ಹೈದರಾಬಾದ್: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಮತ್ತು ಅಂತಿಮ ಟಿ-20 ಪಂದ್ಯ ಬುಧವಾರ (ನಿನ್ನೆ) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಈ ರೋಚಕ ಪಂದ್ಯದಲ್ಲಿ ಎರಡು ಸೂಪರ್ ಓವರ್‌ಗಳು ಕಂಡುಬಂದವು. ಭಾರತ ನೀಡಿದ 212 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಅಫ್ಘಾನಿಸ್ತಾನ ಕೂಡ 20 ಓವರ್‌ಗಳಲ್ಲಿ 212 ರನ್ ಗಳಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಈ ವೇಳೆ ಸೂಪರ್ ಓವರ್ ನಡೆಸಲಾಯಿತು. ಅದೂ ಕೂಡ ಡ್ರಾನಲ್ಲೇ ಕೊನೆಗೊಂಡಿತು. ಇದಾದ ಬಳಿಕ ಎರಡನೇ ಸೂಪರ್ ಓವರ್ ನಡೆಯಿತು ಅದರಲ್ಲಿ ಭಾರತ ತಂಡ ಗೆಲುವು ಸಾಧಿಸಿತು.
-
The Virat Kohli save at the boundary is looking like Jasprit Bumrah's bowling action. 😂👏 pic.twitter.com/1aETp5gQCA
— Mufaddal Vohra (@mufaddal_vohra) January 17, 2024 " class="align-text-top noRightClick twitterSection" data="
">The Virat Kohli save at the boundary is looking like Jasprit Bumrah's bowling action. 😂👏 pic.twitter.com/1aETp5gQCA
— Mufaddal Vohra (@mufaddal_vohra) January 17, 2024The Virat Kohli save at the boundary is looking like Jasprit Bumrah's bowling action. 😂👏 pic.twitter.com/1aETp5gQCA
— Mufaddal Vohra (@mufaddal_vohra) January 17, 2024
ಈ ರೋಚಕ ಪಂದ್ಯದಲ್ಲಿ ಮತ್ತೊಂದು ರೋಚಕ ಸಂಗತಿ ಕೂಡ ಕಂಡುಬಂದಿದೆ. ವಾಸ್ತವವಾಗಿ, ಕಿಂಗ್ ಕೊಹ್ಲಿ ಪಂದ್ಯದಲ್ಲಿ ಒಂದೂ ರನ್ ಗಳಿಸಲು ಸಾಧ್ಯವಾಗದಿದ್ದರೂ, ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೇ ಅವರ ಅದ್ಭುತ ಫೀಲ್ಡಿಂಗ್ನ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಕೂಡ ಆಗಿದೆ.
-
Jasprit Bumrah 😂😂😂 pic.twitter.com/DreOOqTXJc
— ٰImran Siddique (@imransiddique89) January 17, 2024 " class="align-text-top noRightClick twitterSection" data="
">Jasprit Bumrah 😂😂😂 pic.twitter.com/DreOOqTXJc
— ٰImran Siddique (@imransiddique89) January 17, 2024Jasprit Bumrah 😂😂😂 pic.twitter.com/DreOOqTXJc
— ٰImran Siddique (@imransiddique89) January 17, 2024
ಎರಡನೇ ಇನಿಂಗ್ಸ್‌ನ 17ನೇ ಓವರ್‌ನಲ್ಲಿ, ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಸ್ಟ್ರೈಕ್ನಲ್ಲಿದ್ದ ಕರೀಂ ಜನ್ನತ್ ಬ್ಯಾಕ್ ಫುಟ್‌ನಲ್ಲಿ ಚೆಂಡನ್ನು ಬೌಂಡರಿಯತ್ತ ಬಾರಿಸಿದ್ದರು. ಈ ವೇಳೆ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಸಿಕ್ಸರ್ ಹೋಗದಂತೆ ಹೈಜಂಪ್ ಮಾಡಿ ಚೆಂಡನ್ನು ತಡೆದು 5ರನ್ ಉಳಿಸಿದ್ದರು.
ಕೊಹ್ಲಿ ಜಂಪ್ ಮಾಡುವ ಫೋಟೋ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಲ್ಲಿ ಕೊಹ್ಲಿ ಫೀಲ್ಡಿಂಗ್ ಆಕ್ಷನ್ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡುವ ಶೈಲಿಯಂತೆ ಕಂಡುಬಂದಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ಜನರು ಈ ಕೊಹ್ಲಿ ಫೀಲ್ಡಿಂಗ್ನ ಚಿತ್ರ ಮತ್ತು ಬುಮ್ರಾ ಅವರ ಬೌಲಿಂಗ್ ಮಾಡುತ್ತಿರುವ ಚಿತ್ರಗಳನ್ನು ಹೋಲಿಕೆ ಮಾಡಿ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟಿ-20ಯಲ್ಲಿ ಮೊದಲ ಬಾರಿಗೆ ಗೋಲ್ಡನ್ ಡಕ್ ಔಟಾದರು. 14 ತಿಂಗಳ ನಂತರ ಟಿ-20 ಪುನರಾಗಮನ ಮಾಡಿದ್ದಾರೆ. ಇದಕ್ಕೂ ಮುನ್ನ ಕೊಹ್ಲಿ 2022ರ ಟಿ-20 ವಿಶ್ವಕಪ್‌ನಲ್ಲಿ ಆಡಿದ್ದರು. ಇದುವರೆಗೂ ಕೊಹ್ಲಿ 117 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದು, ಒಂದು ಶತಕ ಮತ್ತು 37 ಅರ್ಧಶತಕಗಳೊಂದಿಗೆ 4037 ರನ್ಗಳನ್ನು ಕಲೆ ಹಾಕಿದ್ದಾರೆ. ಟಿ20ಯಲ್ಲಿ 12000 ರನ್ಗಳನ್ನು ಪೂರೈಸಲು ಕೇವಲ 6ರನ್‌ಗಳ ಅವಶ್ಯಕತೆ ಇದೆ.
ಇದನ್ನೂ ಓದಿ: ಸೂಪರ್ ಓವರ್‌ನಲ್ಲಿ ರಿಟೈರ್ಡ್ ಆಗಿ ಮತ್ತೆ ಬ್ಯಾಟಿಂಗ್ಗಿಳಿದ ರೋಹಿತ್: ಐಸಿಸಿ ರೂಲ್ಸ್ ಹೇಳುವುದೇನು?