ETV Bharat / sports

ವಿಶ್ವಕಪ್ ಅಭ್ಯಾಸ ಪಂದ್ಯ: ಆಸೀಸ್ ವಿರುದ್ಧ ಭಾರತಕ್ಕೆ 8 ವಿಕೆಟ್​ಗಳ ಸುಲಭ ಜಯ - ರೋಹಿತ್ ಶರ್ಮಾ ಅರ್ಧಶತಕ

ಟಿ20 ವಿಶ್ವಕಪ್​ನ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ನೀಡಿದ್ದ 153 ರನ್​ಗಳ ಸಾಧಾರಣ ಗುರಿಯನ್ನು ಕೇವಲ 2 ವಿಕೆಟ್ ಕಳೆದುಕೊಂಡು ತಲುಪಿದೆ.

India beat Australia in world cup warm up match
ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಜಯ
author img

By

Published : Oct 20, 2021, 7:19 PM IST

Updated : Oct 20, 2021, 7:28 PM IST

ದುಬೈ: ರೋಹಿತ್ ಶರ್ಮಾ ಅರ್ಧಶತಕ ಮತ್ತು ಬೌಲರ್​ಗಳ ಅಮೋಘ ಪ್ರದರ್ಶನದ ನೆರವಿನಿಂದ ಭಾರತ ತಂಡ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಆಸ್ಟ್ರೇಲಿಯಾ ನೀಡಿದ್ದ 153 ರನ್​ಗಳ ಸಾಧಾರಣ ಗುರಿಯನ್ನು ಭಾರತ ತಂಡ ಕೇವಲ 2 ವಿಕೆಟ್ ಕಳೆದುಕೊಂಡು ತಲುಪಿತು. ಆರಂಭಿಕ ರಾಹುಲ್​ 31 ಎಸೆತಗಳಲ್ಲಿ 3 ಸಿಕ್ಸರ್​ ಮತ್ತು 2 ಬೌಂಡರಿಗಳ ನೆರವಿನಿಂದ 39ರನ್​ಗಳಿಸಿ ಆಷ್ಟನ್ ಅಗರ್​ಗೆ ವಿಕೆಟ್​ ಒಪ್ಪಿಸಿದರು.

ನಾಯಕ ರೋಹಿತ್ ಶರ್ಮಾ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 60 ರನ್​ಗಳಿಸಿ ನಿವೃತ್ತಿ ತೆಗೆದುಕೊಂಡರು. ಸೂರ್ಯಕುಮಾರ್ ಯಾದವ್​ 27 ಎಸೆತಗಳಲ್ಲಿ ಅಜೇಯ 38 ಮತ್ತು ಹಾರ್ದಿಕ್ ಪಾಂಡ್ಯ ಅಜೇಯ 14 ರನ್​ಗಳಿಸಿ ಇನ್ನು 13 ಎಸೆತಗಳಿರುವಂತೆ ಭಾರತಕ್ಕೆ ಗೆಲುವು ತಂದುಕೊಟ್ಟರು.

ಇದಕ್ಕು ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಆರಂಭಿಕ ಆಘಾತದ ನಡುವೆಯೂ 152 ರನ್​ಗಳಿಸಿತ್ತು. ಸ್ಟೀವ್ ಸ್ಮಿತ್ 57, ಮಾರ್ಕಸ್ ಸ್ಟೋಯ್ನಿಸ್ 41 ಮತ್ತು ಮ್ಯಾಕ್ಸ್​ವೆಲ್ 37 ರನ್​ಗಳಿಸಿದ್ದರು.

ಭಾರತದ ಪರ ಆರ್ ಅಶ್ವಿನ್ 2 ಓವರ್​ಗಳಲ್ಲಿ 8 ರನ್​ ನೀಡಿ 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ 27ಕ್ಕೆ1, ಜಡೇಜಾ 35ಕ್ಕೆ 1 ಮತ್ತು ರಾಹುಲ್ ಚಹರ್​ 17ಕ್ಕೆ1 ವಿಕೆಟ್​ ಪಡೆದರು.

ಭಾರತ ತಂಡ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸಿತ್ತು. ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ವಿಶ್ವಕಪ್ ಅಭಿಯಾನ ಆರಂಭಿಸಲಿರುವ ಕೊಹ್ಲಿ ಪಡೆಗೆ ಅಭ್ಯಾಸ ಪಂದ್ಯಗಳ ಈ ಎರಡು ಜಯ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.

ಇದನ್ನು ಓದಿ:ಧೋನಿ ತಂಡದಲ್ಲಿರುವುದನ್ನ ಇಷ್ಟಪಡುತ್ತೇವೆ, ಅವರ ಪ್ರತಿ ಸಲಹೆ ಬಳಸಿಕೊಳ್ಳುತ್ತೇವೆ: ಕೆ. ಎಲ್.​ ರಾಹುಲ್​

Last Updated : Oct 20, 2021, 7:28 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.