ಮುಂಬೈ (ಮಹಾರಾಷ್ಟ್ರ): ಲೀಗ್ ಪಂದ್ಯಗಳಲ್ಲಿ ಭಾರತ ಬ್ಯಾಟಿಂಗ್ನಲ್ಲಿ ನೀಡಿದ್ದ ಉತ್ತಮ ಪ್ರದರ್ಶನವನ್ನು ಹಾಗೇ ಸೆಮೀಸ್ನಲ್ಲೂ ಮುಂದಿವರೆಸಿದೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಅಬ್ಬರದ ಶತಕ ಗಳಿಸಿದರೆ, ಶುಭಮನ್ ಗಿಲ್ ಅರ್ದಶತಕ ಗಳಿಸಿದರು. ರೋಹಿತ್ ಶರ್ಮಾ ಮತ್ತು ಕೆ ಎಲ್ ರಾಹುಲ್ 30ಕ್ಕೂ ಹೆಚ್ಚು ರನ್ನ ಕೊಡುಗೆ ನೀಡಿದರು. ಇದರಿಂದ ಭಾರತ ನಿಗದಿತ ಓವರ್ ಅಂತ್ಯಕ್ಕೆ 4 ವಿಕೆಟ್ ನಷ್ಟದಿಂದ 397 ರನ್ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಬಂದ ಟೀಮ್ ಇಂಡಿಯಾ 71 ರನ್ಗಳ ಆರಂಭಿಕ ಬಿರುಸಿನ ಜೊತೆಯಾಟವನ್ನು ಆಡಿತು. ನಾಯಕ ರೋಹಿತ್ ಶರ್ಮಾ ಎಂದಿನಂತೆ ತಮ್ಮ ಅಬ್ಬರದ ಬ್ಯಾಟಿಂಗ್ ಮಾಡಿರು. ಪ್ರತಿ ಓವರ್ಗೆ 10 ರನ್ ಕಲೆಹಾಕುವ ಉದ್ದೇಶದಿಂದ ಬ್ಯಾಟ್ ಬೀಸಿದರು. ಆರಂಭದ ಓವರ್ನಲ್ಲೇ ಅಬ್ಬರಿಸಿದ ರೋಹಿತ್ ಶರ್ಮಾ 29 ಬಾಲ್ನಲ್ಲಿ 4 ಬೌಂಡರಿ ಮತ್ತು 4 ಸಿಕ್ಸ್ನಿಂದ 47 ರನ್ ಗಳಿಸಿ ಔಟ್ ಆದರು.
-
Innings Break!
— BCCI (@BCCI) November 15, 2023 " class="align-text-top noRightClick twitterSection" data="
A stellar batting display by #TeamIndia as we set a target of 398 in Semi-Final 1! 🙌
Over to our bowlers 💪
Scorecard ▶️ https://t.co/FnuIu53xGu#CWC23 | #MenInBlue | #INDvNZ pic.twitter.com/R4CKq3u16m
">Innings Break!
— BCCI (@BCCI) November 15, 2023
A stellar batting display by #TeamIndia as we set a target of 398 in Semi-Final 1! 🙌
Over to our bowlers 💪
Scorecard ▶️ https://t.co/FnuIu53xGu#CWC23 | #MenInBlue | #INDvNZ pic.twitter.com/R4CKq3u16mInnings Break!
— BCCI (@BCCI) November 15, 2023
A stellar batting display by #TeamIndia as we set a target of 398 in Semi-Final 1! 🙌
Over to our bowlers 💪
Scorecard ▶️ https://t.co/FnuIu53xGu#CWC23 | #MenInBlue | #INDvNZ pic.twitter.com/R4CKq3u16m
ಸಿಕ್ಸ್ ದಾಖಲೆ: ಇನ್ನಿಂಗ್ಸ್ನಲ್ಲಿ 4 ಸಿಕ್ಸ್ ಗಳಿಸಿದ ರೋಹಿತ್ ಶರ್ಮಾ ವಿಶ್ವಕಪ್ನಲ್ಲಿ 50 ದೊಡ್ಡ ಹೊಡೆತಗಳನ್ನು ಬಾರಿಸಿದ ಬ್ಯಾಟರ್ ಎಂಬ ಖ್ಯಾತಿ ಪಡೆದರು. ಒಟ್ಟಾರೆ ವಿಶ್ವಕಪ್ನಲ್ಲಿ ಗೇಲ್ 49 ಶತಕ ಗಳಿಸಿದ್ದು ದಾಖಲೆ ಆಗಿತ್ತು, ಅಲ್ಲದೇ 2015ರ ವಿಶ್ವಕಪ್ ಒಂದರಲ್ಲಿ ಗೇಲ್ 26 ಸಿಕ್ಸ್ ಗಳಿಸಿದ್ದರು, ರೋಹಿತ್ ಶರ್ಮಾ 27 ಸಿಕ್ಸ್ಗಳನ್ನು ಗಳಿಸಿ ಆ ದಾಖಲೆಯನ್ನು ಮುರಿದಿದ್ದಾರೆ.
ವಿರಾಟ್ - ಗಿಲ್ ಜೊತೆಯಾಟ: ಎರಡನೇ ವಿಕೆಟ್ಗೆ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಮತ್ತೊಂದು 70ಕ್ಕೂ ಹೆಚ್ಚು ರನ್ಗಳ ಪಾಲುದಾರಿಕೆ ಹಂಚಿಕೊಂಡರು. 79 ರನ್ ಗಳಿಸಿ ಆಡುತ್ತಿದ್ದ ಶುಭಮನ್ ಗಿಲ್ ಮುಂಬೈ ಬಿಸಿಲಿನ ಬಳಲಿಕೆಯಿಂದಾಗಿ ಪಂದ್ಯದಿಂದ ಹೊರನಡೆದರು. ಈ ವೇಳೆಗೆ ಅವರು ಇನ್ನಿಂಗ್ಸ್ನಲ್ಲಿ 65 ಬಾಲ್ ಆಡಿ 8 ಬೌಂಡರಿ, 3 ಸಿಕ್ಸ್ನಿಂದ 79 ರನ್ ಗಳಿಸಿದ್ದರು. ನಂತರ ಕೊನೆ 4 ಬಾಲ್ ಇದ್ದಾಗ ಮೈದಾನಕ್ಕೆ ಮರಳಿದ ಗಿಲ್ 80 ರನ್ ಮಾಡಿ ಅಜೇಯವಾಗಿ ಉಳಿದರು.
-
A record-breaking evening in Mumbai! 👑👏#TeamIndia | #CWC23 | #MenInBlue | #INDvNZ pic.twitter.com/54m9syw66Z
— BCCI (@BCCI) November 15, 2023 " class="align-text-top noRightClick twitterSection" data="
">A record-breaking evening in Mumbai! 👑👏#TeamIndia | #CWC23 | #MenInBlue | #INDvNZ pic.twitter.com/54m9syw66Z
— BCCI (@BCCI) November 15, 2023A record-breaking evening in Mumbai! 👑👏#TeamIndia | #CWC23 | #MenInBlue | #INDvNZ pic.twitter.com/54m9syw66Z
— BCCI (@BCCI) November 15, 2023
ವಿರಾಟ್ 50ನೇ ಶತಕ : ನಡೆಯುತ್ತಿರುವ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ವಿರಾಟ್ ಕೊಹ್ಲಿ, ಮತ್ತೊಂದು ಶತಕ ಗಳಿಸಿ ಫಾರ್ಮ್ನ್ನು ಮುಂದುವರೆಸಿದರು. ಈ ಶತಕದಿಂದ ಸಚಿನ್ ತೆಂಡೂಲ್ಕರ್ ಅವರ ಎರಡು ದಾಖಲೆಗಳು ಮುರಿದವು. 80 ರನ್ ಗಳಿಸುತ್ತಿದ್ದಂತೆ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಆಟಗಾರ ಆದರೆ, ಶತಕ ಗಳಿಸಿ ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ನೂರು ರನ್ ಗಳಿಸಿದ ಆಟಗಾರ ಎನಿಸಿ ಕೊಂಡರು. ವಿರಾಟ್ ಇನ್ನಿಂಗ್ಸ್ನಲ್ಲಿ 113 ಬಾಲ್ ಆಡಿ 9 ಬೌಂಡರಿ ಮತ್ತು 2 ಸಿಕ್ಸ್ನಿಂದ 117 ರನ್ ಕಲೆಹಾಕಿ ಔಟ್ ಆದರು.
ಅಯ್ಯರ್ ಮತ್ತೊಂದು ಶತಕ: ಬೆಂಗಳೂರಿನಲ್ಲಿ ನೆದರ್ಲೆಂಡ್ಸ್ ವಿರುದ್ಧ ಶತಕ ಗಳಿಸಿದ್ದ ಶ್ರೇಯಸ್ ಅಯ್ಯರ್, ಸೆಮೀಸ್ನಲ್ಲಿ ಮತ್ತೊಂದು ಶತಕ ದಾಖಲಿಸಿದರು. ಅಯ್ಯರ್ ಇನ್ನಿಂಗ್ಸ್ನಲ್ಲಿ 8 ಸಿಕ್ಸ್, 4 ಬೌಂಡರಿಯಿಂದ 105 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಕೆ ಎಲ್ ರಾಹುಲ್ ಅಬ್ಬರಿಸಿದ್ದು, 20 ಬಾಲ್ ಆಡಿ 2 ಸಿಕ್ಸ್ ಮತ್ತು 5 ಬೌಂಡಿಯಿಂದ 39 ರನ್ ಕಲೆಹಾಕಿ ಅಜೇಯವಾಗಿ ಉಳಿದರು. ಸೂರ್ಯಕುಮಾರ್ ಯಾದವ್ 1 ರನ್ಗೆ ವಿಕೆಟ್ ಕೊಟ್ಟರು. ಒಟ್ಟಿನಲ್ಲಿ 50 ಓವರ್ ಮುಕ್ತಾಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 397 ರನ್ ಕಲೆಹಾಕಿತು.
- " class="align-text-top noRightClick twitterSection" data="">
ನ್ಯೂಜಿಲೆಂಡ್ ಪರ ಅನಿಭವಿ ಬೌಲರ್ ಟಿಮ್ ಸೌಥಿ 10 ಓವರ್ ಮಾಡಿ 100 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಬೊಲ್ಟ್ ಒಂದು ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್: ಭಾರತ-ನ್ಯೂಜಿಲೆಂಡ್ ಫೈಟ್, ಮಳೆಯಾದರೆ ಹೇಗೆ?