ETV Bharat / sports

ಪಾಕ್ ವಿರುದ್ಧದ ಪಂದ್ಯದಲ್ಲಿ ಸೂರ್ಯನಿಗೆ ಸಿಗಬಹುದೇ ಅವಕಾಶ?.. ಹೀಗಿದೆ ಭಾರತ ತಂಡದ ಲೆಕ್ಕಾಚಾರ - ಭಾರತ ತಂಡದ ಮಧ್ಯಮ ಕ್ರಮಾಂಕ ಹೇಗಿದೆ

ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಭಾರತ ಆತಿಥ್ಯ ವಹಿಸಿರುವ ಏಕದಿನ ವಿಶ್ವಕಪ್‌ನಲ್ಲಿ ಇಂದು ಬಹುಕಾಲದ ಪ್ರತಿಸ್ಪರ್ಧಿಗಳ ಹೋರಾಟ ನಡೆಯಲಿದೆ. ಇದಕ್ಕೂ ಮುನ್ನ ಇಂದಿನ ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್​ ಅವಕಾಶ ಸಿಗಬಹುದೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ICC Cricket World Cup 2023  India team predicted xi  India team predicted xi vs Pakistan  world cup 2023  ಪಂದ್ಯದಲ್ಲಿ ಸೂರ್ಯನಿಗೆ ಸಿಗಬಹುದೇ ಅವಕಾಶ  ಭಾರತ ತಂಡದ ಲೆಕ್ಕಾಚಾರ  ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದ್ದ ದಿನ  ಭಾರತ ಆತಿಥ್ಯ ವಹಿಸಿರುವ ಏಕದಿನ ವಿಶ್ವಕಪ್‌  ODI ವಿಶ್ವಕಪ್​ನಲ್ಲಿ ಕ್ರಿಕೆಟ್ ಹಬ್ಬ  ಭಾರತ vs ಪಾಕಿಸ್ತಾನ ಪಂದ್ಯ  ಕಣಕ್ಕಿಳಿಯಲಿದ್ದಾರಾ ಶುಭ್ಮನ್​ ಗಿಲ್​ ಭಾರತ ತಂಡದ ಮಧ್ಯಮ ಕ್ರಮಾಂಕ ಹೇಗಿದೆ  ಇದು ಬೌಲಿಂಗ್ ತಂಡ
ಹೀಗಿದೆ ಭಾರತ ತಂಡದ ಲೆಕ್ಕಾಚಾರ
author img

By ETV Bharat Karnataka Team

Published : Oct 14, 2023, 1:23 PM IST

ಅಹಮದಾಬಾದ್​, ಗುಜರಾತ್​: ಇಂದು ODI ವಿಶ್ವಕಪ್​ನಲ್ಲಿ ಕ್ರಿಕೆಟ್ ಹಬ್ಬ. ಭಾರತ vs ಪಾಕಿಸ್ತಾನ ಪಂದ್ಯವು ಅಹಮದಾಬಾದ್ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದೆ. ಆದ್ರೆ ಅಂತಿಮ ತಂಡದ ಆಯ್ಕೆಯ ಬಗ್ಗೆ ಎಲ್ಲರೂ ಇನ್ನೂ ಉತ್ಸುಕರಾಗಿದ್ದಾರೆ. ಯಾರನ್ನು ತೆಗೆದುಕೊಳ್ಳಲಾಗುವುದು.. ಯಾರನ್ನು ಬಿಡಲಾಗುವುದು.. ಎಂಬುದು ಆಸಕ್ತಿಕರ ವಿಷಯವಾಗಿದೆ. ಪಾಕಿಸ್ತಾನದ ವೇಗವನ್ನು ಎದುರಿಸಲು ಬ್ಯಾಟಿಂಗ್ ಬಲವಾಗಿರಬೇಕು. ಅವರು ತೀಕ್ಷ್ಣವಾದ ಬೌಲಿಂಗ್​ನೊಂದಿಗೆ ಕಣಕ್ಕಿಳಿಯುತ್ತಾರೆ. ಅಂತಿಮ ತಂಡದಲ್ಲಿ ಬಹುತೇಕ ಎಲ್ಲ ಸ್ಥಾನಗಳು ಓಕೆಯಾದರೂ ನಾಯಕ ರೋಹಿತ್ ಶರ್ಮಾ ಈಗಾಗಲೇ ಒಂದೋ ಅಥವಾ ಎರಡೋ ಬದಲಾವಣೆ ಆಗಲಿದೆ ಎಂದು ಹೇಳಿದ್ದಾರೆ.

ಕಣಕ್ಕಿಳಿಯಲಿದ್ದಾರಾ ಶುಭ್ಮನ್​ ಗಿಲ್​?: ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಶುಭ್ಮನ್ ಗಿಲ್ ಇದೀಗ ಪಾಕಿಸ್ತಾನದ ವಿರುದ್ಧ ಆಡಲು ಸಜ್ಜಾಗಿರುವಂತೆ ಕಾಣುತ್ತಿದೆ. ಡೆಂಘಿಯಿಂದ ಚೇತರಿಸಿಕೊಂಡ ನಂತರ ಅಭ್ಯಾಸದಲ್ಲಿ ಗಿಲ್​ ತೊಡಗಿರುವ ವಿಚಾರ ಗೊತ್ತೇ ಇದೆ. ಆದರೆ ಗಿಲ್ ಆಡಬಾರದು ಎಂದು ಮ್ಯಾನೇಜ್ ಮೆಂಟ್ ಭಾವಿಸಿದರೆ ಇಶಾನ್ ಕಿಶನ್​ಗೆ ಮತ್ತೊಂದು ಅವಕಾಶ ಸಿಗಲಿದೆ. ಆದರೆ, ಕಳೆದ ಎರಡು ಪಂದ್ಯಗಳಲ್ಲಿ ಇಶಾನ್‌ಗೆ ಪ್ರದರ್ಶನ ಅಷ್ಟಕಷ್ಟೆ ಇತ್ತು. ಹಾಗಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಓಪನರ್ ಆಗಿ ಕರೆತಂದರೂ ಆಶ್ಚರ್ಯವಿಲ್ಲ. ಪವರ್ ಪ್ಲೇನಲ್ಲಿ ಬಿಗ್ ಶಾಟ್​ಗಳನ್ನು ಬಾರಿಸಬಲ್ಲ ಹಾಗೂ ಅಮೋಘ ವೇಗದಲ್ಲಿ ಆಡಬಲ್ಲ ಸೂರ್ಯ ಸೆಟ್ಟರ್ ಆಗಲಿದ್ದಾರೆ ಎಂದು ಕ್ರಿಕೆಟ್ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಆದರೆ, ನಿರ್ಣಾಯಕ ಕದನದಲ್ಲಿ ಭಾರತ ಪ್ರಯೋಗಗಳಿಗೆ ಮುಂದಾಗುವುದೇ.. ಎಂಬ ಅನುಮಾನವೂ ಮೂಡಿದೆ.

ಭಾರತ ತಂಡದ ಮಧ್ಯಮ ಕ್ರಮಾಂಕ ಹೇಗಿದೆ?: ಭಾರತದ ಅಗ್ರ ಕ್ರಮಾಂಕದಲ್ಲಿ ಆರಂಭಿಕರನ್ನು ಹೊರತುಪಡಿಸಿ, ಒನ್ ಡೌನ್ ಮತ್ತು ಸೆಕೆಂಡ್ ಡೌನ್ ಬಹಳ ಮುಖ್ಯ. ಆದರೆ, ಈ ಎರಡು ಸ್ಥಾನಗಳಲ್ಲಿ ಟೀಂ ಇಂಡಿಯಾಗೆ ಯಾವುದೇ ಸಮಸ್ಯೆ ಇಲ್ಲ. ಏಕೆಂದರೆ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುತ್ತಾರೆ. ಆ ಬಳಿಕ ಶ್ರೇಯಸ್ ಅಯ್ಯರ್ ಫಾರ್ಮ್​ಗೆ ಮರಳಿರುವುದು ಟೀಂ ಇಂಡಿಯಾಕ್ಕೆ ಪ್ಲಸ್ ಆಗಿದೆ. ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ. ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್/ರವಿಚಂದ್ರನ್ ಅಶ್ವಿನ್ ಕೂಡ ಕೆಳ ಕ್ರಮಾಂಕದಲ್ಲಿ ಅಮೂಲ್ಯ ರನ್ ಗಳಿಸುವ ಸಾಮರ್ಥ್ಯ ಹೊಂದಿರುವ ಬ್ಯಾಟ್ಸ್‌ಮನ್‌ಗಳು. ಆದರೆ, ಶಾರ್ದೂಲ್ ಅಥವಾ ಅಶ್ವಿನ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗಬಹುದು. ಪಿಚ್ ಸ್ಪಿನ್‌ಗೆ ಸೂಕ್ತವೆಂದು ಪರಿಗಣಿಸಿದರೆ, ನಿರ್ವಹಣೆ ಅಶ್ವಿನ್ ಕಡೆಗೆ ವಾಲುತ್ತದೆ.

ಇದು ಬೌಲಿಂಗ್ ತಂಡ: ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಸಿರಾಜ್ ಮತ್ತು ಶಮಿ ಪ್ರಮುಖ ವೇಗಿಗಳಾಗಿದ್ದರೆ, ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ವೇಗದ ಆಲ್‌ರೌಂಡರ್‌ಗಳು. ಅಶ್ವಿನ್, ಜಡೇಜಾ ಮತ್ತು ಕುಲದೀಪ್ ಯಾದವ್ ಸ್ಪಿನ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹಾರ್ದಿಕ್ ಮತ್ತು ಶಾರ್ದೂಲ್ ಅಂತಿಮ ತಂಡದಲ್ಲಿದ್ದರೆ ಇನ್ನೂ ಇಬ್ಬರು ವೇಗಿಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. ಪಾಕಿಸ್ತಾನದ ವಿರುದ್ಧ ಅಮೋಘ ಬೌಲಿಂಗ್ ಮಾಡುವ ಶಮಿಯನ್ನು ತೆಗೆದುಕೊಂಡರೆ ಉತ್ತಮ ಎಂಬ ಮಾತಿದೆ. ನಂತರ ಬುಮ್ರಾ, ಶಮಿ, ಹಾರ್ದಿಕ್, ಶಾರ್ದೂಲ್ ಜೊತೆಗೆ ಜಡೇಜಾ ಮತ್ತು ಕುಲದೀಪ್ ಬೌಲಿಂಗ್ ತಂಡ ಕಣಕ್ಕೆ ಇಳಿಯಲಿದೆ. ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಾದ ಬಾಬರ್, ರಿಜ್ವಾನ್, ಶಕೀಲ್, ಅಬ್ದುಲ್ಲಾ ಮತ್ತು ಇಫ್ತಿಕರ್ ಅವರನ್ನು ತಡೆಯಲು ಭಾರತೀಯ ಬೌಲರ್‌ಗಳು ಶ್ರಮಿಸಬೇಕಾಗಿದೆ.

ಭಾರತದ ಸಂಭಾವ್ಯ ತಂಡ: ರೋಹಿತ್ (ನಾಯಕ), ಶುಭಮನ್/ಇಶಾನ್, ಕೊಹ್ಲಿ, ಶ್ರೇಯಸ್, ರಾಹುಲ್, ಹಾರ್ದಿಕ್, ಜಡೇಜಾ, ಅಶ್ವಿನ್/ಶಾರ್ದೂಲ್, ಕುಲದೀಪ್, ಬುಮ್ರಾ, ಸಿರಾಜ್/ಶಮಿ.

ಓದಿ: ಕೊಹ್ಲಿಗಿಂತ ರೋಹಿತ್ ವಿಭಿನ್ನ ಆಟಗಾರ.. ಹಿಟ್​ಮ್ಯಾನ್​ ಬಗ್ಗೆ ಇರಲಿ ಎಚ್ಚರ: ಮಾಜಿ ಬೌಲರ್​ಗಳಿಂದ ಪಾಕ್​ ಆಟಗಾರರಿಗೆ ಕಿವಿಮಾತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.