ETV Bharat / sports

WTC 2023: ಭಾರತೀಯ ಆಟಗಾರರ ಪ್ರದರ್ಶನ ಹೀಗಿದೆ..

author img

By

Published : Mar 14, 2023, 5:10 PM IST

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಭಾರತ ಆಯ್ಕೆ - ಭಾರತ ಬ್ಯಾಟರ್​ಗಳ ಕಳಪೆ ಪ್ರದರ್ಶನ - ಬೌಲಿಂಗ್​ನಲ್ಲಿ ಸ್ಪಿನ್ನರ್​ಗಳ ಆಧಾರ - ಐಪಿಎಲ್​ ಮುಗಿದ 9 ದಿನಕ್ಕೆ ಇಂಗ್ಲೆಂಡ್​ನ ಓವೆಲ್​ನಲ್ಲಿ ಫೈನಲ್​

ICC WORLD TEST CHAMPIONSHIP RECORDS
ಭಾರತೀಯ ಆಟಗಾರರ ಪ್ರದರ್ಶನ ಹೀಗಿದೆ

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಜೂನ್‌ನಲ್ಲಿ ನಡೆಯಲಿದೆ. ಆದರೆ, ಭಾರತ ತಂಡ ಇಂಗ್ಲೆಂಡ್‌ನಲ್ಲಿ ಗೆಲ್ಲಲು, ಬ್ಯಾಟರ್​ಗಳು ಹೆಚ್ಚು ಶ್ರಮ ಪಡಬೇಕಾಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-2023 ವರೆಗಿನ ಅಂಕಿ-ಅಂಶಗಳಲ್ಲಿ ಬೌಲರ್‌ಗಳ ಪ್ರದರ್ಶನವು ಬ್ಯಾಟ್ಸ್‌ಮನ್‌ಗಳಿಗಿಂತ ಉತ್ತಮವಾಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರನ್ ಗಳಿಸಿದ ಟಾಪ್ 10 ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬ ಭಾರತೀಯ ಬ್ಯಾಟ್ಸ್‌ಮನ್ ಕೂಡ ಸೇರ್ಪಡೆಗೊಂಡಿಲ್ಲ. ಟಾಪ್ 10 ಬೌಲರ್‌ಗಳಲ್ಲಿ 2 ಬೌಲರ್‌ಗಳು ಸೇರಿದ್ದಾರೆ.

ಅಹಮದಾಬಾದ್​ನ ಕೊನೆಯ ಟೆಸ್ಟ್​ ಡ್ರಾದಲ್ಲಿ ಅಂತ್ಯವಾದರೂ, ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ (WTC)​ ಫೈನಲ್​ ಪ್ರವೇಶ ಪಡೆದುಕೊಂಡಿದೆ. 2019-2021ರ ಮೊದಲ ಡಬ್ಲ್ಯೂಟಿಸಿಯಲ್ಲಿ ಭಾರತವನ್ನು ಮಣಿಸಿ ಚಾಂಪಿಯನ್​ ಆಗಿದ್ದ ನ್ಯೂಜಿಲೆಂಡ್​, ಈ ಬಾರಿ ಭಾರತ ಫೈನಲ್​ ಪ್ರವೇಶ ಪಡೆಯಲು ಸಹಕಾರ ಮಾಡಿದೆ. ಲಂಕಾ ವಿರುದ್ಧ ಹೋರಾಡಿ ವಿಲಿಯಮ್ಸ್​ ಕಿವೀಸ್​ಗೆ ಗೆಲುವು ತಂದಿತ್ತು. ಫೈನಲ್​ ಸ್ಪರ್ಧೆಯಿಂದ ಸಿಂಹಳೀಯರನ್ನು ಹೊರಗಿಟ್ಟಿದ್ದಾರೆ.

ICC WORLD TEST CHAMPIONSHIP RECORDS
ಟಾಪ್​ 20 ಬ್ಯಾಟರ್​ಗಳು

ಭಾರತದಲ್ಲಿ ನಡೆದ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೂರು ಪಂದ್ಯಗಳು ಉಭಯ ತಂಡದ ನೀರಸ ಬ್ಯಾಟಿಂಗ್​ನಿಂದ 2.5 ದಿನಕ್ಕೆ ಮುಗಿದು ಹೋಗಿತ್ತು. ಕೊನೆ ಪಂದ್ಯದಲ್ಲಿ ಎರಡು ತಂಡದ ಬ್ಯಾಟರ್​ಗಳಿಂದ ನಾಲ್ಕು ಶತಕಗಳು ದಾಖಲಾದವು. ಅದರಲ್ಲಿ ಪ್ರಮುಖವಾಗಿ ವಿರಾಟ್​ ಕೊಹ್ಲಿ 3.5 ವರ್ಷಗಳ ನಂತರ ಶತಕ ಗಳಿಸಿದ್ದಾರೆ. ಇದು ಭಾರತಕ್ಕೆ ಭರವಸೆ ಮೂಡಿಸಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಬ್ಯಾಟ್ಸ್‌ಮನ್‌ಗಳು 2021-23ರ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಬ್ಯಾಟರ್​ ಮತ್ತು ಬೌಲರ್‌ಗಳ ಅಂಕಿ-ಅಂಶಗಳನ್ನು ನೋಡಿದರೆ, ಟಾಪ್ 20 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕೇವಲ 2 ಭಾರತೀಯ ಬ್ಯಾಟ್ಸ್‌ಮನ್‌ಗಳು ಮಾತ್ರ ಕೊನೆಯ ಸ್ಥಾನದಲ್ಲಿದ್ದಾರೆ.

ICC WORLD TEST CHAMPIONSHIP RECORDS
ಟಾಪ್​ 20 ಬೌಲರ್​ಗಳ ಪಟ್ಟಿ

ಚೇತೇಶ್ವರ್ ಪೂಜಾರ ಹೆಸರು 18 ನೇ ಸ್ಥಾನದಲ್ಲಿದೆ ಮತ್ತು ವಿರಾಟ್ ಕೊಹ್ಲಿ ಹೆಸರು 20 ನೇ ಸ್ಥಾನದಲ್ಲಿದೆ. ಚೇತೇಶ್ವರ ಪೂಜಾರ 16 ಪಂದ್ಯಗಳಲ್ಲಿ 887 ರನ್ ಗಳಿಸಿದ್ದಾರೆ. 20ನೇ ಕ್ರಮಾಂಕದ ವಿರಾಟ್ ಕೊಹ್ಲಿ 869 ರನ್ ಗಳಿಸಿದ್ದಾರೆ. ಮೇಲಿನ ಹತ್ತು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬ ಭಾರತೀಯ ಬ್ಯಾಟ್ಸ್‌ಮನ್ ಕೂಡ ಸೇರಿಲ್ಲ. ಈ ಅಂಕಿ ಅಂಶಗಳಲ್ಲಿ, ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ರೂಟ್ 22 ಪಂದ್ಯಗಳ 40 ಇನ್ನಿಂಗ್ಸ್‌ಗಳಲ್ಲಿ 1915 ರನ್ ಗಳಿಸುವ ಮೂಲಕ ಅತ್ಯುನ್ನತ ಸ್ಥಾನವನ್ನು ಹೊಂದಿದ್ದರೆ, ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಎರಡನೇ ಸ್ಥಾನದಲ್ಲಿದ್ದಾರೆ. ಉಸ್ಮಾನ್ ಖವಾಜಾ 16 ಪಂದ್ಯಗಳ 28 ಇನ್ನಿಂಗ್ಸ್‌ಗಳಲ್ಲಿ 1608 ರನ್ ಗಳಿಸಿದ್ದಾರೆ.

ICC WORLD TEST CHAMPIONSHIP RECORDS
ಡಬ್ಲ್ಯೂಟಿಸಿ ಬೌಲರ್​ಗಳಲ್ಲಿ 10 ನೇ ಸ್ಥಾನದಲ್ಲಿ ಬೂಮ್ರಾ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಬೌಲರ್‌ಗಳ ಟಾಪ್ 20 ಪಟ್ಟಿಯಲ್ಲಿ ಭಾರತ ತಂಡದ ಅತ್ಯುತ್ತಮ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ 13 ಪಂದ್ಯಗಳ 26 ಇನ್ನಿಂಗ್ಸ್‌ಗಳಲ್ಲಿ 61 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಜಸ್ಪ್ರೀತ್ ಬುಮ್ರಾ 10 ಪಂದ್ಯಗಳಲ್ಲಿ 45 ವಿಕೆಟ್‌ಗಳನ್ನು ಪಡೆದು 10 ನೇ ಸ್ಥಾನದಲ್ಲಿದ್ದಾರೆ. 12ನೇ ಸ್ಥಾನದಲ್ಲಿರುವ ಜಡೇಜಾ 12 ಪಂದ್ಯಗಳಿಂದ 23 ಇನ್ನಿಂಗ್ಸ್‌ಗಳಲ್ಲಿ ಒಟ್ಟು 43 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮೊಹಮ್ಮದ್ ಶಮಿ 12 ಪಂದ್ಯಗಳಲ್ಲಿ 41 ವಿಕೆಟ್​ಗಳನ್ನು ಪಡೆದು 15 ನೇ ಸ್ಥಾನದಲ್ಲಿದ್ದಾರೆ.

ICC WORLD TEST CHAMPIONSHIP RECORDS
ಫಾರ್ಮ್​ಗೆ ಮರಳಿದ ವಿರಾಟ್​​

ಜೂನ್ 7 ರಿಂದ ಆರಂಭವಾಗಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಭಾರತವು ಆಸ್ಟ್ರೇಲಿಯಾದೊಂದಿಗೆ ಆಡಬೇಕಾಗಿದೆ. 2023ರ ಐಪಿಎಲ್​ ಮುಗಿದ ಒಂಬತ್ತು ದಿನಗಳಲ್ಲಿ ಟೆಸ್ಟ್​ ಚಾಂಪಿಯನ್​ಶಿಪ್ ಆರಂಭವಾಗಲಿದೆ. ಇಂಗ್ಲೆಂಡ್​ನ ಓವೆಲ್​ ಕ್ರಿಡಾಂಗಣದಲ್ಲಿ ಜೂನ್ 7 ರಿಂದ 11 ರವರೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ನಡೆಯಲಿದೆ. ಕಳೆದ ಬಾರಿಯ ಫೈನಲ್​ನಲ್ಲಿ ಭಾರತ ನ್ಯೂಜಿಲೆಂಡ್​ನಿಂದ ಸೋಲನುಭವಿಸಿತ್ತು.

ಇದನ್ನೂ ಓದಿ: ಏಕದಿನ ಸರಣಿಯ ನಾಯಕತ್ವದ ಹೊಣೆಯೂ ಸ್ಮಿತ್​ ಹೆಗಲಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.