ಶಾರ್ಜಾ: ಐಸಿಸಿ ಟಿ-20 ವಿಶ್ವಕಪ್ನ ಗ್ರೂಪ್ ಎ ಹಂತದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ನಮೀಬಿಯಾ ಸೂಪರ್-12 ಹಂತಕ್ಕೆ ಲಗ್ಗೆ ಹಾಕಿದೆ. ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಕಾರಣವಾಗಿದೆ.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಐರ್ಲೆಂಡ್ ತಂಡ ಉತ್ತಮ ಆರಂಭದ ಹೊರತಾಗಿ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಪತನಗೊಂಡು ಕೇವಲ125ರನ್ಗಳಿಕೆ ಮಾಡಲು ಶಕ್ತವಾಯಿತು.
ಐರ್ಲೆಂಡ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸ್ಟ್ರಿಲಿಂಗ್ ಹಾಗೂ ಕೆವಿನ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಈ ಜೊಡಿ ಮೊದಲ ವಿಕೆಟ್ ನಷ್ಟಕ್ಕೆ 7 ಓವರ್ಗಳಲ್ಲಿ 62ರನ್ಗಳಿಕೆ ಮಾಡಿತು. 38ರನ್ಗಳಿಕೆ ಮಾಡಿದ್ದ ಸ್ಟ್ರಿಲಿಂಗ್ ಸ್ಕೋಲ್ಟ್ಜ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ ಕೆವಿನ್ ಕೂಡ 25ರನ್ಗಳಿಗೆ ಔಟಾದರು.
ಇದಾದ ಬಳಿಕ ಬಂದ ಕ್ಯಾಪ್ಟನ್ ಬಾಲ್ಬಿರ್ನಿ 21ರನ್ಗಳಿಕೆ ಮಾಡಿದ್ದೂ ಬಿಟ್ಟರೆ ಬೇರೆ ಯಾವುದೇ ಬ್ಯಾಟರ್ ಎರಡಂಕ್ಕಿ ಗಡಿ ದಾಟಲಿಲ್ಲ. ಹೀಗಾಗಿ ತಂಡ 20 ಓವರ್ಗಳಲ್ಲಿ 8ವಿಕೆಟ್ನಷ್ಟಕ್ಕೆ 125ರನ್ಗಳಿಕೆ ಮಾಡಿತು.
ನಮೀಬಿಯಾ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಜಾನ್ ಫ್ರಾಲಿಂಕ್ 3,ವೈಸಿ 2, ಸ್ಮಿತಿ ಹಾಗೂ ಸ್ಕೋಲ್ಟ್ಜ್ ತಲಾ 1 ವಿಕೆಟ್ ಪಡೆದುಕೊಂಡರು.
-
History ✅
— T20 World Cup (@T20WorldCup) October 22, 2021 " class="align-text-top noRightClick twitterSection" data="
Namibia are through to the Super 12 ✨#T20WorldCup | #NAMvIRE | https://t.co/xv8AGpwHXi pic.twitter.com/p46oBP3Acj
">History ✅
— T20 World Cup (@T20WorldCup) October 22, 2021
Namibia are through to the Super 12 ✨#T20WorldCup | #NAMvIRE | https://t.co/xv8AGpwHXi pic.twitter.com/p46oBP3AcjHistory ✅
— T20 World Cup (@T20WorldCup) October 22, 2021
Namibia are through to the Super 12 ✨#T20WorldCup | #NAMvIRE | https://t.co/xv8AGpwHXi pic.twitter.com/p46oBP3Acj
126 ರನ್ಗಳ ಗುರಿ ಬೆನ್ನತ್ತಿದ್ದ ನಮೀಬಿಯಾ ಕೇವಲ 2 ವಿಕೆಟ್ ಕಳೆದುಕೊಂಡು 18.3 ಓವರ್ಗಳಲ್ಲಿ ಗುರಿ ಮುಟ್ಟಿ, ಸೂಪರ್-12 ಹಂತಕ್ಕೆ ಲಗ್ಗೆ ಹಾಕಿದೆ. ತಂಡದ ಪರ ಆರಂಭಿಕರಾದ ವಿಲಿಯಮ್ಸ್ 15, ಜಾನ್ ಗ್ರೀನ್ 24ರನ್ಗಳಿಸಿದ್ರೆ, ಕ್ಯಾಪ್ಟನ್ ಗ್ರಿಹಾರ್ಡ್ ಅಜೇಯ 53ರನ್ ಹಾಗೂ ಡೆವಿಡ್ ಅಜೇಯ 28ರನ್ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಈ ಹಿಂದೆ ನೆದೆರ್ಲೆಂಡ್ಸ್ ವಿರುದ್ಧ 6 ವಿಕೆಟ್ಗಳಿಂದ ಗೆಲುವು ಸಾಧಿಸುವ ಮೂಲಕ ನಮೀಬಿಯಾ ಟಿ-20 ವಿಶ್ವಕಪ್ ಇತಿಹಾಸದಲ್ಲಿ ತನ್ನ ಮೊದಲ ಜಯ ದಾಖಲಿಸಿತ್ತು. ಇದೀಗ ಶ್ರೀಲಂಕಾ, ಬಾಂಗ್ಲಾದೇಶ, ಸ್ಕಾಟ್ಲೆಂಡ್ ಜೊತೆ ನಮೀಬಿಯಾ ಕೂಡ ಸೂಪರ್-12 ಹಂತಕ್ಕೆ ಲಗ್ಗೆ ಹಾಕಿದ್ದು, ಬಲಿಷ್ಠ ತಂಡಗಳ ಜೊತೆ ಸೆಣಸಾಟ ನಡೆಸಲಿವೆ.