ಆ್ಯಂಟಿಗುವಾ (ವೆಸ್ಟ್ ಇಂಡೀಸ್): 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಇಂದು ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಟೀಂ ಇಂಡಿಯಾದ ಪ್ರಮುಖ ಆಟಗಾರರು ಕೋವಿಡ್‌ನಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ.
ಗ್ರೂಪ್ ಹಂತದಲ್ಲಿ ಐರ್ಲೆಂಡ್ ಎದುರಿನ ಪಂದ್ಯದ ಸಂದರ್ಭದಲ್ಲಿ ಭಾರತ ತಂಡದ ನಾಯಕ ಯಶ್ ಧುಲ್ ಸೇರಿ ಆರು ಆಟಗಾರರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಇವರೆಲ್ಲ ತಂಡದಿಂದ ಪ್ರತ್ಯೇಕವಾಗಿದ್ದರೂ ಭಾರತ ಲೀಗ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ನಾಕೌಟ್ ಹಂತಕ್ಕೆ ತಲುಪಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಭಾರತ ತಂಡವು ನಾಲ್ಕು ಬಾರಿ ಚಾಂಪಿಯನ್ ಆಗಿದ್ದು, ಮತ್ತೊಮ್ಮೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಪ್ರಮುಖರ ಅನುಪಸ್ಥಿತಿಯಲ್ಲೂ ಐರ್ಲೆಂಡ್ ವಿರುದ್ಧ ಭಾರತಕ್ಕೆ 174 ರನ್ಗಳ ಭರ್ಜರಿ ಗೆಲುವು ಸಾಧಿಸಿತ್ತು.
ಹಾಲಿ ಚಾಂಪಿಯನ್ ಬಾಂಗ್ಲಾದೇಶ ತಂಡವು ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿತ್ತು. ಬಳಿಕ ಕೆನಡಾ ಮತ್ತು ಯುಎಇ ವಿರುದ್ಧ ಜಯ ಸಾಧಿಸಿ ಎಂಟರ ಘಟ್ಟಕ್ಕೆ ಪ್ರವೇಶ ಪಡೆದಿದೆ.
ತಂಡಗಳು ಇಂತಿವೆ:
ಭಾರತ: ಯಶ್ ಧುಲ್ (ನಾಯಕ), ಹರ್ನೂರ್ ಸಿಂಗ್, ಅಂಗಕ್ರಿಷ್ ರಘುವಂಶಿ, ಶೇಖ್ ರಶೀದ್, ನಿಶಾಂತ್ ಸಿಂಧು, ಸಿದ್ಧಾರ್ಥ್ ಯಾದವ್, ಅನೀಶ್ವರ್ ಗೌತಮ್, ಮಾನವ ಪರಕ್, ಕೌಶಲ್ ತಾಂಬೆ, ರಾಜವರ್ಧನ್ ಹಂಗರ್ಗೆಕರ್, ವಿಕ್ಕಿ ಓಸ್ವಾಲ್, ಗರ್ವ್ ಸಂಗ್ವಾನ್, ದಿನೇಶ್ ಬಾನಾ, ಆರಾಧ್ಯ ಯಾದವ್, ರಾಜ್ ಬಾವಾ, ವಾಸು ವತ್ಸ್, ರವಿ ಕುಮಾರ್
ಬಾಂಗ್ಲಾದೇಶ: ರಕಿಬುಲ್ ಹಸನ್ (ನಾಯಕ), ಅಬ್ದುಲ್ಲಾ ಅಲ್ ಮಮೂನ್, ಅರಿಫೂಲ್ ಇಸ್ಲಾಂ, ಮೊಹಮ್ಮದ್ ಫಾಹಿಮ್, ಮಹಫಿಜುಲ್ ಇಸ್ಲಾಂ, ರಿಪೊನ್ ಮಂಡಲ್, ನೈಮುರ್ ರೋಹ್ಮನ್, ತಂಜೀಮ್ ಸಹನ್ ಸಕೀಬ್, ಪಾಂತಿಕ್ ನವ್ರೋಸ್ ನಬೀಲ್, ಐಷ್ ಮೊಲ್ಹಾ, ಅಶಿಕುರು್ ಜಮಾನ್, ಇಫ್ತಿಕಾರ್ ಹುಸೇನ್ ಇಫ್ತಿ, ಎಸ್.ಎಂ. ಮೆಹ್ರೂಬ್, ಮುಷ್ಫಿಕ್ ಹಸನ್, ತಹಜೀಬುಲ್ ಇಸ್ಲಾಂ
ಇದನ್ನೂ ಓದಿ: ರೋಹಿತ್ ಬಳಿ ಧೋನಿ, ಗಂಭೀರ್ ಅವರಂತಹ ನಾಯಕತ್ವದ ಗುಣ, ಆತನೋರ್ವ ಪ್ರೇರಕ ಎಂದ ಡರೇನ್