ETV Bharat / sports

WTC Final 2023: ಅಗ್ರ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯ; ಕುಸಿದ ಭಾರತಕ್ಕೆ ರಹಾನೆ- ಜಡೇಜಾ ಆಸರೆ - ಅಜಿಂಕ್ಯ ರಹಾನೆ

ಐಸಿಸಿ ವಿಶ್ವ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲ ಇನ್ನಿಂಗ್​ನ ಎರಡನೇ ದಿನದಾಟ ಅಂತ್ಯಕ್ಕೆ ಭಾರತ 5 ವಿಕೆಟ್​ ನಷ್ಟಕ್ಕೆ 151 ರನ್​ ಗಳಿಸಿದ್ದು, 318 ರನ್​ಗಳ ಹಿನ್ನಡೆಯಲ್ಲಿದೆ.

Etv Bharat
Etv Bharat
author img

By

Published : Jun 8, 2023, 11:03 PM IST

ಓವಲ್ (ಲಂಡನ್​): ಐಸಿಸಿ ವಿಶ್ವ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲ ಇನ್ನಿಂಗ್​ನಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್​ಗಳು ವೈಫಲ್ಯ ಎದುರಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಮೊದಲ ಇನ್ಸಿಂಗ್ಸ್​ನಲ್ಲಿ 469 ರನ್​ಗಳು ಬೃಹತ್​ ರನ್​ ಪೇರಿಸಿದರೆ, ಟೀಂ ಇಂಡಿಯಾ 150 ರನ್​ ಕಲೆ ಹಾಕುವಷ್ಟರಲ್ಲಿ ಪ್ರಮುಖ ಐದು ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಎರಡನೇ ದಿನದಾಟದ ಅಂತ್ಯಕ್ಕೆ ರೋಹಿತ್​ ಪಡೆ 38 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 151 ರನ್​ ಗಳಿಸಿದೆ. ಅಜಿಂಕ್ಯ ರಹಾನೆ (29) ಹಾಗೂ ಶ್ರೀಕರ್ ಭರತ್ (5) ಮೂರನೇ ದಿನಕ್ಕೆ ಕ್ರೀಸ್​ ಕಾಯ್ದುಕೊಂಡಿದ್ದಾರೆ.

ಮೊದಲ ಟಾಸ್​ ಸೋತು ಬ್ಯಾಟಿಂಗ್ ಮಾಡಿದ್ದ ಆಸೀಸ್​ ತಂಡ ಮೂರು ವಿಕೆಟ್​ ನಷ್ಟಕ್ಕೆ 327 ರನ್ ಪೇರಿಸಿತ್ತು. ಇಂದು ಎರಡನೇ ದಿನದಾಟದಲ್ಲಿ ಭಾರತದ ವೇಗಿಗಳ ಬಿಗಿ ಹಿಡಿತ ಸಾಧಿಸಿದ್ದರಿಂದ ಕೇವಲ 142 ರನ್​ ಕಲೆ ಹಾಕಿತ್ತು. ಅಂತಿಮವಾಗಿ 469 ರನ್​ಗಳಿಗೆ ಸರ್ವಪತನ ಕಂಡು ತನ್ನ ಮೊದಲ ಇನ್ನಿಂಗ್ಸ್​ ಮುಗಿಸಿತ್ತು. ನಂತರ ಭಾರತ ಪರ ನಾಯಕ ರೋಹಿತ್​ ಶರ್ಮಾ ಹಾಗೂ ಶುಭಮನ್​ ಗಿಲ್​ ಮೊದಲ ಇನ್ನಿಂಗ್ಸ್​ ಆರಂಭಿಸಿದರು.

ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ : ರಿಷಭ್​ ಪಂತ್​ ದಾಖಲೆ ಮುರಿದ ಟ್ರಾವಿಸ್​ ಹೆಡ್​

ಆದರೆ, ಇಬ್ಬರು ಬ್ಯಾಟರ್​ಗಳು ತಂಡಕ್ಕೆ ಭದ್ರ ಅಡಿಪಾಯ ಹಾಕುವಲ್ಲಿ ವಿಫಲರಾದರು. ಅದರಲ್ಲೂ, ನಾಯಕ ರೋಹಿತ್ ಶರ್ಮಾ ತಮ್ಮ ಕಳಪೆ ಫಾರ್ಮ್​ ಅನ್ನು ಮುಂದುವರೆಸಿದ್ದಾರೆ. ಆರಂಭಿಕರಾದ ಬಂದ ಹಿಟ್‌ಮ್ಯಾನ್​ 26 ಬಾಲ್​ಗಳನ್ನು ಎದುರಿಸಿ ಕೇವಲ 15 ರನ್​ಗಳಿಗೆ ಪ್ಯಾಟ್ ಕಮ್ಮಿನ್ಸ್ ಎಸತೆದಲ್ಲಿ ಎಲ್​ಬಿ ಬಲೆಗೆ ಬಿದ್ದರು. ಆದರೆ, ಕೊಂಚ ಆಕ್ರಮಣಕಾರಿಯಾಗಿ ಇನ್ನಿಂಗ್ಸ್ ಆರಂಭಿಸಿದರೂ ರೋಹಿತ್​ ಹೆಚ್ಚು ಹೊತ್ತಲು ನಿಲ್ಲಲು ಸಾಧ್ಯವಾಗಲಿಲ್ಲ. ಮತ್ತೊಬ್ಬ ಆರಂಭಿಕ ಹಾಗೂ ಐಪಿಎಲ್​ನಲ್ಲಿ ಶತಕಗಳ ಮೂಲಕ ಮಿಂಚು ಹರಿಸಿದ್ದ ಶುಭಮನ್ ಗಿಲ್ ಸಹ ಬೇಗ ಪೆವಿಲಿಯನ್​ ಸೇರಿದರು. ನಾಯಕ ರೋಹಿತ್​ ಬೆನ್ನಲ್ಲೇ​ ಗಿಲ್​ 13 ರನ್​ ಬಾರಿಸಿ ಸ್ಕಾಟ್ ಬೋಲ್ಯಾಂಡ್ ಎಸತೆದಲ್ಲಿ ಬೌಲ್ಡ್ ಆದರು.

ಬಳಿಕ ಕ್ರೀಸ್​ಗೆ ಬಂದ ಚೇತೇಶ್ವರ ಪೂಜಾರ (14) ಹಾಗೂ ವಿರಾಟ್​ ಕೊಹ್ಲಿ (14) ಕೂಡ ನಿರಾಸೆ ಮೂಡಿಸಿದರು. ಇದರ ನಡುವೆ ಐದನೇ ವಿಕೆಟ್​ಗೆ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಉತ್ತಮ ಇನ್ನಿಂಗ್​ ಕಟ್ಟಿ ತಂಡಕ್ಕೆ ನೆರವಾದರು. ರಹಾನೆ ಮತ್ತು ಜಡೇಜಾ ಜೋಡಿ 71 ರನ್​ಗಳ ಜೊತೆಯಾಟ ನೀಡಿತು. ಆದರೆ, ಅರ್ಧ ಶತಕದ ಹೊಸ್ತಿಲಿನಲ್ಲಿ ಜಡೇಜಾ ಎಡವಿದರು. 51 ಬಾಲ್​ಗಳಲ್ಲಿ ಏಳು ಬೌಂಡರಿ ಮತ್ತು ಸಿಕ್ಸರ್​ ಸಮೇತ 48 ರನ್ ಸಿಡಿಸಿದ್ದ ಜಡೇಜಾ ನಾಥನ್ ಲಿಯಾನ್ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು. ಮತ್ತೊಂದೆಡೆ, 29 ರನ್​ ಗಳಿಸಿರುವ ರಹಾನೆ ಹಾಗೂ 5 ರನ್​ ಗಳಿಸಿರುವ ಶ್ರೀಕರ್ ಭರತ್ ನಾಳೆಗೆ ಕ್ರೀಸ್​ನಲ್ಲಿ ಇದ್ದಾರೆ. ಭಾರತ 318 ರನ್​ಗಳ ಹಿನ್ನಡೆಯಲ್ಲಿದೆ.

ಇದನ್ನೂ ಓದಿ: WTC Final 2023: 2ನೇ ದಿನ ಭಾರತದ ಬೌಲರ್​​ಗಳ ಮೇಲುಗೈ; 31ನೇ ಟೆಸ್ಟ್‌ ಶತಕ ದಾಖಲಿಸಿದ ಸ್ಮಿತ್‌, 469 ರನ್​ಗಳಿಗೆ ಆಸ್ಟ್ರೇಲಿಯಾ ಆಲೌಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.