ದುಬೈ : ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಮೇಲೇರಿದ್ದಾರೆ. ಕಿವೀಸ್ ವಿರುದ್ಧದ ಸರಣಿಯಲ್ಲಿ ವೈಫಲ್ಯ ಅನುಭವಿಸಿದ ಜೋ ರೂಟ್ ಒಂದು ಸ್ಥಾನ ಕುಸಿದಿದ್ದರಿಂದ ಕೊಹ್ಲಿ ನಿರಾಯಾಸವಾಗಿ 4ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ವಿರಾಟ್ ಕೊಹ್ಲಿ (814) ರೇಟಿಂಗ್ ಅಂಕ ಹೊಂದಿದ್ದಾರೆ. ಅಗ್ರಸ್ಥಾನದಲ್ಲಿದ್ದ ಕೇನ್ ವಿಲಿಯಮ್ಸನ್(886) ಕೂಡ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್(891) ಅಗ್ರಸ್ಥಾನದಲ್ಲಿದ್ದರೆ, ಲಾಬುಶೇನ್(878) 3ನೇ ಸ್ಥಾನದಲ್ಲಿದ್ದಾರೆ.
ಭಾರತದ ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ ಕೂಡ ಟಾಪ್ 10ರಲ್ಲಿದ್ದು, ಅವರಿಬ್ಬರು 747 ಅಂಕಗಳೊಂದಿಗೆ ಜಂಟಿ 6ನೇ ಸ್ಥಾನದಲ್ಲಿದ್ದಾರೆ. ಹೆನ್ರಿ ನಿಕೋಲ್ಸ್(732), ಡೇವಿಡ್ ವಾರ್ನರ್(724) ಮತ್ತು ಬಾಬರ್ ಅಜಮ್(714) ಕ್ರಮವಾಗಿ 8,9 ಮತ್ತು 10ನೇ ಸ್ಥಾನದಲ್ಲಿದ್ದಾರೆ. ಚೇತೇಶ್ವರ್ ಪೂಜಾರ 12 ಮತ್ತು ರಹಾನೆ 17ನೇ ಶ್ರೇಯಾಕಕ್ಕೆ ಕುಸಿದಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಮತ್ತು ಅಶ್ವಿನ್ ಅಗ್ರ 2 ಸ್ಥಾನದಲ್ಲಿ ಮುಂದುವರಿದಿದ್ದಾರೆ. ನಂತರದ ಸ್ಥಾನದಲ್ಲಿ ಕಿವೀಸ್ನ ಸೌಥಿ, ಆಸ್ಟ್ರೇಲಿಯಾದ ಹೆಜಲ್ವುಡ್ ಇದ್ದಾರೆ. ವಿಂಡೀಸ್ ವಿರುದ್ಧ ಮಿಂಚಿನ ದಾಳಿ ನಡೆಸಿದ್ದ ರಬಾಡ 2ನೇ ಶ್ರೇಯಾಂಕ ಮೇಲೇರಿ ಆ್ಯಂಡರ್ಸನ್ ಜೊತೆ 7ನೇ ಸ್ಥಾನ ಹಂಚಿಕೊಂಡಿದ್ದಾರೆ.
ಭಾರತದ ವೇಗಿ ಜಸ್ಪ್ರೀತ್ ಬುಮ್ರಾ 11ರಲ್ಲಿ, ಜಡೇಜಾ,ಇಶಾಂತ್ ಮತ್ತು ಶಮಿ ಕ್ರಮವಾಗಿ 16,17, ಮತ್ತು 18ನೇ ಶ್ರೇಯಾಂಕ ಪಡೆದಿದ್ದಾರೆ.
ಇದನ್ನು ಓದಿ:ಈ ಕಾರಣದಿಂದ ಸೌತಾಂಪ್ಟನ್ನಲ್ಲಿ ಅಶ್ವಿನ್-ಜಡೇಜಾ ಇಬ್ಬರೂ ಆಡ್ಬೇಕು : ಸುನೀಲ್ ಗವಾಸ್ಕರ್