ಮುಂಬೈ: ಟಿ20 ಕ್ರಿಕೆಟ್ನ ಅತ್ಯಂತ ಪ್ರಸಿದ್ಧ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ನೇರಪ್ರಸಾರದ ಹಕ್ಕಿಗಾಗಿ ಬಿಸಿಸಿಐ ಈಗಾಗಲೇ ಟೆಂಡರ್ ಕರೆದಿದೆ. ಬೃಹತ್ ಮೊತ್ತವನ್ನು ನಿಗದಿ ಮಾಡಿದ್ದರೂ ವಿಶ್ವಪ್ರಸಿದ್ಧ ಕೆಲವು ಕಂಪನಿಗಳು ಶ್ರೀಮಂತ ಲೀಗ್ನ ನೇರ ಪ್ರಸಾರದ ಹಕ್ಕನ್ನು ಖರೀದಿಸಲು ಉತ್ಸಾಹ ತೋರಿವೆ.
2022ರ ಐಪಿಎಲ್ ಆವೃತ್ತಿಯೊಂದಿಗೆ ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಒಪ್ಪಂದ ಅಂತಿಮವಾಗಲಿದೆ. 2023-27ರ ವರೆಗಿನ ಐಪಿಎಲ್ ಪ್ರಸಾರದ ಅಧಿಕೃತ ಹಕ್ಕನ್ನು ಈ ಬಾರಿ ಬಿಸಿಸಿಐ ಹರಾಜಿನ ಮೂಲಕ ಮಾರಾಟ ಮಾಡಲಿದ್ದು, ಇದಕ್ಕಾಗಿ ಬರೋಬ್ಬರಿ 32,890 ಕೋಟಿ ರೂಪಾಯಿಯನ್ನು ನಿಗದಿಮಾಡಿದೆ. 2022ರಿಂದ 84ರ ಬದಲಾಗಿ 10 ತಂಡಗಳು ಕಣಕ್ಕಿಳಿದಿವೆ. ಹೀಗಾಗಿ 2 ತಿಂಗಳ ಅವಧಿಯಲ್ಲಿ ಬರೋಬ್ಬರಿ 74 ಪಂದ್ಯಗಳು ನಡೆಯಲಿವೆ. ಈ ಕಾರಣದಿಂದ ಪ್ರಸಾರದ ಹಕ್ಕನ್ನು ಬೃಹತ್ ಮೊತ್ತಕ್ಕೆ ಏರಿಕೆ ಮಾಡಿದೆ.
ಆ್ಯಪಲ್, ಅಮೇಜಾನ್ ಸೇರಿ ಪ್ರಸಿದ್ಧ ಕಂಪನಿಗಳಿಂದ ಪೈಪೋಟಿ; ಕ್ರಿಕೆಟ್ ಜಗತ್ತಿನ ಶ್ರೇಷ್ಠ ಲೀಗ್ನ ಪ್ರಸಾರದ ಹಕ್ಕನ್ನು ಖರೀದಿಸುವುದಕ್ಕೆ ಸೋನಿ, ಡಿಸ್ನಿ, ಟಿವಿ18-ವಯಾಕಾಮ್, ಜೀ ಮತ್ತು ಅಮೇಜಾನ್ ಸೇರಿದಂತೆ ನಗದು ಸಮೃದ್ಧ ಲೀಗ್ನ ಮೀಡಿಯಾ ರೈಟ್ಸ್ ಹಕ್ಕನ್ನು ಖರೀದಿಸಲು ಆಸಕ್ತಿ ತೋರಿಸಿವೆ ಎಂದು ತಿಳಿದುಬಂದಿದೆ.
ಅಮೆರಿಕದ ವಿಶ್ವಪ್ರಸಿದ್ಧ ಟೆಕ್ನಾಲಜಿ ಕಂಪನಿ ಆ್ಯಪಲ್ ಮತ್ತು ಸಾಮಾಜಿಕ ಜಾಲತಾಣವಾದ ಯೂಟ್ಯೂಬ್ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಸಾರದ ಹಕ್ಕನ್ನು ಖರೀದಿಸಲು ಮುಂದಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಕಂಪನಿಗಳಲ್ಲದೆ, ಕೆಲವು ಅಷ್ಟೇನು ಜನಪ್ರಿಯವಲ್ಲದ ಸಂಸ್ಥೆಗಳು ಕೂಡ ಸ್ಪರ್ಧೆಯಲ್ಲಿವೆ. ಜೂನ್ 12ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಮೇ10 ಹರಾಜು ದಾಖಲಾತಿಗಳನ್ನು ಖರೀದಿಸಲು ಕೊನೆಯ ದಿನಾಂಕವಾಗಲಿದೆ.
ಐಪಿಎಲ್ನಿಂದ ಬರುವಂತಹ ಆದಾಯವನ್ನು ದೇಶದ ಡೊಮೆಸ್ಟೆಕ್ ಕ್ರಿಕೆಟ್ ರಚನೆ, ಉತ್ತಮ ಮೂಲ ಸೌಕರ್ಯ ಮತ್ತು ಕ್ರಿಕೆಟ್ ಒಕ್ಕೂಟದ ಕಲ್ಯಾಣಕ್ಕಾಗಿ ಬಳಕೆ ಮಾಡಲಾಗುತ್ತದೆ. ಈ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿರಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಇದನ್ನೂ ಓದಿ:ಟೇಬಲ್ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಐತಿಹಾಸಿಕ ಸಾಧನೆಗೆ ಪಾತ್ರರಾದ ಮನಿಕಾ ಬಾತ್ರಾ-ಅರ್ಚನಾ ಜೋಡಿ