ETV Bharat / sports

ವಿಶ್ವಕಪ್​ 2023: ಪಾಕಿಸ್ತಾನ ಸೆಮಿಸ್​ಗೆ ತಲುಪಲು ಇನ್ನೂ ಇದೆ ಅವಕಾಶ : ಹೀಗಿದೆ ಲೆಕ್ಕಾಚಾರ! - World Cup

ICC World Cup 2023: ಪಾಕಿಸ್ತಾನ ವಿಶ್ವಕಪ್​ ಸೆಮಿಫೈನಲ್ ಪ್ರವೇಶ ಪಡೆಯಲು ಹೀಗಿದೆ ಲೆಕ್ಕಾಚಾರ​

ಪಾಕಿಸ್ತಾನ ಸೆಮಿಸ್​ಗೆ ತಲುಪಲು ಇನ್ನೂ ಇದೆ ಅವಕಾಶ

author img

By ETV Bharat Karnataka Team

Published : Nov 10, 2023, 4:53 PM IST

ಬೆಂಗಳೂರು: ಐಸಿಸಿ (ICC) ಏಕದಿನ ವಿಶ್ವಕಪ್ (World Cup) ಸರಣಿ ಅಂತಿಮ ಘಟಕ್ಕೆ ತಲುಪಿದ್ದು, 45 ಪಂದ್ಯಗಳಲ್ಲಿ 41 ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿವೆ. ಈ ಪೈಕಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಅಂಕಪಟ್ಟಿಯಲ್ಲಿ ಅಗ್ರ ಮೂರು ಸ್ಥಾನಗಳಲ್ಲಿದ್ದು, ಅಧಿಕೃತವಾಗಿ ಸೆಮಿಫೈನಲ್​ಗೆ ಪ್ರವೇಶ ಪಡೆದಿವೆ.​

ಮತ್ತೊಂದೆಡೆ ನಿನ್ನೆ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ 5 ವಿಕೆಟ್​ಗಳ ಗೆಲುವು ಸಾಧಿಸುವ ಮೂಲಕ ​ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆರಿದ್ದು, ಸೆಮಿಸ್ ಬಹುತೇಕ ಖಚಿತಗೊಂಡಿದೆ. ಆದರೆ ಅಧಿಕೃತವಾಗಿ ಪ್ರವೇಶ ಪಡೆದಿಲ್ಲ. ಪಾಕಿಸ್ತಾನಕ್ಕೂ ಸೆಮಿಸ್​ಗೆ ಪ್ರವೇಶ ಪಡೆಯುವ ಅವಕಾಶ ಇರುವ ಕಾರಣ ಎರಡು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಆದರೇ ಪಾಕಿಸ್ತಾನ ಸೆಮಿಸ್​ ಹಾದಿ ಮಾತ್ರ ಕಠಿಣವಾಗಿದೆ.

ಪಾಕ್​ ಸೆಮಿಸ್​ ಲೆಕ್ಕಾಚಾರ: ಈಗಾಗಲೇ ಟೂರ್ನಿಯಲ್ಲಿ 8 ಪಂದ್ಯಗಳನ್ನು ಆಡಿರುವ ಪಾಕ್​ 4ರಲ್ಲಿ ಗೆದ್ದು ನಾಲ್ಕರಲ್ಲಿ ಸೋಲು ಕಂಡಿದ್ದು, +0.036 ರನ್​ರೇಟ್​ನೊಂದಿಗೆ 8 ಅಂಕಳನ್ನು ಪಡೆದು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇದರ ನಡುವೆಯೇ ಪಾಕ್​ನ ಸೆಮಿಸ್​ ಕನಸು ಇನ್ನೂ ಜೀವಂತವಾಗಿಯೇ ಉಳಿದಿದೆ. ಆದರೇ ನ.11ರಂದು (ನಾಳೆ) ನಡೆಯಲಿರುವ ಇಂಗ್ಲೆಂಡ್​ ವಿರುದ್ಧದ ತನ್ನ ಮುಂದಿನ ಪಂದ್ಯದಲ್ಲಿ ಬಾರಿ ಅಂತರದಿಂದ ಗೆಲುವು ದಾಖಲಿಸಿದರೆ ಮಾತ್ರ ಸೆಮಿಸ್​ ಪ್ರವೇಶ ಪಡೆಯ ಬಹುದಾಗಿದೆ.

ಮೊದಲು ಬ್ಯಾಟಿಂಗ್​ ಲೆಕ್ಕಾಚಾರ: ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಟಾಸ್​ಗೆದ್ದು ಪಾಕ್​ ಮೊದಲಿಗೆ ಬ್ಯಾಟಿಂಗ್​ ಆಯ್ದುಕೊಂಡರೆ ಇಂಗ್ಲೆಂಡ್​ ಮೇಲೆ 287 ರನ್​ಗಳ ಅಂತರದಿಂದ ಗೆಲುವು ​ಸಾಧಿಸಿದರೆ ರನ್​ ರೇಟ್​ ಸುಧಾರಿಸಿ ಸೆಮಿಸ್​ ಪ್ರವೇಶ ಪಡೆಯಲಿದೆ.

ಚೇಸಿಂಗ್​ ಲೆಕ್ಕಾಚಾರ: ಇಂಗ್ಲೆಂಡ್​ ಮೊದಲು ಬ್ಯಾಟ್​ ಮಾಡಿ ಇಂತಿಷ್ಟು ಮೊತ್ತದ ಗುರಿ ನೀಡಿದರೆ, ಪಾಕಿಸ್ತಾನ ಕೇವಲ 16 ಎಸೆತಗಳಲ್ಲಿ ಎದುರಾಳಿ ತಂಡ ನೀಡಿರುವ ಗುರಿಯನ್ನು ತಲುಪಬೇಕಾಗಿದೆ. ಅಂದರೆ 284 ಎಸೆತಗಳು (47.2 ಓವರ್) ಬಾಕಿ ಇರುವಂತೆ ಗೆಲುವು ಸಾಧಿಸಬೇಕಾಗಿದೆ. ಅಂದರೆ ಅವರು ತಮ್ಮ ಇನಿಂಗ್ಸ್‌ನ ಮೂರು ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಬೇಕಾಗಿದೆ. ಅಂದರೆ ಮಾತ್ರ ಸೆಮಿಸ್​ ಪ್ರವೇಶ ಪಡೆಯಲಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದುಗೊಂಡರೆ ಎರಡು ತಂಡಗಳಿಗೆ ತಲಾ ಒಂದು ಅಂಕಗಳನ್ನು ನೀಡಲಾಗುತ್ತದೆ. ಪಾಕಿಸ್ತಾನ ಟೂರ್ನಿಯಿಂದ ಹೊರ ನಡೆಯಲಿದೆ.

ಈ ಎಲ್ಲ ಲೆಕ್ಕಾಚಾರ ನೋಡುವುದಾದರೆ ನವೆಂಬರ್ 15 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಭಾರತವನ್ನು ಎದುರಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸಚಿನ್​ ದಾಖಲೆ ಮೀರುತ್ತೇನೆಂದು ಕನಸಿನಲ್ಲೂ ಊಹಿಸಿರಲಿಲ್ಲ, ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ: ರಚಿನ್ ರವೀಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.