ETV Bharat / sports

ವಿಶ್ವಕಪ್​​ ಕ್ರಿಕೆಟ್​​: ನಾಯಕ ಎಡ್ವರ್ಡ್ಸ್ ಅರ್ಧಶತಕ.. ಬಾಂಗ್ಲಾ ಟೈಗರ್ಸ್​ಗೆ 230ರನ್​ ಸಾಧಾರಣ ಗುರಿ - ETV Bharath Karnataka

ಕೋಲ್ಕತ್ತಾದ ಈಡನ್ ​ಗಾರ್ಡನ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ನೆದರ್ಲೆಂಡ್​ 230 ರನ್​ಗಳ ಗುರಿ ನೀಡಿದೆ.

Etv Bharat
Etv Bharat
author img

By ETV Bharat Karnataka Team

Published : Oct 28, 2023, 5:58 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಮಣಿಸಿದ ಡಚ್ಚರು ಕೋಲ್ಕತ್ತಾದ ಈಡನ್​ಗಾರ್ಡನ್​ ಮೈದಾನದಲ್ಲಿ ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರ ಸಮಯೋಚಿನ ಅರ್ಧಶತಕದ ಇನ್ನಿಂಗ್ಸ್​ನ ನೆರವಿನಿಂದ ನೆದರ್ಲೆಂಡ್​​ ತಂಡ ನಿಗದಿತ ಓವರ್​ ಅಂತ್ಯಕ್ಕೆ 10 ವಿಕೆಟ್​ ಕಳೆದುಕೊಂಡು 229 ರನ್​ ಕಲೆಹಾಕಿದೆ. ಮೊದಲ ಪಂದ್ಯವನ್ನು ಗೆದ್ದು ನಂತರ ಸತತ ಸೋಲು ಕಂಡಿದ್ದ ಶಕೀಬ್ ತಂಡ ಎರಡನೇ ಗೆಲುವು ದಾಖಲಿಸಲು 230 ರನ್​ ಭೇದಿಸಬೇಕಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ನೆದರ್ಲೆಂಡ್​ ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕಿದ ರೀತಿಯಲ್ಲೇ ರಣತಂತ್ರ ಹೆಣೆಯುವ ಲೆಕ್ಕಾಚಾರದಲ್ಲಿದ್ದರೆ, ಎರಡನೇ ಇನ್ನಿಂಗ್ಸ್​ನಲ್ಲಿ ಮಂಜಿನ ಸಹಾಯದಿಂದ ಗೆಲುವು ಕಾಣುವ ಕನಸಿನಲ್ಲಿ ಬಾಂಗ್ಲಾ ಟೈಗರ್ಸ್​ ಇದ್ದಾರೆ. ಬ್ಯಾಟಿಂಗ್​ಗೆ ಇಳಿದ ನೆದರ್ಲೆಂಡ್​ ತಂಡ 4 ರನ್​ಗೆ 2 ವಿಕೆಟ್​ ಕಳೆದುಕೊಂಡಿತು. ವಿಕ್ರಮಜಿತ್ ಸಿಂಗ್ (3) ಮತ್ತು ಮ್ಯಾಕ್ಸ್ ಓಡೌಡ್ (0) ವಿಕೆಟ್​ ಕಳೆದುಕೊಂಡ ತಂಡಕ್ಕೆ ಮೂರನೇ ವಿಕೆಟ್​ ಒಂದಾದ ವೆಸ್ಲಿ ಬ್ಯಾರೆಸಿ ಮತ್ತು ಕಾಲಿನ್ ಅಕರ್ಮನ್ 59 ರನ್ ಜತೆಯಾಟವನ್ನು ನೀಡಿದರು. ಇದರಿಂದ ತಂಡ ಚೇತರಿಕೆ ಕಂಡಿತು.

ತಂಡಕ್ಕೆ 63 ರನ್ ಆಗಿದ್ದಾಗ 13.4ನೇ ಓವರ್​ನಲ್ಲಿ 41 ರನ್​ ಕಲೆಹಾಕಿದ್ದ ವೆಸ್ಲಿ ಬ್ಯಾರೆಸಿ ಔಟ್​ ಆದರೆ, 14.4 ಓವರ್​ನಲ್ಲಿ ಕಾಲಿನ್ ಅಕರ್ಮನ್ (15) ಸಹ ವಿಕೆಟ್​ ಕೊಟ್ಟರು. ಈ ವಿಕೆಟ್​ ನಷ್ಟದ ನಂತರ ಸ್ಕಾಟ್ ಎಡ್ವರ್ಡ್ಸ್ ಮತ್ತು ಬಾಸ್ ಡಿ ಲೀಡೆ ಜತೆಯಾಟ ಮಾಡಿದರು. ಎರಡು ವಿಕೆಟ್​ಗಳು ಒಮ್ಮೆಗೆ ಕಳೆದುಕೊಂಡರೂ, ಮಧ್ಯಮ ಕ್ರಮಾಂಕದ ಬ್ಯಾಟರ್​​ಗಳು ಚಿಂತೆಗೆ ಒಳಗಾಗದೇ, 44 ರನ್​ನ ಪಾಲುದಾರಿಕೆಯನ್ನು ಮಾಡಿದರು. ನಾಯಕ ತಾಳ್ಮೆಯ ಅಟವನ್ನು ಪ್ರದರ್ಶಿಸಿದರು. ತಂಡಕ್ಕೆ ಆಲ್​ರೌಂಡರ್​ ಪ್ರದರ್ಶನ ನೀಡುತ್ತಿರುವ ಬಾಸ್ ಡಿ ಲೀಡೆ 17 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು.

ನಾಯಕನ ಅರ್ಧಶತಕ ಇನ್ನಿಂಗ್ಸ್​: ಸ್ಕಾಟ್ ಎಡ್ವರ್ಡ್ಸ್ 6ನೇ ವಿಕೆಟ್​ಗೆ ಜತೆಯಾಟವನ್ನು ನಿರ್ಮಿಸಿದರು. ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಜೊತೆಗೆ 78 ರನ್​ನ ಪಾಲುದಾರಿಕೆಯನ್ನು ಮಾಡಿದರು. ಈ ವೇಳೆ ನಾಯಕ ಸ್ಕಾಟ್​​ ತಮ್ಮ ಅರ್ಧಶತಕವನ್ನು ಪೂರೈಸಿಕೊಂಡರು. ಮುಸ್ತಾಫಿಜುರ್ ರೆಹಮಾನ್ ಬೌಲಿಂಗ್​ನಲ್ಲಿ 68 ರನ್​ ಗಳಿಸಿ ಆಡುತ್ತಿದ್ದ ಸ್ಕಾಟ್​ ವಿಕೆಟ್​ ಕೊಟ್ಟರು. ಕೊನೆಯಲ್ಲಿ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 61 ಬಾಲ್​ ಎದುರಿಸಿ 35 ರನ್​ ಕಲೆಹಾಕಿದರು. ನಂತರ ಬಂದ ಆಟಗಾರರು ವಿಕೆಟ್​ ಕಾಯ್ದುಕೊಳ್ಳಲು ಪ್ರಯತ್ನಿಸಿದರು. ತಂಡ 50 ಓವರ್​ಗೆ ತನ್ನೆಲ್ಲಾ ವಿಕೆಟ್​ ಗಳನ್ನು ಕಳೆದುಕೊಂಡು 229 ರನ್​ ಗಳಿಸಿತು.

ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ, ಮೆಹಿದಿ ಹಸನ್ ಮಿರಾಜ್ ಮತ್ತು ತಸ್ಕಿನ್ ಅಹ್ಮದ್ ತಲಾ 2 ವಿಕೆಟ್​ ಪಡೆದರೆ, ಶಕೀಬ್ ಅಲ್ ಹಸನ್ ಒಂದು ವಿಕೆಟ್​ ಕಬಳಿಸಿದರು.

ಇದನ್ನೂ ಓದಿ: Cricket World Cup: ಹಿಮದ ನಾಡಲ್ಲಿ ರನ್​ಗಳ ಹೊಳೆ.. ಕಿವೀಸ್​ಗೆ ಬೃಹತ್​ ಟಾರ್ಗೆಟ್​ ನೀಡಿದ ಆಸೀಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.