ಎಡ್ಜಬಾಸ್ಟನ್(ಬರ್ಮಿಂಗ್ಹ್ಯಾಮ್): ಇಂಗ್ಲೆಂಡ್ ವಿರುದ್ಧ ನಡೆದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಸ್ಫೋಟಕ ಶತಕ ಸಿಡಿಸಿ ಮಿಂಚಿದರು. ಇವರ ಅದ್ಭುತ ಆಟಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಕೋಚ್ ರಾಹುಲ್ ದ್ರಾವಿಡ್ ಕೂಡ ಸಂಭ್ರಮಿಸಿದ್ದಾರೆ.
ಕೇವಲ 89ರನ್ಗಳಿಕೆ ಮಾಡುವಷ್ಟರಲ್ಲಿ ಟೀಂ ಇಂಡಿಯಾ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು. ಈ ವೇಳೆ ಮೈದಾನಕ್ಕೆ ಬಂದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಪಂತ್ ಆಕರ್ಷಕ ಇನ್ನಿಂಗ್ಸ್ ಕಟ್ಟಿದರು. ಎದುರಾಳಿ ಬೌಲರ್ಗಳ ಮೇಲೆ ಪ್ರಹಾರ ನಡೆಸಿದ ಈ ಪ್ಲೇಯರ್ ತಾವು ಎದುರಿಸಿದ 89 ಎಸೆತಗಳಲ್ಲಿ 15 ಬೌಂಡರಿ 1 ಸಿಕ್ಸರ್ ಸಮೇತ ಶತಕ ಸಿಡಿಸಿ ಮಿಂಚಿದರು. ಪಂತ್ ಅದ್ಭುತ ಆಟ ಪ್ರದರ್ಶಿಸುತ್ತಿದ್ದಂತೆ ಕೋಚ್ ರಾಹುಲ್ ದ್ರಾವಿಡ್ ಸಂಭ್ರಮಿಸಿದ್ದಾರೆ.
-
You gotta be Rishabh Pant to make Rahul Dravid celebrate like that, what a knock!pic.twitter.com/buhmslVry6
— Mufaddal Vohra (@mufaddal_vohra) July 1, 2022 " class="align-text-top noRightClick twitterSection" data="
">You gotta be Rishabh Pant to make Rahul Dravid celebrate like that, what a knock!pic.twitter.com/buhmslVry6
— Mufaddal Vohra (@mufaddal_vohra) July 1, 2022You gotta be Rishabh Pant to make Rahul Dravid celebrate like that, what a knock!pic.twitter.com/buhmslVry6
— Mufaddal Vohra (@mufaddal_vohra) July 1, 2022
ಪಂದ್ಯದ 58ನೇ ಓವರ್ನಲ್ಲಿ ಪಂತ್ ಶತಕ ಸಾಧನೆ ಮಾಡ್ತಿದ್ದಂತೆ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತಿದ್ದ ಭಾರತದ ಮುಖ್ಯ ಕೋಚ್ ರಾಹುಲ್ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಜೊತೆಗೆ ಎರಡು ಕೈ ಮೇಲಕ್ಕೆತ್ತಿ ಸಂಭ್ರಮಿಸಿದ್ದಾರೆ. ಇದರ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸದಾ ಶಾಂತ ಸ್ವಭಾವದಲ್ಲಿ ಕಾಣುವ ಕೋಚ್ ದ್ರಾವಿಡ್, ಈ ರೀತಿಯಾಗಿ ಸಂಭ್ರಮಿಸುವುದು ತುಂಬಾ ವಿರಳ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿರಿ: ENG vs IND Test: ಆಪತ್ಬಾಂಧವನಾದ ಪಂತ್! 89 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ ಉಪನಾಯಕ
ಪಂತ್ ಅದ್ಭುತ ಇನ್ನಿಂಗ್ಸ್ಗೆ ಡೆಲ್ಲಿ ಕ್ಯಾಪಿಟಲ್, ವಿರೇಂದ್ರ ಸೆಹ್ವಾಗ್, ಮಾಜಿ ಕೋಚ್ ರವಿಶಾಸ್ತ್ರಿ ಸೇರಿದಂತೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 24 ವರ್ಷದ ಪಂತ್ ತಾವು ಎದುರಿಸಿದ 111 ಎಸೆತಗಳಲ್ಲಿ 20 ಬೌಂಡರಿ, 4 ಸಿಕ್ಸರ್ ಸಮೇತವಾಗಿ 146ರನ್ಗಳಿಕೆ ಮಾಡಿ, ವಿಕೆಟ್ ಒಪ್ಪಿಸಿದರು. ವಿಶೇಷವೆಂದರೆ, ಇಂಗ್ಲೆಂಡ್ ನೆಲದಲ್ಲಿ ರಿಷಭ್ ಪಂತ್ ಎರಡು ಶತಕ ಸಿಡಿಸಿರುವ ಸಾಧನೆ ಮಾಡಿದ್ದಾರೆ.