ETV Bharat / sports

ICC ODI World Cup 2023: ದಕ್ಷಿಣ ಆಫ್ರಿಕಾ ರನ್‌ ಮಳೆಯಲ್ಲಿ ಕೊಚ್ಚಿ ಹೋದ ಲಂಕಾ; ವಿಶ್ವಕಪ್​ನಲ್ಲಿ ಹರಿಣಗಳ ಶುಭಾರಂಭ

ICC ODI World Cup 2023: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಯ ರನ್ ಹೊಳೆ ಹರಿಸಿದ ದಕ್ಷಿಣ ಆಫ್ರಿಕಾ ತಂಡವು ಶ್ರೀಲಂಕಾ ವಿರುದ್ಧ 102 ರನ್‌ಗಳ ಭರ್ಜರಿ ವಿಜಯ ಸಾಧಿಸಿತು.

ICC ODI World Cup 2023
ICC ODI World Cup 2023
author img

By ETV Bharat Karnataka Team

Published : Oct 7, 2023, 2:05 PM IST

Updated : Oct 8, 2023, 7:23 AM IST

ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಮಧ್ಯೆ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 4ನೇ ಪಂದ್ಯದಲ್ಲಿ ರನ್ ಮಳೆ ಸುರಿಯಿತು. ದಕ್ಷಿಣ ಆಫ್ರಿಕಾ 428 ರನ್ ಬಾರಿಸಿದ್ರೆ, ಶ್ರೀಲಂಕಾ ದಿಟ್ಟ ಪ್ರತಿರೋಧ ತೋರಿ 328 ರನ್​ ಬಾರಿಸಿ 102 ರನ್‌ಗಳಿಂದ ಸೋಲನುಭವಿಸಿತು. ಈ ಮೂಲಕ ದಾಖಲೆಯ ಜಯದೊಂದಿಗೆ ವಿಶ್ವಕಪ್​ ಟೂರ್ನಿಯಲ್ಲಿ ಹರಿಣ ತಂಡ ಶುಭಾರಂಭ ಮಾಡಿತು.

ಇದಕ್ಕೂ ಮುನ್ನ, ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್‌ಗಿಳಿದ ಹರಿಣ ಟೀಂ ಸದಸ್ಯರು ಆರಂಭದಿಂದಲೇ ಸ್ಫೋಟಕ ರನ್‌ ಗಳಿಕೆಗೆ ಮುಂದಾದರು. ಇದರ ಫಲವಾಗಿ ನಿಗದಿತ 50 ಓವರ್​ಗಳಲ್ಲಿ 428 ರನ್‌ಗಳ ಬೃಹತ್‌ ಗುರಿ ನೀಡಿತು.

ಅಸಾಧಾರಣ ಗುರಿ ಬೆನ್ನಟ್ಟಿದ ಸಿಂಹಳೀಯರು ಕೂಡ ಪೈಪೋಟಿ ನೀಡುವ ಸೂಚನೆ ನೀಡಿದರು. ಆರಂಭಿಕರು ಬೇಗನೆ ಕುಸಿದರೂ ಕುಶಾಲ್ ಮೆಂಡಿಸ್ 76, ಚರಿತ ಅಸಲಂಕಾ 79, ಮತ್ತು ದಸುನ್ ಶನಕಾ 68 ರನ್ ಬಾರಿಸಿದರು. ಆದರೆ, ಅಂತಿಮವಾಗಿ ತಂಡ 44.5 ಓವರ್‌ಗಳಲ್ಲಿ 326 ರನ್ ಗಳಿಸಿ ಸೋಲೊಪ್ಪಿಕೊಂಡಿತು.

  • ✅ The fastest century in Men's World Cup history
    ✅ The highest innings total in Men's World Cup history

    All the records to fall from South Africa's outstanding #CWC23 performance against Sri Lanka ⬇https://t.co/hdvzlibvgf

    — ICC (@ICC) October 7, 2023 " class="align-text-top noRightClick twitterSection" data=" ">

ದಕ್ಷಿಣ ಆಫ್ರಿಕಾ ರನ್ ಸುರಿಮಳೆ: ವಿಶ್ವಕಪ್ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ದಕ್ಷಿಣ ಆಫ್ರಿಕಾ ಬೃಹತ್​ ಮೊತ್ತ ಪೇರಿಸಿತು. ನಿಗದಿತ ಓವರ್‌ಗಳಲ್ಲಿ 5 ವಿಕೆಟ್​ ಕಳೆದುಕೊಂಡ ಟೆಂಬಾ ಬವುಮಾ‌ ಬಳಗ ರನ್‌ ಶಿಖರವನ್ನೇ ನಿರ್ಮಿಸಿತು.

ಆರಂಭಿಕರಾದ ಕ್ವಿಂಟನ್ ಡಿ ಕಾಕ್ (100), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (108) ಮತ್ತು ಐಡೆನ್ ಮಾರ್ಕ್ರಾಮ್ (106) ಭರ್ಜರಿ ಶತಕ ಸಿಡಿಸಿ ತಂಡದ ಮೊತ್ತವನ್ನು 428 ಗಡಿಗೆ ತಂದು ನಿಲ್ಲಿಸಿದರು. ಇದು ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ ತಂಡವೊಂದರ ಅತ್ಯಧಿಕ ಮೊತ್ತವಾಗಿದೆ.

ಟೆಂಬಾ ಬವುಮಾ 8 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಈ ಆಘಾತದಿಂದ ಚೇತರಿಸಿಕೊಂಡ ಹರಿಣಗಳು, ಬಳಿಕ ರನ್​ಗಳ ಕೋಟೆಯನ್ನೇ ಕಟ್ಟಿದರು. ಎರಡನೇ ವಿಕೆಟ್‌ಗೆ ಜೊತೆಯಾದ ಕ್ವಿಂಟನ್ ಡಿ ಕಾಕ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ನಿರೀಕ್ಷೆಗೂ ಮೀರಿ ತಂಡಕ್ಕೆ ಬಲ ತಂದುಕೊಟ್ಟರು. ಲಂಕಾ ಬೌಲರ್​ಗಳನ್ನು ಚೆಂಡಾಡಿದ ಈ ದಾಂಡಿಗರು ಕೆಲ ನಿಮಿಷಗಳಲ್ಲೇ ದ್ವಿಶತಕದ ಜೊತೆಯಾಟವನ್ನೂ ಪೂರೈಸಿದರು. 84 ಎಸೆತಗಳನ್ನು ಎದುರಿಸಿದ ಕ್ವಿಂಟನ್ ಡಿ ಕಾಕ್, ಭರ್ಜರಿ 3 ಸಿಕ್ಸ್​, 12 ಬೌಂಡರಿಗೊಂದಿಗೆ 100 ರನ್​ ಗಳಿಸಿ ಧನಂಜಯ ಡಿ ಸಿಲ್ವಾಗೆ ಕ್ಯಾಚಿತ್ತು ತಮ್ಮ ಆಟ ಕೊನೆಗೊಳಿಸಿದರೆ, 110 ಎಸೆತಗಳನ್ನು ಎದುರಿಸಿದ ಡಸ್ಸೆನ್‌, ಭರ್ಜರಿ 2 ಸಿಕ್ಸ್​, 13 ಬೌಂಡರಿಗಳ ಸಹಿತ 108 ರನ್​ ಕಲೆ ಹಾಕಿ ತಂಡಕ್ಕೆ ವರದಾನವಾದರು. ಈ ವೇಳೆ ಕ್ರೀಸ್‌ನಲ್ಲಿ ಒಂದಾದ ಮರ್ಕ್ರಾಮ್‌ ಮತ್ತು ಕ್ಲಾಸೆನ್‌ ಮೈದಾನದಲ್ಲಿ ಮತ್ತಷ್ಟು ರನ್​ಗಳ ಸುರಿಮಳೆಗರೆದರು. ಕೇವಲ 54 ಎಸೆತಗಳನ್ನು ಎದುರಿಸಿದ ಮರ್ಕ್ರಾಮ್‌, ಭರ್ಜರಿ 3 ಸಿಕ್ಸ್​, 14 ಬೌಂಡರಿಗೊಂದಿಗೆ 106 ರನ್​ ಗಳಿದರು.

20 ಬಾಲ್​ಗಳನ್ನು ಆಡಿದ ಕ್ಲಾಸೆನ್‌, ಭರ್ಜರಿ 3 ಸಿಕ್ಸ್​, 1 ಬೌಂಡರಿ ಸಹಿತ 32 ರನ್​ ಗಳಿಸಿದರು. ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್ ಔಟಾಗದೇ ಕ್ರಮವಾಗಿ 39 ಹಾಗೂ 12 ರನ್​ ಗಳಿಸಿ ತಮ್ಮ ಕಾಣಿಕೆ ನೀಡಿದರು. ಲಂಕಾ ಪರ ದಿಲ್ಶನ್ ಮಧುಶಂಕ ಎರಡು ವಿಕೆಟ್​ ಪಡೆದರೆ, ಕಸುನ್ ರಾಜಿತ, ಮಥೀಶ ಪತಿರಾನ ಹಾಗೂ ದುನಿತ್ ವೆಲ್ಲಲಾಗೆ ತಲಾ ಒಂದೊಂದು ವಿಕೆಟ್​ ಪಡೆದರು.

ದಕ್ಷಿಣ ಆಫ್ರಿಕಾ ಪರ ಮಾರ್ಕೋ ಜನ್ಸೆನ್, ರಬಾಡ್, ಕೇಶವ್ ಮಹಾರಾಜ್ ತಲಾ 2 ವಿಕೆಟ್ ಪಡೆದರೆ, ಗೆರಾಲ್ಡ್ ಕೊಜಿ 3 ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್ ವಿವರ:

ದಕ್ಷಿಣ ಆಫ್ರಿಕಾ: 428 /5

ಶ್ರೀಲಂಕಾ: 326

ಇದನ್ನೂ ಓದಿ: Cricket World Cup: ನಾಳೆ ಭಾರತ- ಆಸೀಸ್​ ನಡುವೆ ಪಂದ್ಯ.. ಬಿಗ್​ ಮ್ಯಾಚ್​ಗೆ ಚೆಪಾಕ್​ ಕ್ರೀಡಾಂಗಣ ಭರ್ತಿ ನಿರೀಕ್ಷೆ

Last Updated : Oct 8, 2023, 7:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.