ದುಬೈ: ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯುವ ಭಾರತ-ಪಾಕಿಸ್ತಾನ ಪಂದ್ಯ ಸೇರಿದಂತೆ ಒಟ್ಟು ಎಂಟು ಪಂದ್ಯಗಳ ದಿನ ಬದಲಾಗಿದ್ದು, ಹೊಸ ವೇಳಾಪಟ್ಟಿಯನ್ನು ಐಸಿಸಿ ಇಂದು ಬಿಡುಗಡೆಗೊಳಿಸಿತು. ಇತ್ತೀಚೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ವೇಳಾಪಟ್ಟಿಯ ಬದಲಾವಣೆಯ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದರು. ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳು, ಹಬ್ಬದಂದು ಕ್ರಿಕೆಟ್ ಪಂದ್ಯಗಳು ನಡೆದರೆ ಭದ್ರತಾ ಸಮಸ್ಯೆ ಉಂಟಾಗುವ ಸಮಸ್ಯೆಯಿದೆ ಎಂದು ಮನವಿ ಮಾಡಿದ್ದವು.
-
Nine fixtures have been rescheduled for #CWC23.
— ICC (@ICC) August 9, 2023 " class="align-text-top noRightClick twitterSection" data="
Details 👇
">Nine fixtures have been rescheduled for #CWC23.
— ICC (@ICC) August 9, 2023
Details 👇Nine fixtures have been rescheduled for #CWC23.
— ICC (@ICC) August 9, 2023
Details 👇
ಅದರಂತೆ, ಭಾರತ- ಪಾಕಿಸ್ತಾನದ ನಡುವಿನ ಪಂದ್ಯ ಈ ಹಿಂದೆ ಅಕ್ಟೋಬರ್ 15ರ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಬೇಕಿತ್ತು. ಆದರೆ ಈ ಪಂದ್ಯ ಒಂದು ದಿನ ಮುಂಚಿತವಾಗಿ ಅಕ್ಟೋಬರ್ 14ರಂದು ಶನಿವಾರ ಅದೇ ಮೈದಾನದಲ್ಲಿ ನಡೆಯಲಿದೆ. ಇದರ ಪರಿಣಾಮವಾಗಿ, ಅಕ್ಟೋಬರ್ 14ರ ಶನಿವಾರ ದೆಹಲಿಯಲ್ಲಿ ಅಫ್ಘಾನಿಸ್ತಾನ- ಇಂಗ್ಲೆಂಡ್ ನಡುವಿನ ಪಂದ್ಯ ಅಕ್ಟೋಬರ್ 15 ರ ಭಾನುವಾರ ನಡೆಯಲಿದೆ.
ಹೈದರಾಬಾದ್‌ನಲ್ಲಿ ಅಕ್ಟೋಬರ್ 10ರಂದು ನಡೆಯಬೇಕಿದ್ದ ಶ್ರೀಲಂಕಾ- ಪಾಕಿಸ್ತಾನ ಪಂದ್ಯ ಎರಡು ದಿನ ಮುನ್ನ ಅಂದರೆ, ಅಕ್ಟೋಬರ್ 10ರಂದು ನಿಗದಿಯಾಗಿದೆ. ಹೀಗಾಗಿ, ಅಕ್ಟೋಬರ್ 13ರಂದು ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ- ಆಸ್ಟ್ರೇಲಿಯಾ ಪಂದ್ಯ 24 ಗಂಟೆ ಮುಂಚಿತವಾಗಿ, 12ರಂದೇ ನಡೆಯಬೇಕಿದೆ.
ಅಕ್ಟೋಬರ್ 14ರಂದು ಚೆನ್ನೈನಲ್ಲಿ ನಡೆಯಲಿದ್ದ ಬಾಂಗ್ಲಾದೇಶದ-ನ್ಯೂಜಿಲೆಂಡ್ ಪಂದ್ಯ ಅಕ್ಟೋಬರ್ 13 ಶುಕ್ರವಾರ ನಡೆಯಲಿದೆ. ಅಕ್ಟೋಬರ್ 10ರಂದು ಧರ್ಮಶಾಲಾದಲ್ಲಿ ನಡೆಯುವ ಬಾಂಗ್ಲಾದೇಶ-ಇಂಗ್ಲೆಂಡ್ ನಡುವಿನ ಪಂದ್ಯದ ಸಮಯ ಬದಲಾಗಿದ್ದು, ಭಾರತೀಯ ಕಾಲಮಾನ ಬೆಳಗ್ಗೆ 10:30ಕ್ಕೆ ನಿಗದಿಯಾಗಿದೆ.
ಲೀಗ್ನ ಕೊನೆಯ ಮೂರು ಪಂದ್ಯಗಳಲ್ಲಿ ಬದಲಾವಣೆ ಮಾಡಲಾಗಿದೆ. ನವೆಂಬರ್ 11ರಂದು ಭಾರತ- ನೆದರ್ಲ್ಯಾಂಡ್ಸ್ ಬೆಂಗಳೂರಿನಲ್ಲಿ ಆಡಬೇಕಿದ್ದ ಪಂದ್ಯ 12ರಂದು ನಡೆಯಲಿದೆ. ಭಾನುವಾರ ಇದ್ದ ಡಬಲ್ ಹೆಡರ್ ಪಂದ್ಯಗಳು ಶನಿವಾರ ನಡೆಯುತ್ತವೆ. ಅದರಂತೆ, ಬೆಳಗ್ಗೆ 10:30ಕ್ಕೆ ಪುಣೆಯಲ್ಲಿ ಆಸ್ಟ್ರೇಲಿಯಾ- ಬಾಂಗ್ಲಾದೇಶ, ಮಧ್ಯಾಹ್ನ 2ಕ್ಕೆ ಕೋಲ್ಕತ್ತಾದಲ್ಲಿ ಇಂಗ್ಲೆಂಡ್-ಪಾಕಿಸ್ತಾನ ಪಂದ್ಯಗಳು ನಡೆಯಲಿವೆ.
-
Updates fixtures have been revealed for #CWC23 👀
— ICC (@ICC) August 9, 2023 " class="align-text-top noRightClick twitterSection" data="
Details 👉 https://t.co/OxtDvdD1xO pic.twitter.com/or7ksGYDWs
">Updates fixtures have been revealed for #CWC23 👀
— ICC (@ICC) August 9, 2023
Details 👉 https://t.co/OxtDvdD1xO pic.twitter.com/or7ksGYDWsUpdates fixtures have been revealed for #CWC23 👀
— ICC (@ICC) August 9, 2023
Details 👉 https://t.co/OxtDvdD1xO pic.twitter.com/or7ksGYDWs
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2019ರ ಫೈನಲಿಸ್ಟ್‌ಗಳಾದ ಇಂಗ್ಲೆಂಡ್-ನ್ಯೂಜಿಲೆಂಡ್ ತಂಡಗಳು (ಅಕ್ಟೋಬರ್ 5ರ ಗುರುವಾರ) ವಿಶ್ವಕಪ್ ಮೊದಲ ಪಂದ್ಯ ಆಡಲಿವೆ. ಇದೇ ಮೈದಾನದಲ್ಲಿ ನವೆಂಬರ್ 19ರ ಭಾನುವಾರ ಫೈನಲ್ ನಡೆಯಲಿದೆ.
ಟಿಕೆಟ್ ಬುಕ್ಕಿಂಗ್ ಯಾವಾಗ? : ಐಸಿಸಿ ಟಿಕೆಟ್ ಬುಕ್ಕಿಂಗ್ ದಿನಾಂಕ ಪ್ರಕಟಿಸಿದೆ. ಆಗಸ್ಟ್ 15ರಿಂದ ಐಸಿಸಿ ವೆಬ್ಸೈಟ್ನಲ್ಲಿ ಟಿಕೆಟ್‌ಗಳು ಲಭ್ಯ ಎಂದು ತಿಳಿಸಿದೆ. ಆಗಸ್ಟ್ 25 ರಿಂದ ಭಾರತೇತರ ಅಭ್ಯಾಸ ಪಂದ್ಯಗಳು ಮತ್ತು ಎಲ್ಲ ಭಾರತೇತರ ಈವೆಂಟ್ ಪಂದ್ಯಗಳ ಟಿಕೆಟ್ ಮಾರಾಟ ನಡೆಯಲಿದೆ.
ಆಗಸ್ಟ್ 30 - ಗುವಾಹಟಿ ಮತ್ತು ತಿರುವನಂತಪುರದಲ್ಲಿ ಭಾರತದ ಪಂದ್ಯದ ಟಿಕೆಟ್ ಮಾರಾಟ
ಆಗಸ್ಟ್ 31 - ಚೆನ್ನೈ, ದೆಹಲಿ ಮತ್ತು ಪುಣೆಯಲ್ಲಿನ ಭಾರತ ಪಂದ್ಯದ ಟಿಕೆಟ್ ಮಾರಾಟ
ಸೆಪ್ಟೆಂಬರ್ 1 - ಧರ್ಮಶಾಲಾ, ಲಕ್ನೋ ಮತ್ತು ಮುಂಬೈನಲ್ಲಿ ಭಾರತ ಪಂದ್ಯಗಳ ಟಿಕೆಟ್ ಮಾರಾಟ
ಸೆಪ್ಟೆಂಬರ್ 2 - ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಭಾರತ ಪಂದ್ಯದ ಟಿಕೆಟ್ ಮಾರಾಟ
ಸೆಪ್ಟೆಂಬರ್ 3 - ಅಹಮದಾಬಾದ್‌ನಲ್ಲಿನ ಭಾರತ ಪಂದ್ಯದ ಟಿಕೆಟ್ ಮಾರಾಟ
ಸೆಪ್ಟೆಂಬರ್ 15 - ಸೆಮಿಫೈನಲ್, ಫೈನಲ್ ಟಿಕೆಟ್ ಮಾರಾಟ
ಇದನ್ನೂ ಓದಿ: ICC ODI Rankings: ಗಿಲ್, ಕಿಶನ್‌ಗೆ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಸಿಹಿ ಸುದ್ದಿ!