ETV Bharat / sports

Cricket World Cup 2023: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023... ಲಿಂಗ ಸಮಾನತೆ ಸಾರುವ ಮ್ಯಾಸ್ಕಾಟ್ ಬಿಡುಗಡೆ

author img

By

Published : Aug 19, 2023, 8:32 PM IST

Male and Female Mascot for World Cup 2023: ಭಾರತದಲ್ಲಿ ನಡೆಯುವ ವಿಶ್ವಕಪ್​ ಪ್ರಚಾರಕ್ಕಾಗಿ ಐಸಿಸಿ ಲಿಂಗ ಸಮಾನತೆಯನ್ನು ಪ್ರತಿಬಿಂಬಿಸುವ ಮ್ಯಾಸ್ಕಾಟ್​ನ್ನು ಬಿಡುಗಡೆ ಮಾಡಿದೆ.

ICC unveils mascot duo for Mens Cricket World Cup 2023

ಗುರುಗ್ರಾಮ್ (ಹರಿಯಾಣ): ಹಾಲಿ 19 ವರ್ಷದೊಳಗಿನ ವಿಶ್ವಕಪ್ ಚಾಂಪಿಯನ್‌ಗಳಾದ ಯಶ್ ಧುಲ್ ಮತ್ತು ಶಫಾಲಿ ವರ್ಮಾ ಗುರುಗ್ರಾಮ್‌ನಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಕಾರ್ಯಕ್ರಮದಲ್ಲಿ ಮ್ಯಾಸ್ಕಾಟ್ ಜೋಡಿಯನ್ನು ಅನಾವರಣಗೊಳಿಸಿದರು. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಮ್ಯಾಸ್ಕಾಟ್ ಜೋಡಿಗೆ​ ಪ್ರಪಂಚದಾದ್ಯಂತ ಅಭಿಮಾನಿಗಳು ಹೆಸರನ್ನು ಸೂಚಿಸಬಹುದಾಗಿದೆ.

ಕ್ರಿಕೆಟ್ ವಿಶ್ವಕಪ್ ಸಮೀಪಿಸುತ್ತಿರುವಾಗ ಪ್ರಚಾರದ ಅಂಗವಾಗಿ ಮತ್ತು ಜನರ ಆಕರ್ಷಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಮ್ಯಾಸ್ಕಾಟ್ ಜೋಡಿಯನ್ನು ಐಸಿಸಿ ಪರಿಚಯಿಸಿದೆ. ಈ ಜೋಡಿ ಕ್ರಿಕ್ಟೋವರ್ಸ್ ಎಂಬ ಯುಟೋಪಿಯಾದಿಂದ ಹುಟ್ಟಿಕೊಂಡಿದೆ, ಪುರುಷ ಮತ್ತು ಸ್ತ್ರೀ ಮ್ಯಾಸ್ಕಾಟ್‌ಗಳು ಐಸಿಸಿ ಪ್ರಕಾರ ಲಿಂಗ ಸಮಾನತೆ ಮತ್ತು ವೈವಿಧ್ಯತೆ ಸಂಕೇತಗಳಾಗಿ ವಿಶಿಷ್ಟ ಲಕ್ಷಣಗಳನ್ನು ಪ್ರತಿನಿಧಿಸುತ್ತವೆ.

ಈ ಮ್ಯಾಸ್ಕಾಟ್‌ ಬೊಂಬೆಗಳ ಕಾರ್ಟೂನ್​ನಲ್ಲಿ ವಿರಾಟ್​ ಕೊಹ್ಲಿ, ಎಲ್ಲಿಸಾ ಪೆರ್ರಿ, ಜೋಸ್​ ಬಟ್ಲರ್​, ಜಸ್ಪ್ರೀತ್​ ಬುಮ್ರಾ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ವಿಂಚಿನ ವೇಗದಲ್ಲಿ ಬುಮ್ರಾ ಮತ್ತು ಪೆರ್ರಿ ಮಿಂಚಿನ ವೇಗದಲ್ಲಿ ಬೌಲಿಂಗ್​ ಮಾಡುತ್ತಾರೆ. ವಿರಾಟ್​ ಮತ್ತು ಬಟ್ಲರ್​ ಬ್ಯಾಟ್​ನಿಂದ ಭರ್ಜರಿ ಶಾಟ್​ ಹೊಡೆಯುತ್ತಾರೆ. ಇವೆಲ್ಲವೂ 40 ಸೆಕೆಂಡಿನ ಕಾರ್ಟೂನ್​ನಲ್ಲಿ ಕಟ್ಟಿಕೊಡಲಾಗಿದೆ. 2011ರ ಭಾರತದಲ್ಲಿ ನಡೆದ ವಿಶ್ವಕಪ್​ಗೆ ಆನೆಯ ಗೊಂಬೆಯನ್ನು ಮ್ಯಾಸ್ಕಾಟ್‌ ಆಗಿ ಬಳಸಲಾಗಿತ್ತು. ಈಗ ಬಿಡುಗಡೆ ಆಗಿರುವ ಮ್ಯಾಸ್ಕಾಟ್​ಗೆ ಅಭಿಮಾನಿಗಳು ಐಸಿಸಿ ಸೈಟ್​ನಲ್ಲಿ ಹೋಗಿ ಆಗಸ್ಟ್​​ 27ರ ಒಳಗೆ ಹೆಸರು ಸೂಚಿಸಬಹುದು ಎಂದು ತಿಳಿಸಲಾಗಿದೆ.

ಮ್ಯಾಸ್ಕಾಟ್‌ಗಳ ಅನಾವರಣದ ಕುರಿತು ಮಾತನಾಡಿದ ಐಸಿಸಿ ಈವೆಂಟ್‌ಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ,"ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಕ್ಕಿಂತ ಮೊದಲು ಐಸಿಸಿಯ ಮ್ಯಾಸ್ಕಾಟ್ ಜೋಡಿಯನ್ನು ಬಿಡುಗಡೆ ಮಾಡಲಾಗಿದೆ. ಶಾಶ್ವತ ಪಾತ್ರಗಳು ಸಂಸ್ಕೃತಿಗಳು ಮತ್ತು ಗಡಿಗಳನ್ನು ಮೀರಿ ಕ್ರಿಕೆಟ್‌ನ ಸಾರ್ವತ್ರಿಕ ಆಕರ್ಷಣೆಯನ್ನು ಸೂಚಿಸುತ್ತವೆ, ಮ್ಯಾಸ್ಕಾಟ್‌ಗಳು ಏಕತೆ ಮತ್ತು ಉತ್ಸಾಹದ ದಾರಿದೀಪಗಳಾಗಿ ನಿಂತಿವೆ. ಎರಡೂ ಲಿಂಗಗಳ ಪ್ರಾತಿನಿಧ್ಯದೊಂದಿಗೆ, ಅವರು ನಮ್ಮ ಕ್ರಿಯಾತ್ಮಕ ಜಗತ್ತಿನಲ್ಲಿ ಲಿಂಗ ಸಮಾನತೆಯ ಪ್ರಮುಖ ಪಾತ್ರವನ್ನು ನಿರೂಪಿಸುತ್ತಾರೆ. ಮುಂದಿನ ಪೀಳಿಗೆಯ ಕ್ರಿಕೆಟ್ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಐಸಿಸಿ ಮತ್ತು ಕ್ರಿಕೆಟ್‌ನ ಆದ್ಯತೆಗೆ ಅನುಗುಣವಾಗಿ, ಈ ಮ್ಯಾಸ್ಕಾಟ್‌ಗಳು ಮಕ್ಕಳನ್ನು ತೊಡಗಿಸಿಕೊಳ್ಳುವ ಮತ್ತು ಮನರಂಜನೆ ನೀಡುವ ಶಕ್ತಿಯನ್ನು ಹೊಂದಿದೆ" ಎಂದಿದ್ದಾರೆ.

ಪಂದ್ಯಾವಳಿಯ ಸಮಯದಲ್ಲಿ ಈ ಮ್ಯಾಸ್ಕಾಟ್‌ಗಳು ಅಭಿಮಾನಿಗಳನ್ನು ಮನರಂಜಿಸಲಿವೆ. ಅಲ್ಲದೇ ಪಂದ್ಯದ ವೇಳೆ ಮತ್ತು ಆನ್​ಲೈನ್​ನಲ್ಲಿ ಮ್ಯಾಸ್ಕಾಟ್‌ಗಳ ಮಾರಾಟಕ್ಕೆ ಲಭ್ಯವಿದೆ.

ಇದನ್ನೂ ಓದಿ: Greg Chappell on Kohli: ವಿಶ್ವಕಪ್​ನಲ್ಲಿ ಅತೀ ಹೆಚ್ಚ ರನ್​ ಗಳಿಸುವ ಪ್ರಭಾವಿ ಆಟಗಾರ ವಿರಾಟ್​ ಕೊಹ್ಲಿ... ಗ್ರೆಗ್ ಚಾಪೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.