ETV Bharat / sports

Ind vs Eng: ಭಾರತಕ್ಕೆ ಮರಳಿದ ಗಾಯಾಳು ಶುಬ್ಮನ್ ಗಿಲ್​ - ಭಾರತ ತಂಡದಿಂದ ಇಂಗ್ಲೆಂಡ್ ಪ್ರವಾಸ

ಶುಬ್ಮನ್ ಗಿಲ್​ ಟೆಸ್ಟ್​ ಸರಣಿಯಿಂದ ಹೊರಬೀಳುತ್ತಿದ್ದಂತೆ ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್​ ಅವರ ಸ್ಥಾನಕ್ಕೆ ಬೇರೊಬ್ಬ ಆಟಗಾರನನ್ನು ಕಳುಹಿಸಿಕೊಡುವಂತೆ ಪತ್ರ ಬರೆದಿತ್ತು. ಪೃಥ್ವಿ ಶಾ ಮತ್ತು ದೇವದತ್ ಪಡಿಕ್ಕಲ್​ರನ್ನು ಕಳುಹಿಸಿಕೊಡುವಂತೆ ಮ್ಯಾನೇಜ್​ ಮೆಂಟ್ ಇಮೇಲ್ ಮಾಡಿದೆ ಎಂಬ ಗುಮಾನಿಗಳು ಕೇಳಿನ ಬಂದಿದ್ದವು.

Gill returns home after being ruled out of Test series
ಶುಬ್ಮನ್ ಗಿಲ್​
author img

By

Published : Jul 21, 2021, 10:25 PM IST

Updated : Jul 21, 2021, 10:31 PM IST

ಮುಂಬೈ: ಇಂಗ್ಲೆಂಡ್​ ಪ್ರವಾಸದಲ್ಲಿ ಗಾಯಗೊಂಡಿದ್ದ ಶುಬ್ಮನ್​ ಗಿಲ್​ ತವರಿಗೆ ಮರಳಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ ಪೋಸ್ಟ್​ ಮಾಡಿದ್ದು, ಮನೆಗೆ ಬಂದಿರುವ ವಿಷಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ವೇಳೆ ಭಾರತ ತಂಡದ ಭಾಗವಾಗಿದ್ದ ಗಿಲ್​ ಎರಡೂ ಇನ್ನಿಂಗ್ಸ್ ಮೂಲಕ ಕ್ರಮವಾಗಿ 28 ಮತ್ತು 8 ರನ್​ಗಳಿಸಿದ್ದರು. ಈ ವೇಳೆ ಮಣಿಕಟ್ಟಿಗೆ ಗಂಭೀರ ಗಾಯವಾಗಿದ್ದರಿಂದ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದರು.

ಶುಬ್ಮನ್​ ಗಿಲ್​ ಏರ್​ಪೋರ್ಟ್​ ರನ್​ವೇಯಲ್ಲಿರುವ ಫೋಟೋ ಮತ್ತು ಮನೆಯಲ್ಲಿ ವೆಲ್​ಕಮ್​ ಟು ಹೋಮ್​ ಶುಬಿ ಎಂದು ಬರೆದಿರುವ ಕೇಕ್​ ಪೋಟೋವನ್ನು ತಮ್ಮ ಇನ್​ಸ್ಟಾಗ್ರಾಮನಲ್ಲಿ ಬರೆದುಕೊಂಡಿದ್ದರು.

ಶುಬ್ಮನ್​ ಗಿಲ್​ ಫೋಟೋ
ಶುಬ್ಮನ್​ ಗಿಲ್​ ಫೋಟೋ

ಶುಬ್ಮನ್ ಗಿಲ್​ ಟೆಸ್ಟ್​ ಸರಣಿಯಿಂದ ಹೊರಬೀಳುತ್ತಿದ್ದಂತೆ ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್​ ಅವರ ಸ್ಥಾನಕ್ಕೆ ಬೇರೊಬ್ಬ ಆಟಗಾರನನ್ನು ಕಳುಹಿಸಿಕೊಡುವಂತೆ ಪತ್ರ ಬರೆದಿತ್ತು. ಪೃಥ್ವಿ ಶಾ ಮತ್ತು ದೇವದತ್ ಪಡಿಕ್ಕಲ್​ರನ್ನು ಕಳುಹಿಸಿಕೊಡುವಂತೆ ಮ್ಯಾನೇಜ್​ ಮೆಂಟ್ ಇಮೇಲ್ ಮಾಡಿದೆ ಎಂಬ ಗುಮಾನಿಗಳು ಕೇಳಿನ ಬಂದಿದ್ದವು.

Gill returns home after being ruled out of Test series
ಶುಬ್ಮನ್​ ಗಿಲ್​ಗೆ ಸ್ವಾಗತ ಕೋರಿದ ​ ಮನೆಯ ಸದಸ್ಯರು

ಆದರೆ ಆಯ್ಕೆಗಾರರು ಈಗಾಗಲೇ ಇಂಗ್ಲೆಂಡ್​ ಸರಣಿಗಾಗಿ ಮೀಸಲು ಆಟಗಾರನಾಗಿ ಆಯ್ಕೆಯಾಗಿರುವ ಅಭಿಮನ್ಯು ಈಶ್ವರನ್​ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ತಿಳಿಸಿದ್ದರು.

ಇದನ್ನೂ ಓದಿ:ದೀಪಕ್‌ ಚಹಾರ್‌ 'ನಿನಗೆ ಕ್ರಿಕೆಟ್‌ ಆಗಿಬರೋಲ್ಲ, ಬೇರೆ ಕೆಲಸವಿದ್ದರೆ ನೋಡಿಕೋ' ಎಂದಿದ್ದರಂತೆ ಗ್ರೆಗ್ ಚಾಪೆಲ್‌!

Last Updated : Jul 21, 2021, 10:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.