ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕ್ರಿಕೆಟ್ ಕಾಶಿ ಖ್ಯಾತಿಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಎರಡನೇ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯ ನಡೆಯಲಿದೆ. ಇದುವರೆಗೆ ಒಟ್ಟು 12 ವಿಶ್ವಕಪ್ ಕ್ರಿಕೆಟ್ ಆವೃತ್ತಿಗಳು ನಡೆದಿವೆ. ಆಸೀಸ್ ಐದು ಬಾರಿ ಪ್ರತಿಷ್ಟಿತ ಪ್ರಶಸ್ತಿ ಗೆದ್ದುಕೊಂಡಿದೆ. ಈ ಪೈಕಿ ನಾಲ್ಕು ಪ್ರಶಸ್ತಿಗಳು ಕಳೆದ ಆರು ಆವೃತ್ತಿಗಳಲ್ಲಿ ಬಂದಿವೆ. ಇನ್ನೊಂದೆಡೆ, ದಕ್ಷಿಣ ಆಫ್ರಿಕಾ ನಾಲ್ಕು ಬಾರಿ ಸೆಮೀಸ್‌ಗೆ ಬಂದರೂ ಸೋಲಿನ ಕಹಿ ಕಂಡು 'ಚೋಕರ್ಸ್' ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ.
ಇದೀಗ ಹರಿಣ ಪಡೆ ಕಪ್ ಜಯಿಸುವ ಸನಿಹ ಬಂದಿದ್ದು, ಬಲಿಷ್ಠ ಕಾಂಗರೂ ತಂಡವನ್ನು ಸೋಲಿಸುವ ಸವಾಲು ಎದುರಿಸುತ್ತಿದೆ. ಈ ಹಿಂದೆ ಆಡಿರುವ ನಾಲ್ಕು ಸೆಮೀಸ್ಗಳ ಪೈಕಿ ಮೂರರಲ್ಲಿ ಇದೇ ಆಸೀಸ್ ಎದುರು ದ.ಆಫ್ರಿಕಾ ಮುಗ್ಗರಿಸಿದೆ. ಆದರೆ, ಈ ಸಲದ ವಿಶ್ವಕಪ್ನಲ್ಲಿ ಟೆಂಬಾ ಬವುಮಾ ನಾಯಕತ್ವದ ಹರಿಣ ಪಡೆ ಎಲ್ಲಾ ವಿಭಾಗಗಳಲ್ಲಿಯೂ ಹೊಸ ಆಯಾಮದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಶತಾಯಗತಾಯ ಆಸೀಸ್ ಮಣಿಸಿ ಚೋಕರ್ಸ್ ಟ್ಯಾಗ್ ನಿಂದ ಹೊರಬರಲು ದಕ್ಷಿಣ ಆಫ್ರಿಕಾ ತವಕಿಸುತ್ತಿದೆ.
-
Rivalries resume as two fabled foes clash for a spot in the #CWC23 Final 🏆#SAvAUS pic.twitter.com/53wq4CrVmd
— ICC (@ICC) November 16, 2023 " class="align-text-top noRightClick twitterSection" data="
">Rivalries resume as two fabled foes clash for a spot in the #CWC23 Final 🏆#SAvAUS pic.twitter.com/53wq4CrVmd
— ICC (@ICC) November 16, 2023Rivalries resume as two fabled foes clash for a spot in the #CWC23 Final 🏆#SAvAUS pic.twitter.com/53wq4CrVmd
— ICC (@ICC) November 16, 2023
ದಕ್ಷಿಣ ಆಫ್ರಿಕಾದ ಸೆಮೀಸ್ ಹಾದಿ..: 1992ರ ಮಾರ್ಚ್ 22ರಂದು ಸಿಡ್ನಿಯಲ್ಲಿ ನಡೆದ ಚೊಚ್ಚಲ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. ಆದರೆ ಅಂದು ಬಿಟ್ಟೂಬಿಡದೆ ಸುರಿದ ಮಳೆಯಿಂದ ಡಕ್‌ವರ್ತ್ ಲೂಯಿಸ್ ನಿಯಮದ ಮೂಲಕ ತಪ್ಪು ಲೆಕ್ಕಾಚಾರದಿಂದಾಗಿ ದ.ಆಫ್ರಿಕಾ ಸೋಲುಂಡಿತ್ತು.
1999 ಜೂನ್ 17ರಂದು ಇಂಗ್ಲೆಂಡ್ನ ಎಡ್ಜ್ಭಾಸ್ಟನ್ನಲ್ಲಿ ಎರಡನೇ ಬಾರಿ ಸೆಮೀಸ್‌ಗೆ ಲಗ್ಗೆ ಇಟ್ಟಿದ್ದ ದಕ್ಷಿಣ ಆಫ್ರಿಕಾ ಇಲ್ಲಿ ಆಸೀಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯ ಟೈ ಆಗುವ ಮೂಲಕ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿತ್ತು. 2007ರ ವಿಶ್ವಕಪ್ನಲ್ಲಿ ಎದುರಾದ ಕಾಂಗರೂಗಳ ವಿರುದ್ಧ ಹರಿಣಗಳ ಪಡೆ ಸೇಂಟ್ ಲೂಸಿಯಾ ಮೈದಾನದಲ್ಲಿ (ಏಪ್ರಿಲ್ 25ರಂದು) ಮೂರನೇ ಬಾರಿ ಸೆಮಿಫೈನಲ್ ಸೋಲಿನ ಕಹಿ ಅನುಭವಿಸಿತು. ಇತ್ತ ಆಸೀಸ್ ಕೂಡ ಮೂರನೇ ಬಾರಿಗೆ ನೇರ ಫೈನಲ್ ಪ್ರವೇಶಿಸಿತ್ತು.
ಇದಾದ ನಂತರ 2015ರಲ್ಲಿ ಮತ್ತೊಮ್ಮೆ ಎಬಿ ಡಿವಿಲಿಯರ್ಸ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಕಪ್ ಗೆಲ್ಲುವ ಆಸೆಯೊಂದಿಗೆ ಸೆಮೀಸ್‌ಗೆ ಬಂದಿತ್ತು. ಮಾರ್ಚ್ 24ರಂದು ನ್ಯೂಜಿಲೆಂಡ್ ವಿರುದ್ಧ ಆಕ್ಲೆಂಡ್‌ನಲ್ಲಿ ಪಂದ್ಯವಾಡಿದ ಹರಿಣಗಳು ಗೆಲುವಿನಂಚಿನಲ್ಲಿ ಎಡವಿದರು. ಅಂದು ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಆಟಗಾರರು ಕಣ್ಣೀರಿಟ್ಟ ಕ್ಷಣವನ್ನು ಕ್ರಿಕೆಟ್ ಪ್ರೇಮಿಗಳು ಎಂದೂ ಮರೆಯಲಸಾಧ್ಯ.
ದಕ್ಷಿಣ ಆಫ್ರಿಕಾ-ಸಂಭಾವ್ಯ ತಂಡ: ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್ (ವಿ.ಕೀ), ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ ಶಮ್ಸಿ, ರಾಸ್ಸಿ ವ್ಯಾನ್ ಡರ್ಸನ್ ಮತ್ತು ಲಿಜಾಡ್ ವಿಲಿಯಮ್ಸ್.
ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ (ವಿ.ಕೀ), ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಆಷ್ಟನ್ ಅಗರ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್ ಆಡಮ್ ಝಂಪಾ ಮತ್ತು ಮಿಚೆಲ್ ಸ್ಟಾರ್ಕ್.
ಇದನ್ನೂ ಓದಿ: ಗ್ಲೆನ್ ಮ್ಯಾಕ್ಸ್‌ವೆಲ್ ದ್ವಿಶತಕದ ಇನ್ನಿಂಗ್ಸ್ ನಮಗೆ ಸ್ಫೂರ್ತಿ: ಆಸಿಸ್ ನಾಯಕ ಕಮಿನ್ಸ್