ದುಬೈ : ಟಿ 20 ವಿಶ್ವಕಪ್ 2021ರ ಸೂಪರ್ 12 ಸುತ್ತಿನ ಎರಡನೇ ದಿನವಾದ ಇಂದು ಮೊದಲ ಪಂದ್ಯದಲ್ಲಿ ಶ್ರಿಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಶಾರ್ಜಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಬಾಂಗ್ಲಾ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದ್ದು, ಲಂಕಾ ತಂಡಕ್ಕೆ 172ರನ್ಗಳ ಟಾರ್ಗೆಟ್ ನೀಡಿದೆ. ಬಾಂಗ್ಲಾ ಪರ ಓಪನರ್ ಆಗಿ ಕಣಕ್ಕಿಳಿದ ಲಿಟನ್ ದಾಸ್ ಮತ್ತು ಮೊಹಮ್ಮದ್ ನೈಮ್ ತಂಡಕ್ಕ ಉತ್ತಮ ಅಡಿಪಾಯ ಹಾಕಿ ಕೊಟ್ಟರು. ಈ ಜೋಡಿ 5.5 ಓವರ್ಗಳಲ್ಲಿ 40 ರನ್ಗಳಿಸಿತು. 16 ರನ್ ಗಳಿಸಿದ್ದಾಗ ಲಿಟನ್ ದಾಸ್, ಲಹಿರು ಕುಮಾರಗೆ ವಿಕೆಟ್ ಒಪ್ಪಿಸಿದರು.
-
Bangladesh end up with a score of 171/4.
— T20 World Cup (@T20WorldCup) October 24, 2021 " class="align-text-top noRightClick twitterSection" data="
Will their bowlers defend this? #T20WorldCup | #SLvBAN | https://t.co/msiJ66VBxr pic.twitter.com/w38HCvsHxD
">Bangladesh end up with a score of 171/4.
— T20 World Cup (@T20WorldCup) October 24, 2021
Will their bowlers defend this? #T20WorldCup | #SLvBAN | https://t.co/msiJ66VBxr pic.twitter.com/w38HCvsHxDBangladesh end up with a score of 171/4.
— T20 World Cup (@T20WorldCup) October 24, 2021
Will their bowlers defend this? #T20WorldCup | #SLvBAN | https://t.co/msiJ66VBxr pic.twitter.com/w38HCvsHxD
ನಂತರ ಬಂದ ಶಕೀಬ್ ಅಲ್ ಹಸನ್ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 10 ರನ್ಗಳಿಸಿ ಔಟಾದರು. ನಂತರ ಬಂದ ಅನುಭವಿ ಬ್ಯಾಟರ್ ಮುಷ್ಫಿಕರ್ ರಹೀಮ್, ಮೊಹಮ್ಮದ್ ನೈಮ್ ಜೊತೆ ಸೇರಿ ಉತ್ತಮ ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತು. ಮೊಹಮ್ಮದ್ ನೈಮ್ 62 ರನ್ಗಳಿಸಿ ಫರ್ನಾಂಡೊಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಅಫೀಫ್ ಹೊಸೇನ್ ಕೇವಲ 7 ರನ್ಗಳಿಸಿ ನಿರ್ಗಮಿಸಿದರು. ಆ ನಂತರ ಬಂದ ನಾಯಕ ಮಹ್ಮದುಲ್ಲಾ 10* ರನ್ಗಳಿಸಿ ತಂಡಕ್ಕೆ ತಮ್ಮದೆ ಆದ ಕೊಡುಗೆ ನೀಡಿದರು. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ರಹೀಮ್ (57)* ಅಂತಿಮ ಹಂತದವರೆಗೂ ತಂಡಕ್ಕೆ ನೇರವಾದರು.
ಇನ್ನೂ ಶ್ರೀಲಂಕಾ ಪರ ಫರ್ನಾಂಡೊ, ಲಹಿರು ಕುಮಾರ, ಚಮಿಕ ಕರುಣರತ್ನೆ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.