗಳಿಸಿ ದಾಖಲೆ ಬರೆದರು. ಈ ಹಿಂದೆ 1998ರಲ್ಲಿ ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ ಅಜೇಯ 127ರನ್ಗಳಿಕೆ ಮಾಡಿದ್ದು, ಇಲ್ಲಿಯ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಇಂದಿನ ಪಂದ್ಯದಲ್ಲಿ ಗಿಲ್ ಕೇವಲ 82 ಎಸೆತಗಳಲ್ಲಿ ಶತಕ ಸಿಡಿಸಿದರು.
ದಿಢೀರ್ ವಿಕೆಟ್ ಪತನ: ಇಶಾನ್ ಕಿಶನ್ ಔಟಾಗುತ್ತಿದ್ದಂತೆ ಟೀಂ ಇಂಡಿಯಾದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ದೀಪಕ್ ಹೂಡಾ(1), ಸ್ಯಾಮ್ಸನ್(15), ಅಕ್ಸರ್ ಪಟೇಲ್(1), ಶಾರ್ದೂಲ್ ಠಾಕೂರ್(9)ರನ್ಗಳಿಸಿ ಔಟಾದರು. ತಂಡ ಕೊನೆಯದಾಗಿ 50 ಓವರ್ಗಳಲ್ಲಿ 8ವಿಕೆಟ್ ನಷ್ಟಕ್ಕೆ 289ರನ್ಗಳಿಕೆ ಮಾಡಿತು. ಜಿಂಬಾಬ್ವೆ ಪರ ಬ್ರಾಂಡ್ ಎವಿನ್ಸ್ ಐದು ವಿಕೆಟ್ ಪಡೆದರೆ, ಜಾಂಗ್ವೆ ಹಾಗೂ ವಿಕ್ಟರಿ ತಲಾ 1 ವಿಕೆಟ್ ಪಡೆದುಕೊಂಡರು.
ಜಿಂಬಾಬ್ವೆ ಇನ್ನಿಂಗ್ಸ್: ಟೀಂ ಇಂಡಿಯಾ ನೀಡಿದ್ದ 290ರನ್ಗಳ ಬೃಹತ್ ಗುರಿ ಬೆನ್ನತ್ತಿದ್ದ ಜಿಂಜಾಬ್ವೆ ಆರಂಭದಲ್ಲೇ ಮತ್ತೊಮ್ಮೆ ವೈಫಲ್ಯ ಅನುಭವಿಸಿತು. ಕೈಟಿನೋ-ಇನೊಸೆಟ್ ಜೋಡಿ ಟೀಂ ಇಂಡಿಯಾ ಬೌಲಿಂಗ್ ಎದುರಿಸುವಲ್ಲಿ ಮತ್ತೊಮ್ಮೆ ವಿಫಲವಾಯಿತು. ಕೇವಲ 6ರನ್ಗಳಿಸಿದ್ದ ಇನೊಸಿಟ್ ಚಹರ್ಗೆ ಬಲೆಯಾದರೆ, ಕೈಟಿನೋ(13) ಕುಲ್ದೀಪ್ ಯಾದವ್ ಬಲೆಗೆ ಬಿದ್ದರು. ಮಧ್ಯಮ ಕ್ರಮಾಂಕದಲ್ಲಿ ಸಿನಾ ವಿಲಿಮ್ಸ್(45)ರನ್, ಟೊನಿ(15)ರನ್ಗಳಿಸಿದರು.
ಏಕಾಂಗಿಯಾಗಿ ಹೋರಾಡಿದ ಸಿಕಂದರ್ ರಾಜಾ: ಜಿಂಬಾಬ್ವೆ ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ, ಅನುಭವಿ ಬ್ಯಾಟರ್ ಸಿಕಂದರ್ ಏಕಾಂಗಿ ಹೋರಾಟ ನಡೆಸಿದರು. ಈ ಮೂಲಕ ಟೀಂ ಇಂಡಿಯಾದಲ್ಲಿ ಸೋಲಿನ ಛಾಯೆ ಮೂಡಿಸಿದರು. ಆದರೆ, 49ನೇ ಓವರ್ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಈ ಪ್ಲೇಯರ್ ತಾವು ಎದುರಿಸಿದ 95 ಎಸೆತಗಳಲ್ಲಿ 3 ಸಿಕ್ಸರ್, 9 ಬೌಂಡರಿ ಸೇರಿ 115ರನ್ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಬ್ರಾಂಡ್ ಎವಿಸ್ ಕೂಡ 28ರನ್ಗಳಿಸಿದರು. ಆದರೆ, ಇವರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಜಿಂಬಾಬ್ವೆ ಗೆಲುವಿನ ಕನಸು ಕೈಬಿಟ್ಟಿತು.
ಇದನ್ನೂ ಓದಿ: IND v s ZIM 3rd ODI: ಗಿಲ್ ಸ್ಫೋಟಕ 130ರನ್.. ಜಿಂಬಾಬ್ವೆ ಗೆಲುವಿಗೆ 290 ರನ್ ಟಾರ್ಗೆಟ್
ಟೀಂ ಇಂಡಿಯಾ ಪರ ಆವೇಶ್ ಖಾನ್ 3 ವಿಕೆಟ್ ಪಡೆದುಕೊಂಡರೆ, ಕುಲ್ದೀಪ್ ಯಾದವ್, ದೀಪಕ್ ಚಹರ್, ಅಕ್ಸರ್ ಪಟೇಲ್ ತಲಾ 2 ವಿಕೆಟ್ ಹಾಗೂ ಶಾರ್ದೂಲ್ 1 ವಿಕೆಟ್ ಕಿತ್ತರು.
ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ಗಳ ಗೆಲುವು ದಾಖಲು ಮಾಡಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ 5 ವಿಕೆಟ್ಗಳ ಅಂತರದಿಂದ ಗೆದ್ದು, ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಗೆದ್ದಿತ್ತು. ಕೊನೆಯ ಪಂದ್ಯದಲ್ಲೂ ಜಯ ದಾಖಲಿಸಿ, ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಜಿಂಬಾಬ್ವೆ ವಿರುದ್ಧ ಆಡಿರುವ ಯಾವುದೇ ಪಂದ್ಯದಲ್ಲಿ ಸೋಲು ಕಾಣದ ತಂಡವಾಗಿ ಹೊರಹೊಮ್ಮಿದೆ.