ಢಾಕಾ(ಬಾಂಗ್ಲಾದೇಶ): ಢಾಕಾದ ಶೇರ್ ಎ ಬಾಂಗ್ಲಾ ಮೈದಾನದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಮುಂದಿನ ವಿಶ್ವಕಪ್‌ಗೆ ತಾಲೀಮಿನ ಭಾಗವಾಗಿ ಉಭಯ ತಂಡಗಳು ಸೆಣಸಾಡಲಿವೆ.
ರಿಷಬ್ ಪಂತ್ ಸರಣಿಯಿಂದಲೇ ಹೊರಕ್ಕೆ: ಸತತ ವೈಫಲ್ಯ ಕಾಣುತ್ತಿರುವ ವಿಕೆಟ್ ಕೀಪರ್ ರಿಷಬ್ ಪಂತ್ಗೆ ಸರಣಿಯಿಂದಲೇ ವಿಶ್ರಾಂತಿ ನೀಡಲಾಗಿದೆ. ವೈದ್ಯರ ಸೂಚನೆಯ ಮೇರೆಗೆ ಪಂತ್‌ರನ್ನು ಸರಣಿಯಿಂದ ಕೈಬಿಡಲಾಗಿದೆ. ಇದಕ್ಕೆ ಕಾರಣ ಏನೆಂಬುದನ್ನು ಸ್ಪಷ್ಟಪಡಿಸಿಲ್ಲ. ಅಲ್ಲದೇ ಸರಣಿಗೆ ಬದಲಿ ಆಟಗಾರರನ್ನೂ ಸೂಚಿಸಿಲ್ಲ. ಏಕದಿನದ ಬಳಿಕ ನಡೆಯುವ ಟೆಸ್ಟ್ಗೆ ರಿಷಬ್ ಪಂತ್ ವಾಪಸ್ಸಾಗಲಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಐಪಿಎಲ್ನಲ್ಲಿ ಮಿಂಚು ಹರಿಸಿದ ಯುವ ವೇಗಿ ಕುಲದೀಪ್ ಸೆನ್ ಮೊದಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಆಡುವ ಹನ್ನೊಂದರ ಬಳಗದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಪದಾರ್ಪಣೆ ಮಾಡಲಿದ್ದಾರೆ. ಅಭ್ಯಾಸದ ವೇಳೆ ಚೆಂಡು ಎದೆಗೆ ಬಡಿದ ಕಾರಣ ಅಕ್ಷರ್ ಪಟೇಲ್ಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದೆ.
-
🚨 Toss & Team News 🚨
— BCCI (@BCCI) December 4, 2022 " class="align-text-top noRightClick twitterSection" data="
Bangladesh have elected to bowl against #TeamIndia in the first #BANvIND ODI.
Follow the match 👉 https://t.co/XA4dUcD6iy
A look at our Playing XI 🔽 pic.twitter.com/cwbB8cdXfP
">🚨 Toss & Team News 🚨
— BCCI (@BCCI) December 4, 2022
Bangladesh have elected to bowl against #TeamIndia in the first #BANvIND ODI.
Follow the match 👉 https://t.co/XA4dUcD6iy
A look at our Playing XI 🔽 pic.twitter.com/cwbB8cdXfP🚨 Toss & Team News 🚨
— BCCI (@BCCI) December 4, 2022
Bangladesh have elected to bowl against #TeamIndia in the first #BANvIND ODI.
Follow the match 👉 https://t.co/XA4dUcD6iy
A look at our Playing XI 🔽 pic.twitter.com/cwbB8cdXfP
ತಂಡಗಳು- ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಮೊಹಮ್ಮದ್ ಸಿರಾಜ್, ಕುಲದೀಪ್ ಸೆನ್.
ಬಾಂಗ್ಲಾದೇಶ: ಲಿಟ್ಟನ್ ದಾಸ್ (ನಾಯಕ), ಅನಾಮುಲ್ ಹಕ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್, ಮುಸ್ಪಿಕರ್ ರಹೀಮ್, ಮಹಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಹಸನ್ ಮಹ್ಮದ್, ಮುಸ್ತಾಫಿಜರ್ ರೆಹಮಾನ್, ಎಬಾಡೋತ್ ಹೊಸೈನ್.
ಇದನ್ನೂ ಓದಿ: ಭಾರತ-ಬಾಂಗ್ಲಾ ಮೊದಲ ಏಕದಿನ ಇಂದು: ಮುಂದಿನ ವಿಶ್ವಕಪ್‌ಗೆ ರೋಹಿತ್ ಟೀಂ ತಾಲೀಮು