ಹೋಬರ್ಟ್(ಆಸ್ಟ್ರೇಲಿಯಾ): ಟಿ20 ವಿಶ್ವಕಪ್ನ ಕ್ವಾಲಿಫೈರ್ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಸ್ಕಾಟ್ಲೆಂಡ್ ಅನ್ನು ಮಣಿಸಿ ಸೂಪರ್ 12 ಹಂತಕ್ಕೆ ಪ್ರವೇಶ ಪಡೆದುಕೊಂಡಿತು. ಜಿಂಬಾಬ್ವೆ ನಾಯಕ ಕ್ರೇಗ್ ಎರ್ವಿನ್ (58) ಹಾಗು ಸಿಕಂದರ್ ರಾಜಾ ಅವರ 40 ರನ್ ಕೊಡುಗೆ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದೆ.
-
Zimbabwe and Ireland complete the teams in the Super 12 phase that begins tomorrow! 🙌🏻
— ICC (@ICC) October 21, 2022 " class="align-text-top noRightClick twitterSection" data="
Check the updated groups here 👉🏻 https://t.co/xvpQaIitkQ#T20WorldCup pic.twitter.com/WxLcnxhCpd
">Zimbabwe and Ireland complete the teams in the Super 12 phase that begins tomorrow! 🙌🏻
— ICC (@ICC) October 21, 2022
Check the updated groups here 👉🏻 https://t.co/xvpQaIitkQ#T20WorldCup pic.twitter.com/WxLcnxhCpdZimbabwe and Ireland complete the teams in the Super 12 phase that begins tomorrow! 🙌🏻
— ICC (@ICC) October 21, 2022
Check the updated groups here 👉🏻 https://t.co/xvpQaIitkQ#T20WorldCup pic.twitter.com/WxLcnxhCpd
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ಆರು ವಿಕೆಟ್ ಕಳೆದುಕೊಂಡು ಎದುರಾಳಿ ತಂಡಕ್ಕೆ 133 ರನ್ಗಳ ಗುರಿ ನೀಡಿತು. ಜಾರ್ಜ್ ಮುನ್ಸಿ (54), ನಾಯಕ ಬೆರಿಂಗ್ಟನ್ (13) ಮತ್ತು ಮ್ಯಾಕ್ಲಿಯೋಡ್(25) ಅವರ ಆಟದ ನೆರವಿನಿಂದ ತಂಡ ಸಾಧಾರಣ ಮೊತ್ತ ಪೇರಿಸಿತು. ಜಿಂಬಾಬ್ವೆ ಪರ ಟೆಂಡೈ ಚಟಾರಾ ಮತ್ತು ರಿಚರ್ಡ್ ನಾಗರವಾ ತಲಾ ಎರಡು ವಿಕೆಟ್ ಪಡೆದರು.
ಈ ಸಾಧಾರಣ ಗುರಿ ಬೆನ್ನತ್ತಿದ ಜಿಂಬಾಬ್ವೆಗೆ ನಾಯಕ ಕ್ರೇಗ್ ಎರ್ವಿನ್ 58 ಮತ್ತು ಸಿಕಂದರ್ ರಾಜಾ ಅವರ 40 ರನ್ ಕೊಡುಗೆಯಿಂದ ಐದು ವಿಕೆಟ್ಗಳ ಗೆಲುವು ಸಾಧಿಸಿತು. ಸ್ಕಾಟ್ಲೆಂಡ್ ಪರ ಜೋಶ್ ಡೇವಿ ಎರಡು ವಿಕೆಟ್ ಕಿತ್ತರು.
ಸೂಪರ್ 12 ಹಂತ ಪ್ರವೇಶಿಸಿದ ತಂಡಗಳು: ಗ್ರೂಪ್ ಎ ಯಿಂದ ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್, ಬಿ ಗುಂಪಿನಿಂದ ಐರ್ಲೆಂಡ್ ಮತ್ತು ಜಿಂಬಾಬ್ವೆ ನಾಳೆಯಿಂದ ಆರಂಭವಾಗುವ ವಿಶ್ವಕಪ್ ಪಂದ್ಯಾವಳಿಗೆ ಅಧಿಕೃತ ಪ್ರವೇಶ ಪಡೆದಿವೆ.
ಇದನ್ನೂ ಓದಿ: ಐಸಿಸಿ ವಿಶ್ವಕಪ್ 2022: ಕೆರಿಬಿಯನ್ನರ ವಿರುದ್ಧ ಐರ್ಲೆಂಡ್ಗೆ ಭರ್ಜರಿ ಗೆಲುವು, ಸೂಪರ್ 12ಕ್ಕೆ ಲಗ್ಗೆ