ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ನೂತನ ಶ್ರೇಯಾಂಕದಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅಗ್ರ 5ರಲ್ಲಿ ಕಾಣಿಸಿಕೊಂಡ ಏಕೈಕ ಕ್ರಿಕೆಟಿಗನಾಗಿದ್ದಾರೆ.
ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧದ ಟಿ20 ಸರಣಿ ನಂತರ ಈ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು. ವಿರಾಟ್ ಕೊಹ್ಲಿ ಏಕದಿನ ಶ್ರೇಯಾಂಕದಲ್ಲಿ 2ನೇ ಸ್ಥಾನ, ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 5 ಮತ್ತು ಟೆಸ್ಟ್ನಲ್ಲಿ 4ನೇ ಸ್ಥಾನ ಪಡೆದಿದ್ದಾರೆ.
ರೋಹಿತ್ ಶರ್ಮಾ ಟೆಸ್ಟ್ ಶ್ರೇಯಾಂಕದಲ್ಲಿ 6ರಲ್ಲಿದ್ದರೆ, ಏಕದಿನದಲ್ಲಿ 3ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್ ಟಿ20 ಶ್ರೇಯಾಂಕದಲ್ಲಿ 6ನೇ ಸ್ಥಾನಕ್ಕೇರಿದ್ದಾರೆ.
-
Pakistan wicketkeeper-batsman Mohammad Rizwan breaks into the top 10 of the @MRFWorldwide ICC Men's T20I Player Rankings for batting 👏
— ICC (@ICC) July 21, 2021 " class="align-text-top noRightClick twitterSection" data="
Full list: https://t.co/77cLFa815E pic.twitter.com/T0AG8bwI8t
">Pakistan wicketkeeper-batsman Mohammad Rizwan breaks into the top 10 of the @MRFWorldwide ICC Men's T20I Player Rankings for batting 👏
— ICC (@ICC) July 21, 2021
Full list: https://t.co/77cLFa815E pic.twitter.com/T0AG8bwI8tPakistan wicketkeeper-batsman Mohammad Rizwan breaks into the top 10 of the @MRFWorldwide ICC Men's T20I Player Rankings for batting 👏
— ICC (@ICC) July 21, 2021
Full list: https://t.co/77cLFa815E pic.twitter.com/T0AG8bwI8t
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 2 ಅರ್ಧಶತಕಗಳ ಸಹಿತ 176 ರನ್ಗಳಿಸಿದ್ದ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಮೊದಲ ಬಾರಿಗೆ ಅಗ್ರ 10ಕ್ಕೆ ಪ್ರವೇಶಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಮಿಂಚಿದ್ದ ಎವಿನ್ ಲೂಯಿಸ್ 8ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಒಂದು ವರ್ಷದ ನಿಷೇಧದಿಂದ ಮರಳಿರುವ ಬಾಂಗ್ಲಾದೇಶದ ಆಲ್ರೌಂಡರ್ ಶಕಿಬ್ ಅಲ್ ಹಸನ್ 9 ಸ್ಥಾನಗಳ ಏರಿಕೆ ಕಂಡು 8ನೇ ಶ್ರೇಯಾಂಕ ಪಡೆದಿದ್ದಾರೆ. ಟ್ರೆಂಟ್ ಬೌಲ್ಟ್ ಮೋದಲ ಸ್ಥಾನದಲ್ಲಿ ಮುಂದುವರಿದರೆ, ಮುಜೀಬ್ 2ರಲ್ಲಿ, ಕ್ರಿಸ್ ವೋಕ್ಸ್ 3ನೇ ಸ್ಥಾನದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ(6) ಅಗ್ರ 10 ರಲ್ಲಿ ಕಾಣಿಸಿಕೊಂಡಿರುವ ಏಕೈಕ ಭಾರತೀಯ ಬೌಲರ್ ಆಗಿದ್ದಾರೆ.
ಇದನ್ನೂ ಓದಿ: ಸ್ಟಾರ್ಕ್ ಮಾರಕ ದಾಳಿ: 133 ರನ್ಗಳ ಅಂತರದಿಂದ ವಿಂಡೀಸ್ ಮಣಿಸಿದ ಆಸ್ಟ್ರೇಲಿಯಾ