ಕೊಲಂಬೊ : ಶ್ರೀಲಂಕಾ ವಿರುದ್ಧ ಭಾರತ ತಂಡದ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದೆ. ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಸಿಂಹಳೀಯರ ಬೌಂಡರಿ ಸುತ್ತ ಓಡಿಸಿ ಸುಸ್ತು ಮಾಡಿಸಿದರೆ, ಇಂದೇ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಇಶಾನ್ ಕಿಶನ್ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಜನ್ಮದಿನವನ್ನು ಸಾರ್ಥಕಪಡಿಸಿಕೊಂಡಿದ್ದಾರೆ.
23ನೇ ವಸಂತಕ್ಕೆ ಕಾಲಿಟ್ಟ ಇಶಾನ್ ಕಿಶನ್ ಭಾರತ ತಂಡದ 25ನೇ ವಿಕೆಟ್ ಕೀಪರ್ ಆಗಿ ಪದಾರ್ಪಣೆ ಮಾಡಿದ್ದರು. ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ 43(24)ರನ್ಗಳಿಸಿ ಔಟಾಗುತ್ತಿದ್ದಂತೆ ಕ್ರೀಸ್‌ಗೆ ಆಗಮಿಸಿದ ಕಿಶನ್, ತಾವೆದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಖಾತೆ ತೆರೆದರು. ವಿಶೇಷವೆಂದರೆ ಇದೇ ಓವರ್ನಲ್ಲಿ ಪೃಥ್ವಿ ಶಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ದರು. ಆದರೆ, ಇಶಾನ್ ಇದನ್ನು ಲೆಕ್ಕಿಸದೇ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದರು.
ಟಿ20ಯಲ್ಲೂ ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ
ಇಶಾನ್ ಕಿಶನ್ ಕಳೆದ ಮಾರ್ಚ್ನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ವಿಶೇಷವೆಂದರೆ ಆ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ಬೌಂಡರಿ ಮೂಲಕ ಖಾತೆ ತೆರೆದಿದ್ದರು. ಅಷ್ಟೇ ಅಲ್ಲದೆ 32 ಎಸೆತಗಳಲ್ಲಿ 56 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಚಿದ್ದರು.
ಬೌಂಡರಿ ಮೂಲಕವೇ ಅರ್ಧಶತಕ
ಇನ್ನು, ಸಿಕ್ಸರ್ ಮೂಲಕ ಖಾತೆ ತೆರೆದ ಕಿಶನ್ ತಾವೆದುರಿಸಿದ ಟಿ20 ಮಾದರಿಯಲ್ಲಿ ಬ್ಯಾಟಿಂಗ್ ನಡೆಸಿ 33ನೇ ಎಸೆತದಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 8 ಆಕರ್ಷಕ ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್ ಸೇರಿತ್ತು.
ಇದನ್ನು ಓದಿ: ಜನ್ಮದಿನದಂದೇ ಏಕದಿನ ಕ್ರಿಕೆಟ್ಗೆ ಇಶಾನ್ ಕಿಶನ್ ಪದಾರ್ಪಣೆ