ಲೀಡ್ಸ್ : ಇಂಗ್ಲೆಂಡ್ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತೀಯ ಬ್ಯಾಟ್ಸ್ಮನ್ಗಳು 3ನೇ ಟೆಸ್ಟ್ನ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 78 ರನ್ಗಳಿಗೆ ಸರ್ವ ಪತನಗೊಂಡಿದೆ.
ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಅನಿರೀಕ್ಷಿತ ಪತನ ಕಂಡಿತು. ಕೇವಲ 21 ರನ್ಗಳಾಗುವಷ್ಟರಲ್ಲಿ ಕಳೆದ ಪಂದ್ಯದ ಶತಕ ವೀರ ಕೆ ಎಲ್ ರಾಹುಲ್(0), ಚೇತೇಶ್ವರ್ ಪೂಜಾರ(1) ಮತ್ತು ನಾಯಕ ವಿರಾಟ್ ಕೊಹ್ಲಿ(7)ಯನ್ನು ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಪೆವಿಲಿಯನ್ಗಟ್ಟಿದರು.
ನಂತರ ಬಂದ ಅಜಿಂಕ್ಯ ರಹಾನೆ(18) ರೋಹಿತ್ ಜೊತೆಗೂಡಿ 35 ರನ್ ಜೊತೆಯಾಟ ನೀಡಿ ಔಟಾದರು. ಇದು ಭಾರತದ ಇನ್ನಿಂಗ್ಸ್ ಗರಿಷ್ಠ ಜೊತೆಯಾಟವಾಗಿತ್ತು. ರಹಾನೆ ವಿಕೆಟ್ ನಂತರ ಭಾರತ ತಂಡ ದಿಢೀರ್ ಪತನಗೊಂಡಿತು.
-
India are all out ☝️
— ICC (@ICC) August 25, 2021 " class="align-text-top noRightClick twitterSection" data="
An excellent bowling performance from the hosts on day one in Leeds 👏#WTC23 | #ENGvIND | https://t.co/AZCdNvbRbc pic.twitter.com/gTOS7U1Gc6
">India are all out ☝️
— ICC (@ICC) August 25, 2021
An excellent bowling performance from the hosts on day one in Leeds 👏#WTC23 | #ENGvIND | https://t.co/AZCdNvbRbc pic.twitter.com/gTOS7U1Gc6India are all out ☝️
— ICC (@ICC) August 25, 2021
An excellent bowling performance from the hosts on day one in Leeds 👏#WTC23 | #ENGvIND | https://t.co/AZCdNvbRbc pic.twitter.com/gTOS7U1Gc6
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್(2), ರವೀಂದ್ರ ಜಡೇಜಾ(4), ರೋಹಿತ್ ಶರ್ಮಾ(19) ಮೊಹಮ್ಮದ್ ಶಮಿ(0) ಮತ್ತು ಜಸ್ಪ್ರೀತ್ ಬುಮ್ರಾ(0) ಬಂದ ಬಿರುಸಿನಲ್ಲೇ ಪೆವಿಲಿಯನ್ಗೆ ಮರಳಿದರು. ಸಿರಾಜ್ 3 ರನ್ಗಳಿಸಿ ಕೊನೆಯ ಬ್ಯಾಟ್ಸ್ಮನ್ ಆಗಿ ವಿಕೆಟ್ ಒಪ್ಪಿಸಿದರೆ, ಇಶಾಂತ್ 8 ರನ್ಗಳಿಸಿ ಅಜೇಯರಾಗುಳಿದರು.
ಭಾರತದ ಪರ ರೋಹಿತ್ ಶರ್ಮಾ (19) ಮತ್ತು ಅಜಿಂಕ್ಯ ರಹಾನೆ ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು. ಉಳಿದವರೆಲ್ಲಾ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ 6ಕ್ಕೆ3, ಆಲ್ಲಿ ರಾಬಿನ್ಸನ್ 16ಕ್ಕೆ2, ಸ್ಯಾಮ್ ಕರ್ರನ್ 23ಕ್ಕೆ2, ಕ್ರೇಗ್ ಓವರ್ಟರ್ನ್ 14ಕ್ಕೆ 3 ವಿಕೆಟ್ ಪಡೆದು ಭಾರತವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.
ಇದನ್ನು ಓದಿ : ಹೆಚ್ಚು ಬಾರಿ ಕೊಹ್ಲಿ ವಿಕೆಟ್ ಪಡೆದ ದಾಖಲೆ, ಲಿಯಾನ್ ಜೊತೆ ಹಂಚಿಕೊಂಡ ಆ್ಯಂಡರ್ಸನ್