ETV Bharat / sports

ICC World Cup 2023: ಟಾಸ್​ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್​ ಆಯ್ಕೆ - ಅಫ್ಘಾನ್​ ತಂಡ

2023ರ ವಿಶ್ವಕಪ್‌ನ 30ನೇ ಪಂದ್ಯದಲ್ಲಿ ಇಂದು (ಸೋಮವಾರ) ಟಾಸ್​ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

ICC World Cup 2023
ಮೂರನೇ ಮ್ಯಾಚ್​ ಗೆಲ್ಲುವ ತವಕದಲ್ಲಿ ಅಫ್ಘಾನಿಸ್ತಾನ.. ಅಫ್ಘಾನ್​ ತಂಡವನ್ನು ಮಣಿಸಲು ಶ್ರೀಲಂಕಾ ತಂತ್ರ.. ಸೆಮಿಫೈನಲ್ ಪ್ರವೇಶಿಸುವ ಭರವಸೆ..
author img

By ETV Bharat Karnataka Team

Published : Oct 30, 2023, 1:38 PM IST

Updated : Oct 30, 2023, 2:39 PM IST

ಪುಣೆ (ಮಹಾರಾಷ್ಟ್ರ): 2023ರ ವಿಶ್ವಕಪ್‌ನ 30ನೇ ಪಂದ್ಯದಲ್ಲಿ ಇಂದು (ಸೋಮವಾರ) ಟಾಸ್​ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ಈ ಜಿದ್ದಾಜಿದ್ದಿನ ಮ್ಯಾಚ್​ಗೆ ಸಾಕ್ಷಿಯಾಗಲಿದೆ. ಶ್ರೀಲಂಕಾ ತನ್ನ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ವಿಶ್ವಕಪ್‌ನಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿತ್ತು. ಇದೇ ವೇಳೆ ಅಫ್ಘಾನಿಸ್ತಾನ ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಗೆಲುವು ಆಫ್ಘಾನಿಸ್ತಾನ ಆಟಗಾರರ ಮನೋಬಲವನ್ನು ಹೆಚ್ಚಿಸಿದೆ.

ಇನ್ನು, ಉಭಯ ತಂಡಗಳ ನಡುವಣ ಪಂದ್ಯಗಳ ಬಗ್ಗೆ ಹೇಳುವುದಾದರೆ, ಎರಡು ತಂಡಗಳ ನಡುವೆ ಇದುವರೆಗೆ 11 ಪಂದ್ಯಗಳು ನಡೆದಿದ್ದು, ಈ ಪೈಕಿ ಅಫ್ಘಾನಿಸ್ತಾನ 3 ಹಾಗೂ ಶ್ರೀಲಂಕಾ 7 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯ ಟೈ ಆಗಿದೆ. ಎರಡು ತಂಡಗಳ ನಡುವಿನ ಮೊದಲ ಪಂದ್ಯವು ಮಾರ್ಚ್ 3, 2014 ರಂದು ನಡೆದಿತ್ತು. ಇನ್ನೂ ಕೊನೆಯ ಪಂದ್ಯ 5 ಸೆಪ್ಟೆಂಬರ್ 2022 ರಂದು ಜರುಗಿತ್ತು.

ಈ ಸೀಸನ್​ನಲ್ಲಿ ಶ್ರೀಲಂಕಾ ತನ್ನ 5 ಪಂದ್ಯಗಳಲ್ಲಿ 2 ಅನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಒಟ್ಟು ರನ್ ರೇಟ್ -0.205 ಇದೆ. ಅಫ್ಘಾನಿಸ್ತಾನ 5 ಪಂದ್ಯಗಳಲ್ಲಿ 2 ಮ್ಯಾಚ್​ಗಳನ್ನು ಗೆದ್ದಿದೆ.

ಈ ಪಿಚ್ ಬ್ಯಾಟಿಂಗ್‌ಗೆ ತುಂಬಾ ಅನುಕೂಲ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಈ ಪಿಚ್​ನಲ್ಲಿ ಬ್ಯಾಟ್ಸ್‌ಮನ್‌ಗಳು ಹೆಚ್ಚು ಸಹಾಯವನ್ನು ಪಡೆಯುತ್ತಾರೆ. ಆದರೆ, ಪಂದ್ಯ ಮುಂದುವರಿದಂತೆ ಸ್ಪಿನ್ ಬೌಲರ್​ಗಳಿಗೂ ನೆರವು ಲಭಿಸುತ್ತದೆ. ಇಲ್ಲಿಯವರೆಗೆ ಈ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ವಿಶ್ವಕಪ್‌ನ ಒಂದು ಪಂದ್ಯ ಮಾತ್ರ ನಡೆದಿತ್ತು. ಈ ಮೈದಾನದಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತದೆ.

ಹವಾಮಾನ ಇಲಾಖೆ ಪ್ರಕಾರ, ಹವಾಮಾನವು ಹಗಲಿನಲ್ಲಿ 32 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆಟ ಮುಗಿಯುವ ವೇಳೆಗೆ ರಾತ್ರಿಯಲ್ಲಿ 25 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದೆ. ಹಗಲಿನಲ್ಲಿ ಮಳೆಯ ಸಂಭವನೀಯತೆ ತೀರಾ ಕಡಿಮೆ ಇರುತ್ತದೆ. ರಾತ್ರಿಯಲ್ಲಿ ಶೇಕಡಾ 3ರಷ್ಟು ಇರಲಿದೆ. ಹೀಗಾಗಿ ಅಕ್ಟೋಬರ್ 30ರ ಸೋಮವಾರದಂದು ಪುಣೆಯಲ್ಲಿ ಮಳೆಯ ಅಪಾಯವಿಲ್ಲ.

ಎರಡೂ ತಂಡಗಳಲ್ಲಿನ ಆಟಗಾರರ ಮಾಹಿತಿ:

ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್ , ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್ (ವಿಕೆ), ಅಜ್ಮತುಲ್ಲಾ ಉಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ ಮತ್ತು ನವೀನ್-ಉಲ್-ಹಕೀನ್.

ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ಕುಸಲ್ ಪೆರೆರಾ, ಕುಸಲ್ ಮೆಂಡಿಸ್ (ಸಿ & ಡಬ್ಲ್ಯೂಕೆ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ್ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತೀಕ್ಷಣ, ಕಸುನ್ ರಜಿತಾ, ದುಷ್ಮಂತ ಚಮೀರ ಮತ್ತು ದಿಲ್ಶನ್ ಮಧುಶಂಕ.

ಇದನ್ನೂ ಓದಿ: Cricket World Cup: ಗ್ಲೆನ್ ಮೆಕ್‌ಗ್ರಾತ್ ಹಿಂದಿಕ್ಕಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯಲ್ಲೂ ತಮ್ಮ ಹೆಸರು ಬರೆದ ಹಿಟ್​ ಮ್ಯಾನ್​

Last Updated : Oct 30, 2023, 2:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.