ಓವಲ್(ಇಂಗ್ಲೆಂಡ್): ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ಆಲ್ಔಟ್ ಆಗಿದೆ. ಟೀಂ ಇಂಡಿಯಾ ಬೌಲರ್ಗಳ ಕರಾರುವಾಕ್ ದಾಳಿಗೆ ಸಿಲುಕಿದ ಇಂಗ್ಲೆಂಡ್ 84 ಓವರ್ಗಳಲ್ಲಿ 290 ರನ್ ಗಳಿಸಿ 90 ರನ್ನುಗಳ ಮುನ್ನಡೆ ಪಡೆಯಿತು. ಇದೀಗ ಭಾರತ ಎರಡನೇ ಇನ್ನಿಂಗ್ಸ್ ಆರಂಭಿಸಿದೆ.
-
Innings Break!
— BCCI (@BCCI) September 3, 2021 " class="align-text-top noRightClick twitterSection" data="
England are all out for 290. Lead by 99 runs.
Scorecard - https://t.co/OOZebPnBZU #ENGvIND pic.twitter.com/lEJRn1t7u0
">Innings Break!
— BCCI (@BCCI) September 3, 2021
England are all out for 290. Lead by 99 runs.
Scorecard - https://t.co/OOZebPnBZU #ENGvIND pic.twitter.com/lEJRn1t7u0Innings Break!
— BCCI (@BCCI) September 3, 2021
England are all out for 290. Lead by 99 runs.
Scorecard - https://t.co/OOZebPnBZU #ENGvIND pic.twitter.com/lEJRn1t7u0
ಇಂಗ್ಲೆಂಡ್ ತಂಡ ಮೂರು ವಿಕೆಟ್ಗಳನ್ನು ಮೊದಲ ದಿನದಾಟದಲ್ಲೇ ಕಳೆದುಕೊಂಡಿತ್ತು. ಇಂದು ಉಮೇಶ್ ಯಾದವ್ 2, ಶಾರ್ದೂಲ್ ಠಾಕೂರ್ ಮತ್ತು ಸಿರಾಜ್ ತಲಾ ಒಂದು ವಿಕೆಟ್ ಮತ್ತು ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದುಕೊಳ್ಳುವ ಮೂಲಕ ಇಂಗ್ಲೆಂಡ್ ರನ್ ಮುನ್ನಡೆ ಕೇವಲ 90 ರನ್ಗಳಿಗೆ ಸೀಮಿತಗೊಳಿಸಲು ಸಫಲರಾಗಿದರು.
ಮೊದಲನೇ ದಿನದಾಟದಲ್ಲಿ ಬೂಮ್ರಾ 2 ವಿಕೆಟ್, ಉಮೇಶ್ ಯಾದವ್ ಒಂದು ವಿಕೆಟ್ ಪಡೆದಾಕ್ಷಣ ಆತಿಥೇಯರನ್ನು ಆದಷ್ಟು ಬೇಗ ಆಲ್ಔಟ್ ಮಾಡಬಹುದು ಎಂಬ ಆಸೆಗೆ ಇಂಗ್ಲೆಂಡ್ ದಾಂಡಿಗರು ತಣ್ಣೀರೆರಚಿದ್ದಾರೆ.
ಕ್ರಿಸ್ ವೋಕ್ಸ್ ಮಿಂಚಿನ ಆಟ
ಒಲ್ಲಿ ಪೋಪ್ 159 ಎಸೆತಗಳಲ್ಲಿ 81 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಸಮಾಧಾನಕರ ಮೊತ್ತ ತಲುಪಲು ಸಾಧ್ಯವಾಗಿದೆ. ಇದರ ಜೊತೆಗೆ ಕ್ರಿಸ್ ವೋಕ್ಸ್ 60 ಎಸೆತಗಳಲ್ಲಿ 50 ರನ್ ಗಳಿಸಿ, ಮಿಂಚಿನ ಆಟವಾಡಿದರು. ಇದರ ಜೊತೆಗೆ ಇಂದು ಬೇರ್ಸ್ಟೋ 37, ಮೊಯೀನ್ 35, ರೂಟ್ 21 ರನ್ ಗಳಿಸಿ, ಭಾರತೀಯ ಬೌಲರ್ಗಳ ದಾಳಿಗೆ ಸಿಕ್ಕು, ಪೆವಿಲಿಯನ್ಗೆ ತೆರಳಿದ್ದಾರೆ. ಜೇಮ್ಸ್ ಆ್ಯಂಡರ್ಸನ್ ನಾಟ್ಔಟ್ ಆಗದ ಕೇವಲ ಒಂದು ರನ್ ಗಳಿಸಿದ್ದಾರೆ.
ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ಆರಂಭಿಸಿದ್ದು ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ತಾಳ್ಮೆಯ ಆಟವಾಡುತ್ತಿದ್ದಾರೆ.
ಇದನ್ನೂ ಓದಿ: Tokyo Paralympics: ಆರ್ಚರಿಯಲ್ಲಿ ಮೊದಲ ಕಂಚಿನ ಪದಕ ತಂದುಕೊಟ್ಟ ಹರ್ವಿಂದರ್ ಸಿಂಗ್