ETV Bharat / sports

ನ್ಯೂಜಿಲ್ಯಾಂಡ್​ ವಿರುದ್ಧ ನಮ್ಮ ಆಟ ಇದೇ ವೇಗದಲ್ಲಿರುತ್ತೆ: ಭಾರತದ ಫೀಲ್ಡಿಂಗ್​ ಕೋಚ್ ದಿಲೀಪ್​​ - ರಾಹುಲ್​ ಆಟ ಅದ್ಭುತ

Team India fielding coach T Dilip: ನಾವು ನ್ಯೂಜಿಲ್ಯಾಂಡ್​ ವಿರುದ್ಧ ಇದೇ ವೇಗ ಮುಂದುವರಿಸುತ್ತೇವೆ, ಸಿರಾಜ್​ ಕ್ಯಾಚ್​ ಮಿಸ್​ ಮಾಡಿದ್ದು ದೊಡ್ಡ ಸಮಸ್ಯೆಯೇ ಅಲ್ಲ ಎಂದು ಫೀಲ್ಡಿಂಗ್​ ಕೋಚ್​ ಟಿ ದಿಲೀಪ್​ ಹೇಳಿದ್ದಾರೆ.

Fielding coach T Dilip says  India ahead of semi final against New Zealand  World Cup  lauds Siraj  ನ್ಯೂಜಿಲ್ಯಾಂಡ್​ ವಿರುದ್ಧ ನಮ್ಮ ಆಟ  ಸಿರಾಜ್​ ಅನ್ನು ಶ್ಲಾಘಿಸಿದ ಫೀಲ್ಡಿಂಗ್​ ಕೋಚ್​ ಸಿರಾಜ್​ ಕ್ಯಾಚ್​ ಮಿಸ್​ ಮಾಡಿದ್ದು ದೊಡ್ಡ ಸಮಸ್ಯೆಯೇ ಅಲ್ಲ  ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ  ಭಾರತ 160 ರನ್​ಗಳ ಭರ್ಜರಿ ಜಯ  ಸಿರಾಜ್​ ಬಗ್ಗೆ ಹೇಳಿದ್ದು ಹೀಗೆ  ಚಿನ್ನದ ಪದಕದ ಬಗ್ಗೆ ಮಾತನಾಡಿದ ದಿಲೀಪ್​ ರಾಹುಲ್​ ಆಟ ಅದ್ಭುತ
ಸಿರಾಜ್​ ಅನ್ನು ಶ್ಲಾಘಿಸಿದ ಫೀಲ್ಡಿಂಗ್​ ಕೋಚ್​
author img

By ETV Bharat Karnataka Team

Published : Nov 13, 2023, 12:38 PM IST

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ನೆದರ್‌ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 160 ರನ್​ಗಳ ಭರ್ಜರಿ ಜಯ ದಾಖಲಿಸಿತು. ಈ ಪಂದ್ಯದ ನಂತರ ಟೀಂ ಇಂಡಿಯಾ ನವೆಂಬರ್ 15 ರಂದು ನ್ಯೂಜಿಲ್ಯಾಂಡ್ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಆಡಬೇಕಿದ್ದು, ಅದಕ್ಕೂ ಮೊದಲು ಮೊಹಮ್ಮದ್ ಸಿರಾಜ್ ಗಾಯಗೊಂಡಿರುವುದು ತಂಡಕ್ಕೆ ಕೊಂಚ ಪೆಟ್ಟು ಬಿದ್ದಂತಾಗಿದೆ. ಇನ್ನು ತಂಡದ ಪ್ರದರ್ಶನದ ಬಗ್ಗೆ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ಸಿರಾಜ್​ ಬಗ್ಗೆ ಹೇಳಿದ್ದು ಹೀಗೆ: ಸಿರಾಜ್​ ಗಾಯಗೊಂಡಿರುವುದರ ಬಗ್ಗೆ ಮಾತನಾಡಿದ ಫೀಲ್ಡಿಂಗ್​ ಕೋಚ್,ಇದು ಯಾವುದೂ ಸಮಸ್ಯೆಯಲ್ಲ. ನಾನು ಬೌಲರ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಫೀಲ್ಡಿಂಗ್ ಸಮಯದಲ್ಲಿ ಅವರ ಬದ್ಧತೆ ಅತ್ಯುತ್ತಮವಾಗಿದೆ. ಅವರು ಬೌಂಡರಿಯಲ್ಲಿ ಫೀಲ್ಡಿಂಗ್​ ಮಾಡುವ ರೀತಿ ಅತ್ಯುತ್ತಮವಾಗಿದೆ. ಅವರು ಪ್ರಮುಖ ಪಂದ್ಯಗಳಲ್ಲಿ ಪುಟಿದೇಳುವ ಕೌಶಲ್ಯವನ್ನು ಹೊಂದಿದ್ದಾರೆ ಎಂದು ದಿಲೀಪ್ ಬೆಂಗಳೂರಿನಲ್ಲಿ ನಡೆದ ಪಂದ್ಯದ ನಂತರದ ಮಾಧ್ಯಮಗೋಷ್ಟಿಯಲ್ಲಿ ಹೇಳಿದರು.

ನಾವು ಎಲ್ಲಾ ಲೀಗ್ ಪಂದ್ಯಗಳನ್ನು ಗೆದ್ದಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ತಂಡವಾಗಿ ಮುನ್ನಡೆಯುತ್ತಿದ್ದೇವೆ. ನಮ್ಮ ಗುಣಮಟ್ಟಕ್ಕೆ ತಕ್ಕಂತೆ ಆಡುತ್ತಿದ್ದೇವೆ. ಧರ್ಮಶಾಲಾದಲ್ಲಿ ನಾವು ಅವರ ವಿರುದ್ಧ ಉತ್ತಮವಾಗಿ ಆಡಿದ್ದೇವೆ ಎಂದರು.

ಚಿನ್ನದ ಪದಕದ ಬಗ್ಗೆ ಮಾತನಾಡಿದ ದಿಲೀಪ್​: ಫೀಲ್ಡಿಂಗ್ ಕೋಚ್ ಚಿನ್ನದ ಪದಕ ಸಮಾರಂಭವನ್ನು ಪ್ರಾರಂಭಿಸುವ ಹಿಂದಿನ ಪ್ರಮುಖ ಕಾರಣವನ್ನೂ ನೀಡಿದ್ದಾರೆ. ಈ ಸಂಪೂರ್ಣ ಆಲೋಚನೆ ಈಗಲೇ ಪ್ರಾರಂಭವಾಗಿಲ್ಲ. ಈಗ ನೀವು ವಿಶ್ವಕಪ್‌ನಲ್ಲಿ ಈ ಪದಕಗಳನ್ನು ನೋಡುತ್ತಿದ್ದೀರಿ. ನಾವು ನಾಲ್ಕು ತಿಂಗಳ ಹಿಂದೆ ಇದನ್ನು ಪ್ರಾರಂಭಿಸಿದ್ದೇವೆ. ಅಲ್ಲಿ ನಾವು ಪ್ರತಿ ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ವೆಸ್ಟ್ ಫೀಲ್ಡರ್ ಅನ್ನು ಘೋಷಿಸುತ್ತಿದ್ದೆವು. ಇದೀಗ ನಾವು ವಿಶ್ವಕಪ್‌ನಲ್ಲಿ ಮುಂದುವರಿಸಿದ್ದು, ಈ ಪದಕ ಪ್ರದಾನವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಎಂದು ದಿಲೀಪ್​ ಹೇಳಿದರು.

ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಪ್ರತಿಕ್ರಿಯೆ ಹೃದಯಸ್ಪರ್ಶಿಯಾಗಿದೆ. ರನ್‌ಗಳು, ಸೇವ್‌ಗಳು, ಪಡೆದ ಕ್ಯಾಚ್‌ಗಳು ಇತ್ಯಾದಿಗಳನ್ನು ಅಳೆಯಲಾಗುತ್ತದೆ. ಆದರೆ ನೀವು ತಂಡಕ್ಕೆ ಯಾವ ರೀತಿ ಕೊಡುಗೆ ನೀಡುತ್ತೀರಿ ಎಂಬುದನ್ನೂ ಲೆಕ್ಕಹಾಕಿ ಈ ಪದಕಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

ರಾಹುಲ್​ ಆಟ ಅದ್ಭುತ: ಅವರು ಸುದೀರ್ಘ ಗಾಯದ ಸಮಸ್ಯೆಯಿಂದ ಮರಳಿ ಬಂದಿದ್ದಾರೆ. ಇದು ನಿಜವಾಗಿಯೂ ಅವರಿಗೆ ಸವಾಲಾಗಿತ್ತು. ರಾಹುಲ್​ ಅವರ ವಿಕೆಟ್ ಕೀಪಿಂಗ್ ಕೌಶಲ್ಯಗಳು ನಿಜವಾಗಿಯೂ ಅದ್ಭುತವಾಗಿದೆ. ಅವರು ಚಿಕ್ಕ ವಯಸ್ಸಿನಿಂದಲೂ ವಿಕೆಟ್ ಕೀಪಿಂಗ್ ಮಾಡುತ್ತಿದ್ದರು. ಆದರೆ ನಾವು ಒಂದೆರಡು ಅಂಶಗಳನ್ನು ಗುರುತಿಸಿದ್ದು, ಅವುಗಳ ಮೇಲೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಅವರ ಕ್ಯಾಚ್‌ಗಳು ಹಿಡಿಯುವ ರೀತಿ ಅತ್ಯುತ್ತಮವಾಗಿದೆ ಎಂದು ದಿಲೀಪ್ ಹೇಳಿದರು.

ಇದೇ ವೇಗ ನಾಕೌಟ್ ಸುತ್ತಿಗೂ ಮುಂದುವರಿಯುತ್ತಾ?: ನಾವು ಪರಿಪೂರ್ಣ ಆಟಗಾರರನ್ನು ಹೊಂದಿದ್ದೇವೆ. ಎಲ್ಲಾ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಬೌಲರ್‌ಗಳು ವಿಕೆಟ್‌ ಕೀಳುತ್ತಿದ್ದಾರೆ. ಸ್ಪಿನ್ನರ್‌ಗಳಷ್ಟೇ ಅಲ್ಲ, ವೇಗದ ಬೌಲರ್‌ಗಳೂ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ. ನಾವು ಮುಂದೆ ಸಾಗುತ್ತಿದ್ದ ದಾರಿ ಅತ್ಯುತ್ತಮವಾಗಿದೆ. ನಾವು ಈಗಾಗಲೇ ಮುಂಬೈನಲ್ಲಿ ಆಡಿದ್ದೇವೆ. ಹಾಗಾಗಿ ಆ ದಿನ ಉತ್ತಮ ಸ್ಪರ್ಧೆಯಾಗಲಿದೆ ಎಂದು ಹೇಳಿದರು.

ರೋಹಿತ್​, ಕೊಹ್ಲಿ, ಸೂರ್ಯ ಬೌಲಿಂಗ್​ ಹೇಗಿತ್ತು?: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಅವರಂತಹ ಅರೆಕಾಲಿಕ ಬೌಲರ್‌ಗಳು ನೆದರ್‌ಲ್ಯಾಂಡ್ಸ್ ಪಂದ್ಯದಲ್ಲಿ ತೋರಿರುವ ಪ್ರದರ್ಶನದ ಬಗ್ಗೆ ಮಾತನಾಡುತ್ತ, ಎಲ್ಲಾ ಆಟಗಾರರು ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಆದ್ದರಿಂದ, ಅವರು ಈ ಒಂದು ಪಂದ್ಯದಲ್ಲಿ ತಮ್ಮ ಬಲ ಪ್ರದರ್ಶನ ತೋರಿದ್ದಾರೆ. ಅವರ ಬೌಲಿಂಗ್​ ಚೆನ್ನಾಗಿ ಮೂಡಿದೆ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಓದಿ: "ವಿಶ್ವಕಪ್​ ಅನುಭವದಲ್ಲಿ ತಂಡ ಮುನ್ನಡೆಸಬಲ್ಲೆ": ಬಾಂಗ್ಲಾ ನಾಯಕತ್ವದ ಕುರ್ಚಿಗೆ ಟವೆಲ್ ಹಾಕಿದ ಶಾಂಟೊ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.