ETV Bharat / sports

ಜನರು ನನ್ನ ಬಗ್ಗೆ ಮಾತನಾಡುತ್ತಿರುವುದಕ್ಕೆ ಖುಷಿಯಿದೆ, ಟೀಕೆಗೆ Don't Care: ರಹಾನೆ

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ ಎಂದು ಕೇಳಿದ್ದಕ್ಕೆ ನಗುತ್ತಲೇ ಉತ್ತರಿಸಿದ ರಹಾನೆ, ಜನರು ಯಾವಾಗಲೂ ಪ್ರಮುಖ ವ್ಯಕ್ತಿಗಳ ಬಗ್ಗೆಯೇ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.

Rahane on criticism for slow batting at Lord's
ಅಜಿಂಕ್ಯ ರಹಾನೆ
author img

By

Published : Aug 23, 2021, 7:41 PM IST

ಲೀಡ್ಸ್: ಲಾರ್ಡ್ಸ್​ ಟೆಸ್ಟ್​ನಲ್ಲಿ ಪೂಜಾರ ಮತ್ತು ತಾನು ನಿಧಾನಗತಿ ಬ್ಯಾಟಿಂಗ್ ಮಾಡಿರುವುದಕ್ಕೆ ವ್ಯಕ್ತವಾದ ಟೀಕೆಗಳನ್ನು ತಿರಸ್ಕರಿಸಿರುವ ರಹಾನೆ, ನಾವು ತಂಡಕ್ಕೆ ಅಗತ್ಯಕ್ಕೆ ತಕ್ಕಂತೆ ಎಷ್ಟು ಸಾಧ್ಯವೋ ಅಷ್ಟು ದೀರ್ಘವಾಗಿ ಆಡಲು ಬಯಸಿದ್ದೆವು ಎಂದು ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ ಎಂದು ಕೇಳಿದ್ದಕ್ಕೆ ನಗುತ್ತಲೇ ಉತ್ತರಿಸಿದ ರಹಾನೆ, ಜನರು ಯಾವಾಗಲೂ ಪ್ರಮುಖ ವ್ಯಕ್ತಿಗಳ ಬಗ್ಗೆಯೇ ಮಾತನಾಡುತ್ತಾರೆ ಎಂದಿದ್ದಾರೆ. ಎರಡನೇ ಪಂದ್ಯದಲ್ಲಿ ರಹಾನೆ 146 ಎಸೆತಗಳಲ್ಲಿ 61, ಪೂಜಾರ 206 ಎಸೆತಗಳಲ್ಲಿ 45 ರನ್​ ಗಳಿಸಿದ್ದರು. ಈ ಜೋಡಿ ಸುಮಾರು 50 ಓವರ್​ಗಳಲ್ಲಿ 100 ರನ್​ಗಳ ಜೊತೆಯಾಟ ನೀಡಿದ್ದರು.

"ಆ ಜನರು ನನ್ನ ಬಗ್ಗೆ ಮಾತನಾಡುತ್ತಿರುವುದಕ್ಕೆ ನಾನು ಖುಷಿಯಾಗಿದ್ದೇನೆ. ಜನರು ಯಾವಾಗಲೂ ಪ್ರಮುಖ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಾರೆ ಎಂದು ನಂಬಿದ್ದೇನೆ. ಆದ್ದರಿಂದ ನಾನು ಆ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳಲ್ಲ. ನನ್ನ ಸಂಪೂರ್ಣ ಗಮನವೇನಿದ್ದರೂ ತಂಡಕ್ಕೆ ಉತ್ತಮ ಕೊಡುಗೆ ನೀಡುವುದರ ಕಡೆಗೆ" ಎಂದು ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ.

ಟೀಕೆಗಳು ನಿಮಗೆ ಪ್ರೇರಣೆ ನೀಡಲಿದೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ರಹಾನೆ, ಪ್ರತಿಯೊಂದು ವಿಷಯವೂ ನನ್ನನ್ನು ಪ್ರೇರೇಪಿಸುತ್ತದೆ. ದೇಶಕ್ಕಾಗಿ ಆಡುವುದು ನನ್ನನ್ನು ಪ್ರೇರೇಪಿಸುತ್ತದೆ. ಟೀಕೆಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ನಾನು ಯಾವಾಗಲೂ ತಂಡಕ್ಕೆ ನೀಡುವ ಕೊಡುಗೆಯ ಬಗ್ಗೆ ನಂಬಿದ್ದೇನೆ ಮತ್ತು ಆ ಕೊಡುಗೆ ನನಗೆ ತೃಪ್ತಿ ತಂದಿದೆ ಎಂದು ಸ್ಪಷ್ಟಪಪಡಿಸಿದ್ದಾರೆ.

ಮೈದಾನದಲ್ಲಿ ನಿಮ್ಮ ಮತ್ತು ಪೂಜಾರ ಅವರ ನಡುವಿನ ಚರ್ಚೆ ಏನಾಗಿತ್ತು ಎಂದು ಕೇಳಿದ್ದಕ್ಕೆ, ಎಷ್ಟು ಸಾಧ್ಯವೋ ಅಷ್ಟು ದೊಡ್ಡ ಇನ್ನಿಂಗ್ಸ್ ಆಡುವುದು. ಇಲ್ಲಿಂದ ಎಲ್ಲಿಯವರೆಗೆ ನಾವು ಇನ್ನಿಂಗ್ಸ್​ ಕಟ್ಟಬೇಕು ಅನ್ನುವುದಾಗಿತ್ತು. ಚೇತೇಶ್ವರ್​ ನಿಧಾನವಾಗಿ ಆಡುತ್ತಾರೆ, ಆದರೆ ಆ ಇನ್ನಿಂಗ್ಸ್​ ನಮಗೆ ಬಹಳ ಮುಖ್ಯವಾಗಿತ್ತು. ಅವರು 200 ಎಸೆತಗಳನ್ನಾಡಿದ್ದಾರೆ. ನಾವಿಬ್ಬರು ಒಬ್ಬರನ್ನೊಬ್ಬರು ಬೆಂಬಲಿಸುತ್ತೇವೆ. ನಾನು ಮತ್ತು ಪೂಜಾರ ತುಂಬಾ ದೀರ್ಘ ಸಮಯದಿಂದ ಆಡುತ್ತಿದ್ದೇವೆ. ಒತ್ತಡವನ್ನು ಹೇಗೆ ನಿಭಾಯಿಸಬೇಕೆಂದು ನಮಗೆ ಚೆನ್ನಾಗಿ ತಿಳಿದಿದೆ. ಆ ಸಮಯದಲ್ಲಿ ಏನೂ ಮಾಡಬೇಕೆಂಬುದು ನಮಗೆ ಗೊತ್ತಿದೆ ಎಂದು ಎಂದು ರಹಾನೆ ಹೇಳಿದ್ದಾರೆ.

ಇಂಗ್ಲೆಂಡ್ ಮತ್ತು ಭಾರತದ ನಡುವೆ ಹೆಡಿಂಗ್ಲೆಯ ಲೀಡ್ಸ್ ಮೈದಾನದಲ್ಲಿ 3ನೇ ಟೆಸ್ಟ್​ ಪಂದ್ಯ ಬುಧವಾರದಿಂದ ಆರಂಭವಾಗಲಿದೆ.

ಇದನ್ನು ಓದಿ: ಭಾರತ ತಂಡದಲ್ಲಿ ದೌರ್ಬಲ್ಯಗಳಿವೆ, ಇಂಗ್ಲೆಂಡ್ ಸರಣಿ ಗೆಲ್ಲುವ ವಿಶ್ವಾಸವಿದೆ : ನಾಸಿರ್​ ಹುಸೇನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.