ETV Bharat / sports

ಜಹೀರ್​ ಖಾನ್​, ಜಾವಗಲ್​ ಶ್ರೀನಾಥ್ ಹಿಂದಿಕ್ಕಿ ಹೊಸ ದಾಖಲೆ ಬರೆದ ನ್ಯೂಜಿಲೆಂಡ್​ ವೇಗಿ ಟ್ರೆಂಟ್​ ಬೌಲ್ಟ್​

author img

By ETV Bharat Karnataka Team

Published : Oct 23, 2023, 7:37 AM IST

ನ್ಯೂಜಿಲೆಂಡ್​ನ ವೇಗಿ ಟ್ರೆಂಟ್​ ಬೌಲ್ಟ್​ ಭಾರತದ ಜಹೀರ್​ ಖಾನ್​ ಮತ್ತು ಜಾವಗಲ್​ ಶ್ರೀನಾಥ್​ ಅವರನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದಿದ್ದಾರೆ.

ಟ್ರೆಂಟ್​ ಬೌಲ್ಟ್​
ಟ್ರೆಂಟ್​ ಬೌಲ್ಟ್​

ಧರ್ಮಶಾಲ (ಹಿಮಾಚಲ ಪ್ರದೇಶ): ಏಕದಿನ ವಿಶ್ವಕಪ್​ (World Cup) ಸರಣಿಯ ಭಾರತ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್​ನ ವೇಗಿ ಟ್ರೆಂಟ್​ ಬೌಲ್ಟ್​ ಹೊಸ ದಾಖಲೆ ಬರೆದಿದ್ದಾರೆ. ಭಾರತದ ಬೌಲಿಂಗ್​ ದಂತಕಥೆಗಳಾದ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಹಿಂದಿಕ್ಕಿ, ಐಸಿಸಿ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಏಳನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

ಭಾನುವಾರದಂದು ಧರ್ಮಶಾಲಾದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ವೇಗಿ ಬೌಲ್ಟ್ 10 ಓವರ್​ಗಳ ಬೌಲಿಂಗ್​ ಮಾಡಿ 60ರನ್​ ಬಿಟ್ಟುಕೊಟ್ಟು 1 ವಿಕೆಟ್​ ಪಡೆಯುವ ಮೂಲಕ ಈ ಮೈಲಿಗಲ್ಲನ್ನು ಸಾಧಿಸಿದರು. ಈ ವರೆಗೂ 24 ವಿಶ್ವಕಪ್​ ಪಂದ್ಯಗಳನ್ನು ಆಡಿರುವ ಬೌಲ್ಟ್​ 23.44ರ ಸರಾಸರಿಯಲ್ಲಿ 45 ವಿಕೆಟ್‌ಗಳನ್ನು ಪಡೆದಿದ್ದಾರೆ. 27ರನ್​ಗಳಿಗೆ 5ವಿಕೆಟ್​ ಪಡೆದಿದರುವುದು ವಿಶ್ವಕಪ್​ನಲ್ಲಿ ಇವರ ಬೆಸ್ಟ್​ ಬೌಲಿಂಗ್ ಆಗಿದೆ. ಸದ್ಯ ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲೆಂಡ್ ಪರ ಹೆಚ್ಚಿನ ವಿಕೆಟ್ ಪಡೆದ ಪ್ರಮುಖ ಬೌಲರ್ ಎನಿಸಿಕೊಂಡಿದ್ದಾರೆ.

ಭಾರತದ ಮಾಜಿ ಬೌಲರ್​ಗಳಾದ ಜಹೀರ್ ಖಾನ್ 23 ಮತ್ತು ಜಾವಗಲ್ ಶ್ರೀನಾಥ್ 34 ವಿಶ್ವಕಪ್ ಪಂದ್ಯಗಳಲ್ಲಿ ತಲಾ 44 ವಿಕೆಟ್ ಪಡೆದಿದ್ದಾರೆ. ವಿಶ್ವಕಪ್​ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಆಸ್ಟ್ರೇಲಿಯಾದ ದಂತಕಥೆ ಗ್ಲೆನ್ ಮೆಕ್‌ಗ್ರಾತ್ ಇದ್ದಾರೆ. ಅವರು 39 ಪಂದ್ಯಗಳಲ್ಲಿ 18.19 ರ ಸರಾಸರಿಯಲ್ಲಿ 71 ವಿಕೆಟ್‌ಗಳನ್ನು ಪಡೆದಿದ್ದು 3.96 ರ ಎಕಾನಮಿ ಹೊಂದಿದ್ದಾರೆ. 15 ರನ್​ಗಳಿಗೆ 7 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಸ್ಪೆಲ್​​ ಆಗಿದೆ.

ಈ ಸಾಲಿನಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳಿದರನ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 39 ವಿಶ್ವಕಪ್​ ಪಂದ್ಯಗಳನ್ನು ಆಡಿ 68 ವಿಕೆಟ್​ಗಳನ್ನು ಪಡೆದಿದ್ದಾರೆ. 19 ರನ್​ಗಳಿಗೆ 4 ವಿಕೆಟ್​ ಪಡೆದಿರುವುದು ಬೆಸ್ಟ್​ ಬೌಲಿಂಗ್​ ಆಗಿದೆ.

ಮೂರನೇ ಸ್ಥಾನದಲ್ಲಿ ಶ್ರೀಲಂಕಾದ ವೇಗಿ ಲಸಿತ್​ ಮಾಲಿಂಗ ಇದ್ದು, 28 ಪಂದ್ಯಗಳಲ್ಲಿ 56 ವಿಕೆಟ್​ ಪಡೆದಿದ್ದು, 38ಕ್ಕೆ 6 ವಿಕೆಟ್​ ಪಡೆದಿರುವುದು ಬೆಸ್ಟ್​ ಬೌಲಿಂಗ್​ ಆಗಿದೆ. ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಿಚೆಲ್​ ಸ್ಟಾರ್ಕ್​ ಇದ್ದು, ಅವರು 22 ಪಂದ್ಯಗಳಲ್ಲಿ 55 ವಿಕೆಟ್​ ಪಡೆದಿದ್ದಾರೆ. ಪಾಕಿಸ್ತಾನದ ವಾಸಿಮ್​ ಅಕ್ರಮ 36 ಪಂದ್ಯಗಳಲ್ಲಿ 55 ವಿಕೆಟ್​ ಪಡೆದು ಐದನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ನ್ಯೂಜಿಲೆಂಡ್‌ನ 5 ವಿಕೆಟ್‌ ಉರುಳಿಸಿದ ಮೊಹಮ್ಮದ್ ಶಮಿ: ಕಪಿಲ್​ ದೇವ್​, ಯುವರಾಜ್​ ಸಿಂಗ್​ ದಾಖಲೆ ಪುಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.