ಧರ್ಮಶಾಲ(ಹಿಮಾಚಲಪ್ರದೇಶ): 2023 ರ ODI ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ನೆದರ್ಲ್ಯಾಂಡ್ಸ್ ಭರ್ಜರಿ ಜಯ ದಾಖಲಿಸಿದೆ. ತಂಡದ ಗೆಲುವಿಗೆ ಮುಖ್ಯ ಪಾತ್ರ ವಹಿಸಿರುವ ವೇಗಿ ಪಾಲ್ ವ್ಯಾನ್ ಮೀಕೆರೆನ್ ಅವರು ಮೂರು ವರ್ಷಗಳ ಹಿಂದೆ ಮಾಡಿದ್ದ ಪೋಸ್ಟ್ವೊಂದು ಈಗ ವೈರಲ್ ಆಗ್ತಿದೆ. ಈ ಪಂದ್ಯದಲ್ಲಿ ಪಾಲ್ ಎರಡು ಪ್ರಮುಖ ವಿಕೆಟ್ ಪಡೆದು ಮಿಂಚಿದ್ದರು.
ಮೂರು ವರ್ಷಗಳ ಹಿಂದೆ (2020 ರಲ್ಲಿ) ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದ್ದ ಕೋವಿಡ್ ಸಾಂಕ್ರಾಮಿಕದ ವೇಳೆ ಪಾಲ್ ವ್ಯಾನ್ ಅವರು ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದರು. ಕೊರೊನಾದಿಂದಾಗಿ ಮುಂದಿನ ವರ್ಷಕ್ಕೆ T20 ವಿಶ್ವಕಪ್ ಮುಂದೂಡಲ್ಪಟ್ಟಿದ್ದಾರೆ. ಕುಟುಂಬದ ಪೋಷಣೆಗಾಗಿ 'Uber Eats' ನಲ್ಲಿ ಫುಡ್ ಡೆಲಿವರಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಫೋಸ್ಟ್ ಮಾಡಿದ್ದರು.
"ನಾನು ಇಂದು ಕ್ರಿಕೆಟ್ ಆಡಬೇಕಿತ್ತು. ಆದರೆ, ಉಬರ್ ಈಟ್ಸ್ ನನ್ನ ಜೀವನವನ್ನು ಮುಂದುವರಿಸಲು ನನ್ನ ಕೈಗೆ ಆಹಾರವನ್ನು ನೀಡುತ್ತದೆ. ಹ್ಹಾ ಹ್ಹಾ.. ಜೀವನ ಹೇಗೆ ಬದಲಾಗಿದೆ. ಯಾವಾಗಲೂ ನಗುತ್ತಲೇ ಇರಿ" ಎಂದು ಪಾಲ್ ವಾನ್ ಪೋಸ್ಟ್ ಮಾಡಿದ್ದರು.. ವೇಗಿ ವ್ಯಾನ್ ಮೀಕೆರೆನ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದರು.
“ಕ್ರಿಕೆಟ್ ಆಡಲು ಪರಿಸ್ಥಿತಿಗಳು ಸೂಕ್ತವಲ್ಲದ ಕಾರಣ ನಾನು ಕೆಲಸ ಮಾಡಲು ಯೋಚಿಸಿದೆ. ಅಗತ್ಯ ವಸ್ತುಗಳು, ಪೆಟ್ರೋಲ್, ಆಹಾರ, ಮನೆ ಬಾಡಿಗೆ, ಫೋನ್ ಬಿಲ್‌ಗಳಂತಹ ವೆಚ್ಚಗಳಿಗೆ ಕೆಲಸ ಮಾಡಬೇಕು. ಆದರೆ, ಕ್ರಿಕೆಟ್ ತಂಡದಿಂದ ಯಾವಾಗ ಕರೆ ಬರುತ್ತದೆ ಎಂಬುದು ತಿಳಿದಿಲ್ಲ. ಆದ್ದರಿಂದ ಅದಕ್ಕೆ ಸೂಕ್ತವಾದ ಉದ್ಯೋಗಗಳಿಗಾಗಿ ಪ್ರಯತ್ನಿಸಿದೆ. ನಂತರ ನನ್ನ ಸ್ನೇಹಿತರ ಮೂಲಕ ನನಗೆ ಫುಡ್ ಡೆಲಿವರಿ ಬಾಯ್ ಕೆಲಸ ಸಿಕ್ಕಿತು. ಆದರೆ ನಾನು ಆ ಕೆಲಸ ಮಾಡಲು ನಾಚಿಕೆ ಪಡುಲಿಲ್ಲ ಎಂದು ವ್ಯಾನ್ ಮೀಕೆರೆನ್ ಹೇಳಿದರು.
ಓದಿ: World Cup 2023: ತಂಡದ ಗೆಲುವು ತುಂಬಾ ಹೆಮ್ಮೆ, ಸಂತಸ ತಂದಿದೆ: ನೆದರ್‌ಲ್ಯಾಂಡ್ಸ್ ನಾಯಕ ಸ್ಕಾಟ್
ಡಚ್ಚರಿಂದ ದಕ್ಷಿಣ ಆಫ್ರಿಕಾಕ್ಕೆ ಸೋಲು: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ವಿಕೆಟ್ ಕೀಪರ್, ಬ್ಯಾಟರ್ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾವನ್ನು ದಂಗುಬಡಿಸಿದೆ. ನಡೆಯುತ್ತಿರುವ ಮಾರ್ಕ್ವೀ ಟೂರ್ನಮೆಂಟ್ನಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ನೆದರ್ಲ್ಯಾಂಡ್ಸ್ ತಂಡವು ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವನ್ನು 38 ರನ್‌ಗಳಿಂದ ಸೋಲಿಸಿತು. ಈ ಗೆಲುವಿನ ಮೂಲಕ ನೆದರ್ಲ್ಯಾಂಡ್ಸ್ ತಂಡವು ಬಲಾಢ್ಯ ದಕ್ಷಿಣ ಆಫ್ರಿಕಾ ತಂಡದ ಜಯದ ನಾಗಾಲೋಟಕ್ಕೆ ಬ್ರೇಕ್ ಹಾಕಿತು.